ಇನ್ಮುಂದೆ ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಮೋಜಿನಿ ಸೇವೆಗಳು. ಹದ್ದುಬಸ್ತು, 11E ಸ್ಕೆಚ್, ತತ್ಕಾಲ್ ಪೋಡಿ, ಭೂ ಪರಿವರ್ತನೆ ಅರ್ಜಿ ಎಲ್ಲ ಸೇವೆಗಳು ಗ್ರಾಮ ಪಂಚಾಯಿತಿಯಲ್ಲಿಯೇ.!

 

WhatsApp Group Join Now
Telegram Group Join Now

ಗ್ರಾಮ ಪಂಚಾಯಿತಿ (Grama panchayath) ವ್ಯಾಪ್ತಿಯಲ್ಲಿ ತೆರೆದಿರುವ ಬಾಪೂಜಿ ಸೇವ ಕೇಂದ್ರಗಳು (Bapuji seva kendra) ಹಳ್ಳಿ ಭಾಗದ ಜನರಿಗೆ ಸಾಕಷ್ಟು ಅನುಕೂಲತೆ ಮಾಡಿ ಕೊಡುತ್ತಿವೆ. ಇದರ ಜೊತೆಗೆ ಈಗ ಹೊಸದಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳು ಇದಕ್ಕೆ ಸೇರ್ಪಡೆಯಾಗುತ್ತಿದೆ.

ಇದುವರೆಗೂ ಕೂಡ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳಿಗಾಗಿ ರೈತರು ತಾಲೂಕು ಮಟ್ಟದ ತಹಶಿಲ್ದಾರ್ ಕಚೇರಿಗಳು ಅಥವಾ ಹೋಬಳಿ ಮಟ್ಟದ ಜನಸ್ನೇಹಿ ಕೇಂದ್ರಗಳಿಗೆ ಅಲೆಯಬೇಕಾಗಿತ್ತು. ಇದರಿಂದ ರೈತರ ಸಮಯ ಹಾಗೂ ಹಣ ವ್ಯರ್ಥವಾಗುತ್ತಿತ್ತು ಇದನ್ನು ತಪ್ಪಿಸಲು ಗ್ರಾಮ ಪಂಚಾಯಿತಿಗಳಲ್ಲಿಯೇ ಸೇವಾ ಕೇಂದ್ರಗಳನ್ನು ಸೇವೆಗಳನ್ನು ಒದಗಿಸಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (Rural development and Panchayath raj) ಇಲಾಖೆ ನಿರ್ಧಾರ ಮಾಡಿದೆ.

ಅಂಗನವಾಡಿ ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತರಿಗೆ ಕೂಡ ಗೃಹಲಕ್ಷ್ಮಿ ಯೋಜನೆ ಅನ್ವಯ.! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಅಧಿಕೃತ ಘೋಷಣೆ.!

ಇನ್ನು ಮುಂದೆ ಈಗಾಗಲೇ ಬಾಪೂಜಿ ಸೇವಾ ಕೇಂದ್ರದಿಂದ ಸಿಗುತ್ತಿರುವ ಸೇವೆಗಳ ಜೊತೆ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಿನಿ ಸೇವೆಗಳನ್ನು (Mojini services) ಕೂಡ ಪಡೆಯಬಹುದಾಗಿದೆ. 22ನೇ ಆಗಸ್ಟ್ 2023 ರಂದು ಮಾನ್ಯ ಮುಖ್ಯಮಂತ್ರಿಗಳು (CM) ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳಲ್ಲಿ ಇರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಭೂಮಾಪನ ಮತ್ತು ಭೂ ದಾಖಲೆ ಇಲಾಖೆಯ ಮೋಜಿನಿ ವ್ಯವಸ್ಥೆಯಲ್ಲಿ 11ಇ ನಕ್ಷೆ ,ಜಮೀನ್ ತತ್ಕಾಲ್ ಪೋಡಿ, ಭೂ ಪರಿವರ್ತನೆ ಮತ್ತು ಹದ್ದು ಬಸ್ತಿಗಾಗಿ ಅರ್ಜಿಯನ್ನು ವಿತರಿಸುವ ಯೋಜನೆಗೆ ಚಾಲನೆ ನೀಡಿದರು.

ಹಳ್ಳಿ ಭಾಗದ ಜನರು ಈ ರೀತಿ ಹೋಬಳಿ ಹಾಗೂ ತಾಲೂಕು ಭಾಗದ ಕಚೇರಿಗಳಿಗೆ ಹೋಗುವುದರಿಂದ ಜನಸಂದಣಿ ಹೆಚ್ಚಾಗುವುದು ಮತ್ತು ಅರ್ಜಿಗಳ ವಿಲೇವಾರಿ ನಿಧಾನಗತಿಯಲ್ಲಿ ಸಾಗುವುದು ಸರ್ವೇ ಸಾಮಾನ್ಯ ಸಮಸ್ಯೆಯಾಗಿತ್ತು. ಇದನ್ನು ತಪ್ಪಿಸುವ ಸಲುವಾಗ ಗ್ರಾಮ ಪಂಚಾಯಿತಿಯಲ್ಲಿ ಈ ರೀತಿ ಸೇವೆ ಒದಗಿಸಲು ತೀರ್ಮಾನಕ್ಕೆ ಬರಲಾಯಿತು ಎಂದು ನೂತನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕಾ ಖರ್ಗೆ (Minister Priyanka kharge) ಅವರು ಈ ಸಂದರ್ಭದಲ್ಲಿ ನುಡಿದಿದ್ದಾರೆ.

ಸ್ವಂತ ಕಾರು ಇದ್ದವರ BPL ಕಾರ್ಡ್ ರದ್ದು ಸದ್ಯಕ್ಕಿಲ್ಲ ಸ್ಪಷ್ಟನೆ ಕೊಟ್ಟ ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಮುನಿಯಪ್ಪ.!

ಸರ್ಕಾರದಲ್ಲಿ ಹೊಸ ನಿಯಮದಿಂದಾಗಿ ಗ್ರಾಮೀಣ ಪ್ರದೇಶಗಳ ಅಂದಾಜು 3.7 ಕೋಟಿ ಎಂದರೆ ಅಂದಾಜು 78 ಕೋಟಿ ಕುಟುಂಬಗಳು ತಮ್ಮ ಗ್ರಾಮದಲ್ಲಿಯೇ ಮೋಜಿನಿ ವ್ಯವಸ್ಥೆಗಳನ್ನು ಬಾಪೂಜಿ ಸೇವಾ ಕೇಂದ್ರದ ಮೂಲಕ ಪಡೆಯಲು ಅನುಕೂಲವಾಗುತ್ತಿದೆ.

ಇನ್ನು ಮುಂದೆ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಿಗುವ ಸೇವೆಗಳ ವಿವರಗಳು:-
● ಆಕ್ಯುಪೆನ್ಸಿ ಸರ್ಟಿಫಿಕೇಟ್
● ಕಟ್ಟಡ ನಿರ್ಮಾಣ ಲೈಸೆನ್ಸ್
● ನಮೂನೆ 9/11A
● ನಮೂನೆ 11B
● ಕೈಗಾರಿಕೆ ಅಥವಾ ಕೃಷಿ ಆಧಾರಿತ ಉತ್ಪಾದನೆ ಘಟಕ ಸ್ಥಾಪನೆಗೆ ಅನುಮತಿ ನಿರಪೇಕ್ಷಣಾ ಪತ್ರ
● ರಸ್ತೆ ಆಗೆಯುವುದಕ್ಕೆ ಅನುಮತಿ.

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

● ಹೊಸ ಅಥವಾ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ / ನಿಯಮಿತಗೊಳಿಸುವಿಕೆ
● ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು
● MGNREGA ಯೋಜನೆಯಡಿ ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡುವುದು

● RTC ಗೆ ಅರ್ಜಿ ಸಲ್ಲಿಸುವುದು
● ಜನ ಮತ್ತು ಮರಣ ಪ್ರಮಾಣ ಪತ್ರ ಪಡೆಯುವುದು
● ಇ-ಶ್ರಮ್ ಕಾರ್ಡಿಗೆ ವಿತರಣೆ
● 11ಇ ನಕ್ಷೆ
● ಭೂ ಪರಿವರ್ತನೆಗಾಗಿ ಅರ್ಜಿ
● ಜಮೀನಿನ ತಾತ್ಕಾಲ್ ಪೋಡಿಗಾಗಿ ಅರ್ಜಿ
● ಹದ್ದುಬಸ್ತು ಮತ್ತು ದುರಸ್ತಿ ಗಾಗಿ ಅರ್ಜಿ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now