ದೇಶದ ಎಲ್ಲಾ ಪಡಿತರ ಚೀಟಿದಾರರಿಗೂ ಕೂಡ ಸರ್ಕಾರ ಪಡಿತರ ಚೀಟಿಯೊಂದಿಗೆ ಸದಸ್ಯರೆಲ್ಲರ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎನ್ನುವ ನಿಯಮ ಹೇರಿತ್ತು. ಈ ಸೂಚನೆ ನೀಡಿ ವರ್ಷವೇ ಆಗಿದೆ ಹಾಗೂ ಡಿಸೆಂಬರ್ 2022 ಒಳಗೆ ಮಾಡಿಸಬೇಕು ಇದಕ್ಕೆ ಗಡುವನ್ನು ಕೂಡ ನೀಡಿತ್ತು. ಆದರೆ ಜನಸಾಮಾನ್ಯರಿಗೆ ಇದರ ಮಾಹಿತಿ ಕೊರತೆ ಇದೆ ಎನ್ನುವುದನ್ನು ಅರಿತ ಸರಕಾರ ದೇಶದ ಜನರಿಗಾಗಿ ಮತ್ತೊಮ್ಮೆ ಮಾರ್ಚ್ 31ರವರೆಗೆ ಆ ಅವಧಿಯನ್ನು ವಿಸ್ತರಿಸಿತು.
ಈಗಾಗಲೇ ಸಾಕಷ್ಟು ಬಾರಿ ಸರ್ಕಾರ ಜಾಹೀರಾತುಗಳ ಮೂಲಕ ಮಾರ್ಚ್ 31ರ ಒಳಗೆ ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಇಲ್ಲದಿದ್ದರೆ ಅಂತಹ ರೇಷನ್ ಕಾರ್ಡ್ ಗಳು ರದ್ದಾಗಲಿವೆ ಎನ್ನುವ ಕಠಿಣ ವಾರ್ನಿಂಗ್ ಕೂಡ ನೀಡಿತ್ತಾದರೂ ಇನ್ನು ಅನೇಕರು ಈ ಕಾರ್ಯ ಮಾಡಿಲ್ಲ.
ಒನ್ ನೇಷನ್ ಒನ್ ರೇಷನ್ ಅಂತಹ ಮಹತ್ತರ ಯೋಜನೆಗಳನ್ನು ಕೈಗೊಂಡಿರುವ ಸರ್ಕಾರ ಪಡಿತರ ಚೀಟಿ ಮೂಲಕ ಜನಸಾಮಾನ್ಯರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ತಲುಪಿಸಬೇಕು ಎನ್ನುವ ಮಹಾಭಿಲಾಷೆ ಹೊಂದಿದೆ. ಉಚಿತ ಪಡಿತರದೊಂದಿಗೆ ಇನ್ನು ಅನೇಕ ಕಾರಣಕ್ಕಾಗಿ ರೇಷನ್ ಕಾರ್ಡ್ ಅನುಕೂಲಕ್ಕೆ ಬರುತ್ತದೆ. ಸರ್ಕಾರದ ಹಲವು ಯೋಜನೆಗಳಲ್ಲಿ ಫಲಾನುಭವಿಗಳು ಆಗಬೇಕು ಎಂದರೆ ಕೇಳುವ ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದು ಅಗತ್ಯ ಮಾನದಂಡವಾಗಿ ಮಾನ್ಯ ಆಗಿದೆ.
ಇಷ್ಟೆಲ್ಲಾ ಪ್ರಾಮುಖ್ಯತೆ ರೇಷನ್ ಕಾರ್ಡಿಗೆ ಇರುವುದರಿಂದ ರೇಷನ್ ಕಾರ್ಡ್ ಅಲ್ಲಿ ಇರುವ ನಕಲು ಸದಸ್ಯರನ್ನು ಗುರುತಿಸುವ ಸಲುವಾಗಿ ಹಾಗೂ ನಕಲಿ ರೇಷನ್ ಕಾರ್ಡ್ ಗಳನ್ನು ಗುರುತಿಸುವ ಉದ್ದೇಶದಿಂದ ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಸರ್ಕಾರ ಹೇಳಿತ್ತು ಆದರೂ ಇನ್ನು ಸಹ ಆನೇಕರು ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲ.
ಈ ಬಾರಿ ಕೊನೆಯ ಅವಕಾಶವಾಗಿ ಜುಲೈ 30ರವರೆಗೆ ಸರ್ಕಾರ ಈ ಅವಧಿಯನ್ನು ಹೆಚ್ಚಳ ಮಾಡಿದೆ, ಒಂದು ವೇಳೆ ಜುಲೈ 30ರ ಒಳಗೆ ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಹೋದಲ್ಲಿ ಸರ್ಕಾರ ಅಂತಹ ಕಾರ್ಡ್ ಗಳು ಖಂಡಿತವಾಗಿ ರದ್ದು ಮಾಡಲಿದೆ ಮತ್ತು ಅವರಿಗೆ ನೀಡಲಾಗುತ್ತಿರುವ ಉಚಿತ ಪಡಿತರ ವ್ಯವಸ್ಥೆಯನ್ನು ತಡೆ ಹಿಡಿಯಲಿದೆ.
ಹಾಗಾಗಿ ಈ ಕೂಡಲೇ ನೀವು ನಿಮ್ಮ ಪಡಿತರ ಚೀಟಿ ಅಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಜೊತೆ ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳುವ ಮೂಲಕ ಮಾಹಿತಿ ಹೆಚ್ಚಿನ ಜನರಿಗೂ ತಲುಪುವಂತೆ ಮಾಡಿ.
ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಈಗ ಬಹಳ ಸುಲಭ ಆಗಿದ್ದು ರಾಜ್ಯದ ಅಧಿಕೃತ PDS ಕೇಂದ್ರಗಳಿಗೆ ಭೇಟಿ ಕೊಟ್ಟು ನಿಮ್ಮ ದಾಖಲೆಗಳು ಹಾಗೂ ಮೊಬೈಲ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ಮಾಹಿತಿ ಅವರಿಗೆ ನೀಡುವ ಮೂಲಕ ಸ್ಥಳದಲ್ಲಿಯೇ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು. ರೇಷನ್ ಕಾರ್ಡಿನ ಈ ಹೊಸ ನವೀಕರಣವನ್ನು ತಪ್ಪದೆ ಮಾಡಿಸಿ ಸರ್ಕಾರದ ಯೋಚನೆಗಳ ಫಲಾನುಭವಿಗಳಾಗಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ.