ಸರ್ಕಾರದಿಂದ ದ್ವಿಚಕ್ರ ವಾಹನ ವಿತರಣೆ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

ನಮ್ಮ ನಡುವೆ ಸಾಮಾನ್ಯರಂತೆ ವಿಶೇಷ ಚೇತನರು ಕೂಡ ಇದ್ದಾರೆ. ಅನಾರೋಗ್ಯ ಅಥವಾ ಅಪಘಾತದ ಕಾರಣದಿಂದ ಅಥವಾ ಹುಟ್ಟಿದಾಗಲಿಂದಲೂ ಕೂಡ ಈ ರೀತಿ ಅಂಗವೈಫಲ್ಯ ಹೊಂದಿರುವ ವಿಕಲಚೇತನರಿಗೂ ಕೂಡ ನಮ್ಮೊಂದಿಗೆ ಸ್ವತಂತ್ರರಾಗಿ ಬದುಕುವ ಹಕ್ಕಿದೆ. ನಾಲ್ಕು ಗೋಡೆಗಳ ಮಧ್ಯೆ ಅವರು ಬದುಕು ಮುಗಿದು ಹೋಗಬಾರದು ಎನ್ನುವ ಉದ್ದೇಶದಿಂದ ಸರ್ಕಾರವು ನಾನಾ ಯೋಜನೆಗಳ ಮೂಲಕ ಅವರ ನೆರವಿಗೆ ನಿಂತು ಅವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢನಾಗಿ ಮಾಡಲು ಶ್ರಮಿಸುತ್ತಿದೆ.

WhatsApp Group Join Now
Telegram Group Join Now

ಈಗಾಗಲೇ ವಿಕಲಚೇತನರಿಗೆ ಅನೇಕ ಸೌಲಭ್ಯಗಳು ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಸಿಗುತ್ತದೆ ಹಾಗೂ ಹಲವು ವಿಭಾಗಗಳಲ್ಲಿ ಇವರಿಗೆ ಮೀಸಲಾತಿಯನ್ನು ಕೂಡ ಕೊಡಲಾಗಿದೆ. ವಿಕಲಚೇತನರಿಗೆ ಸಾಮಾಜಿಕ ಭದ್ರತೆಯಡಿ ಮಾಸಿಕ ಪಿಂಚಣಿ, ವಿದ್ಯಾಭ್ಯಾಸ ಮಾಡುತ್ತಿರುವ ಸಮಯದಲ್ಲಿ ಹಲವು ಸಹಾಯಧನಗಳು ಜೊತೆಗೆ ಸರಕಾರಿ ಕ್ಷೇತ್ರದ ಉದ್ಯೋಗದಲ್ಲೂ ಕೂಡ ವಯಸ್ಸಿನ ಮಿತಿಯಲ್ಲಿ ಬಾರಿ ಸಡಿಲಿಕೆ ಇನ್ನು ಮುಂತಾದ ಅನೇಕ ಸೌಲಭ್ಯಗಳಿವೆ.

ಈಗಿನ ದಿನಗಳಲ್ಲಿ ವಿದ್ಯಾಭ್ಯಾಸದ ಕಾರಣಕ್ಕಾಗಿ ಅಥವಾ ಉದ್ಯೋಗ ಹರಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಇಂತಹ ಪರಿಸ್ಥಿತಿಗಳು ಬಂದಾಗ ವಿಕಲಚೇತನರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಅವರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡುವ ಮೂಲಕ ಸಹಾಯ ಮಾಡುತ್ತಿದೆ.

ಪ್ರತಿ ವರ್ಷವೂ ಕೂಡ ಹಿರಿಯ ನಾಗರಿಕ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯು ಅರ್ಜಿ ಸಲ್ಲಿಸಿದವರ ಆದ್ಯತೆ ಮೇರೆಗೆ ಪ್ರತಿ ಜಿಲ್ಲೆಯಲ್ಲೂ ಕೂಡ ಇರುವ ವಿಕಲಚೇತನನ್ನು ಗುರುತಿಸಿ ಅವರಿಗೆ ಈ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡುತ್ತಿವೆ. ಪ್ರಸ್ತುತವಾಗಿ 2024ನೇ ಸಾಲಿನಲ್ಲೂ ಕೂಡ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳ ಪೈಕಿ ಹದಿಮೂರು ಜನರಿಗೆ ಈ ಸೌಲಭ್ಯ ದೊರೆತಿದೆ.

ನೂತನ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಹಿರಿಯ ನಾಗರಿಕ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಸಚಿವೆ ಆಗಿದ್ದಾರೆ. ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಜೂನ್ 18ರಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು 2024ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನವನ್ನು ವಿತರಣೆ ಮಾಡಿದ್ದಾರೆ.

ಸರ್ಕಾರ ಪೂರೈಸಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸ್ವಾಭಿಮಾನಿಗಳಾಗಿ ಜೀವನ ನಡೆಸುವಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಸಮಯದಲ್ಲಿ ಸಲಹೆ ನೀಡಿದ್ದಾರೆ. ಭಾನುವಾರ ನಡೆದ ಈ ಕಾರ್ಯಕ್ರಮದಲ್ಲಿ ವಿಧಾನಸಭಾ ಪರಿಷತ್ ಸದಸ್ಯ ಚೆನ್ನಗಿರಿ ಹಟ್ಟಿಹೊಳಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್.ಆರ್, ಬೆಳಗಾವಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಮತ್ತಿತರರು ಹಾಜರಿದ್ದರು.

ಈ ರೀತಿ ಪ್ರತಿ ವರ್ಷವೂ ಕೂಡ ಯಂತ್ರಚಾಲಿತ ದ್ವಿಚಕ್ರ ವಾಹನಗಳು ಗಾಲಿಚಕ್ರಗಳ ವಿತರಣೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗುತ್ತದೆ. ಇವುಗಳ ಬಗ್ಗೆ ಸರ್ಕಾರ ನೋಟಿಫಿಕೇಶನ್ ಹೊರಡಿಸಿ ಮಾಹಿತಿ ತಲುಪಿಸುತ್ತಿದೆ. ಈ ಪ್ರಯೋಜನಗಳನ್ನು ಪಡೆದುಕೊಳ್ಳುವ ನಿರೀಕ್ಷೆ ಹೊಂದಿರುವವರು ಆಯಾ ಜಿಲ್ಲೆಗಳ ಕಚೇರಿಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಈ ವಿವರಕ್ಕಾಗಿ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಜಿಲ್ಲಾಡಳಿತ ಭವನದಲ್ಲಿ ಕೂಡ ಮಾಹಿತಿ ಪಡೆಯಬಹುದು ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ಗಳಲ್ಲಿ ಸರ್ಚ್ ಮಾಡುವ ಮೂಲಕ ಮಾಹಿತಿ ಪಡೆಯಬಹುದು ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now