Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇರುವ ಮನೆಯಲ್ಲೇ ಇದ್ದುಕೊಂಡು ಸ್ವ ಉದ್ಯೋಗ ಮಾಡಬಸುವ ಆದಾಯಕ್ಕಾಗಿ ಮತ್ತು ಕೌಶಲ್ಯಾಭಿವೃದ್ಧಿಗಾಗಿ ಯಾವುದಾದರೂ ಕೈ ಕಸುಬು ಕಲಿಯಲು ಇಚ್ಛೆ ಹೊಂದಿರುವ ಎಲ್ಲ ಹೆಣ್ಣು ಮಕ್ಕಳಿಗೆ ಗೃಹಿಣಿಯರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ.
ಅದೇನೆಂದರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ (PMVY) ಮಹಿಳೆಯರಿಗೆ ಉಚಿತವಾಗಿ ಹೋಲಿಗೆ ಯಂತ್ರ ವಿತರಣೆ (Sewing Machine) ಮಾಡಲಾಗುತ್ತಿದೆ. ಇದಕ್ಕೆ ಕೆಲವು ಕಂಡಿಶನ್ ಗಳಿದ್ದು ಈ ನಿಯಮಗಳನ್ನು ಪೂರೈಸುವಂತಹ ಮಹಿಳೆಯರು ಅರ್ಜಿ ಸಲ್ಲಿಸಿ ಸರ್ಕಾರದ ಈ ಅನುದಾನದ ನೆರವು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಕಂಡಿಷನ್ ಗಳು ಏನು? ಇತ್ಯಾದಿ ವಿವರ ಹೀಗಿದೆ ನೋಡಿ. ಎಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದರು.
ಈ ಸುದ್ದಿ ಓದಿ:- LIC ಸಂಸ್ಥೆಯಲ್ಲಿ ಉದ್ಯೋಗವಕಾಶ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 88,667/-
ಈ ಯೋಜನೆ ಮೂಲಕ 18ಕ್ಕೂ ಹೆಚ್ಚು ವಿಭಾಗದ ಕುಶಲಕರ್ಮಿಗಳಿಗೆ ತಮ್ಮ ಕೌಶಲ್ಯ ಅಭಿವೃದ್ಧಿಗೆ ಹಾಗೂ ಸ್ವ ಉದ್ಯೋಗ ಸ್ಥಾಪನೆಗೆ ತರಬೇತಿ ಮತ್ತು ಟೂಲ್ ಕಿಟ್ ( ಖರೀದಿಗೆ ಧನ ಸಹಾಯ) ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಯೋಜನೆಯ ಭಾಗವಾಗಿ ಇದರಲ್ಲಿ ಟೈಲರಿಂಗ್ ಕೂಡ ಸೇರಿದ್ದು.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸುವ ಮಹಿಳೆಯರಿಗೆ (Womens) ತರಬೇತಿ ಭತ್ಯೆ ಜೊತೆಗೆ ಉಚಿತ ತರಬೇತಿ, ಟೂಲ್ ಕಿಟ್ ಖರೀದಿಗೆ ರೂ.15,000 ದಲ್ಲಿ ಉಚಿತ ಟೈಲರಿಂಗ್ ಮೆಷಿನ್ ಹಾಗೂ ಸ್ವ ಉದ್ಯೋಗ ಸ್ಥಾಪನೆಗೆ ಶೇಕಡ 5% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ಮಹಿಳೆಯರು ಉಚಿತವಾಗಿ ಟೈಲರಿಂಗ್ ಮಿಷನ್ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಇರುವ ಕಂಡಿಷನ್ ಗಳು:-
* ಅರ್ಜಿ ಸಲ್ಲಿಸುವ ಮಹಿಳೆಯು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು
* ಅರ್ಜಿ ಸಲ್ಲಿಸುವ ಮಹಿಳೆ / ಮಹಿಳೆಯ ಕುಟುಂಬದಲ್ಲಿ ಯಾರು ಸರ್ಕಾರಿ ಉದ್ಯೋಗಿಗಳಾಗಿರಬಾರದು
* ಅರ್ಜಿ ಸಲ್ಲಿಸುವ ಮಹಿಳೆ ಅಥವಾ ಕುಟುಂಬದಲ್ಲಿ ಯಾರೊಬ್ಬರೂ ಕಳೆದ ಐದು ವರ್ಷಗಳಿಂದ ಸರ್ಕಾರ ಯಾವುದೇ ಸ್ವಯಂ ಉದ್ಯೋಗ ಯೋಜನೆಯಡಿ ಸಾಲ ಸೌಲಭ್ಯದ ನೆರವು ಪಡೆದಿರಬಾರದು
* ಒಂದು ಕುಟುಂಬದಿಂದ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ
* ಅರ್ಜಿ ಸಲ್ಲಿಸುವ ಮಹಿಳೆಯು ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ಸಲ್ಲಿಸಲು ಬದ್ಧರಾಗಿರಬೇಕು
ಬೇಕಾಗುವ ದಾಖಲೆಗಳು:-
* ಮಹಿಳೆಯ ಆಧಾರ್ ಕಾರ್ಡ್
* BPL ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಇತ್ತೀಚಿನ ಭಾವಚಿತ್ರ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ನೇರವಾಗಿ ಅರ್ಜಿ ಸಲ್ಲಿಸಬಹುದು
ಅಥವಾ
* ಹತ್ತಿರದಲ್ಲಿರುವ ಯಾವುದೇ CSC ಕೇಂದ್ರಗಳಿಗೆ ಹೋಗಿ ಈ ಮೇಲೆ ತಿಳಿಸಿದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಯೋಜನೆ ಕುರಿತ ಇನ್ನಷ್ಟು ಸಂಗತಿಗಳು:-
* ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದ ಮಹಿಳೆಯರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉಚಿತ ತರಬೇತಿ ಇರುತ್ತದೆ
* ಉಚಿತ ತರಬೇತಿ ಪೂರೈಸಿದ ಮಹಿಳೆಗೆ ಸರ್ಟಿಫಿಕೇಟ್ ನೀಡಿ ಟೈಲರಿಂಗ್ ಮಿಷನ್ ಖರೀದಿಗೆ ಧನ ಸಹಾಯ ಮಾಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ.