ಉಚಿತ ಶೌಚಾಲಯ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಸರ್ಕಾರದಿಂದ ಸಿಗಲಿದೆ 12 ಸಾವಿರ ಸಹಾಯಧನ

ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯವನ್ನು ನಿರ್ಮಿಸಲು ಸರ್ಕಾರವು ಆರ್ಥಿಕ ಸಹಾಯವಾಗಿ ರೂ. 12 ಸಾವಿರಗಳ ಸಹಾಯಧನ ವನ್ನು ನೀಡುತ್ತದೆ. ಹಾಗಿದ್ದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಬಯಸುವವರು ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಯೋಜನೆ ಅಡಿಯಲ್ಲಿ ರೂ.12 ಸಾವಿರಗಳ ಸಹಾಯಧನವನ್ನು ಪಡೆಯಲು ಹೇಗೆ ಅರ್ಜಿ ಸಲ್ಲಿಸುವುದು? ಅದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳು ಯಾವುವು? ಎಂಬ ಮಾಹಿತಿಯನ್ನು ಇಲ್ಲಿ ತಿಳಿಸುತ್ತಿದ್ದೇವೆ.

WhatsApp Group Join Now
Telegram Group Join Now

ದೇಶದಾದ್ಯಂತ ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ‌ಗ್ರಾಮೀಣ ಪ್ರದೇಶಗಳ ಪ್ರತಿ ಮನೆಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಿಸಬೇಕು ಎಂಬ ಉದೇಶದಿಂದ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಿಸುವವರಿಗೆ ರೂ. 12 ಸಾವಿರಗಳ ಆರ್ಥಿಕ ಸಹಾಯ ಮಾಡುವ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿದೆ. ಈ ಯೋಜನೆಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದು.

ಶೌಚಾಲಯ ನಿರ್ಮಿಸಲು ಅನುದಾನ ಪಡೆಯಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ನೀವು ಗ್ರಾಮಾಂತರ ಪ್ರದೇಶದಂತಹ ಹಳ್ಳಿಯವರಾಗಿದ್ದರೆ ಗ್ರಾಮದ ಪಂಚಾಯಿತಿ ಅಥವಾ ಪುರಸಭೆ ಅಥವಾ ನಗರ ಸಭೆ ಮುಖ್ಯಸ್ಥರ ಸಂಬಂಧಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಡನೆ ಅರ್ಜಿ ಸಲ್ಲಿಸಬೇಕು.

ಶೌಚಾಲಯ ನಿರ್ಮಿಸಲು ಅನುದಾನ ಪಡೆಯಲು ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

1. ಮೊದಲು ಸ್ವಚ್ಛ ಭಾರತ ಮಿಷನ್ (ಗ್ರಾಮಿಣ) ಎಂಬ ಅಧಿಕೃತ ವೆಬ್‌ಸೈಟ್ ತೆರೆಯಬೇಕು.

2. ಇದರ ನಂತರ , IHLL ಅರ್ಜಿ ನಮೂನೆ ಮೇಲೆ ಕ್ಲಿಕ್ ಮಾಡಿ ನಂತರ ಲಾಗಿಲ್ ಪೇಜ್ ನಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕು ಮತ್ತು ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ.

3. ನೋಂದಣಿ ಪೂರ್ಣಗೊಂಡ ನಂತರ, ಬಳಕೆದಾರ ಐಡಿ ಮತ್ತು ಪಾಸ್‌ಪೋರ್ಟ್ ಲಾಗಿನ್ ಪಾಸ್‌ವರ್ಡ್ ಅನ್ನು ಪಡೆಯಲಾಗುತ್ತದೆ.
ಲಾಗಿನ್ ಆದ ನಂತರ, ನಿಮ್ಮ ಫಾರ್ಮ್ ನಿಮ್ಮ ಮುಂದೆ ತೆರೆಯುತ್ತದೆ, ಅದರಲ್ಲಿ ನೀವು ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

4. ಅದರಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು, ಯಾವುದೇ ತಪ್ಪು ಮಾಡಬಾರದು
ಯಾವ ಆಧಾರ್ ಸಂಖ್ಯೆಯನ್ನು ನಮೂದಿಸುತ್ತೀರಿ ಮ‌ತ್ತು ಯಾವುದೇ ಖಾತೆಯನ್ನು ನಮೂದಿಸಿದರೂ ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿರಬೇಕು ಆಧಾರ್ ಲಿಂಕ್ ಆಗಿಲ್ಲದಿದ್ದರೆ ಅಂತಹವರು ಸಬ್ಸಿಡಿ ಮೊತ್ತವನ್ನು ಪಡೆಯದೇ ಇರಬಹುದು.

5. ನಂತರ ಸ್ವಂತ ಫೋಟೋ ಮತ್ತು ಬ್ಯಾಂಕ್ ಪಾಸ್‌ಬುಕ್‌ನ ಫೋಟೋ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಅಪ್‌ಲೋಡ್ ಯಶಸ್ಸಿನ ನಂತರ ರೆಜಿಸ್ಟಾರ್ ಬಟನ್ ಕ್ಲಿಕ್ ಮಾಡಿ ಮತ್ತು ಯಶಸ್ವಿಯಾಗಿ ಸಲ್ಲಿಸಿದ್ದಲ್ಲಿ ಅರ್ಜಿ ಹಾಕುವ ಕಾರ್ಯ ಪೂರ್ಣಗೊಳ್ಳುತ್ತದೆ.

ಈ ಯೋಜನೆ ಅಡಿ ಸೌಲಭ್ಯ ಪಡೆಯಲು ಒದಗಿಸಬೇಕಾದಂತಹ ದಾಖಲೆಗಳು ಈ ಕೆಳಕಂಡಂತೆ ಇವೆ.
ಅರ್ಜಿದಾರರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ಪಾಸ್ ಬುಕ್ , ಪಾಸ್ಪೋರ್ಟ್ ಗಾತ್ರದ ಫೋಟೋಮಹಮಗ, ಮೊಬೈಲ್ ನಂಬರ್, ಇಮೇಲ್ ಐಡಿ, ಗುರುತಿನ ಚೀಟಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now