ಸ್ವಂತ ಕಾರು ಇದ್ದವರ BPL ಕಾರ್ಡ್ ರದ್ದು ಸದ್ಯಕ್ಕಿಲ್ಲ ಸ್ಪಷ್ಟನೆ ಕೊಟ್ಟ ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಮುನಿಯಪ್ಪ.!

 

ವೈಟ್ ಬೋರ್ಡ್ ಕಾರ್ (white bord Car) ಹೊಂದಿರುವವರು BPL ರೇಷನ್ ಕಾರ್ಡ್ (Ration Card) ಅರ್ಜಿ ಹಾಕಲು ಅರ್ಹರಲ್ಲ ಎಂದು ಆಹಾರ ಸಚಿವರು (Food Minister) ಹೇಳಿಕೆ ಕೊಟ್ಟಿದ್ದರು ಇದಾದ ಬಳಿಕ ಈಗಾಗಲೇ BPL ರೇಷನ್ ಕಾರ್ಡ್ ಗಳನ್ನು ಹೊಂದಿರುವ ಕುಟುಂಬಗಳು ವೈಟ್ ಬೋರ್ಡ್ ವಾಹನಗಳನ್ನು ಖರೀದಿ ಮಾಡಿದ್ದರೂ ಅವುಗಳ ತನಿಖೆ ನಡೆಸಿ ಶೀಘ್ರವೇ ಅವುಗಳನ್ನು ರದ್ದುಪಡಿಸಲಾಗುತ್ತದೆ ಎನ್ನುವ ಸುದ್ದಿ ರಾಜ್ಯದಾದ್ಯಂತ ಹಬ್ಬಿತು.

ಆದರೆ ಈ ಬಗ್ಗೆ ಈಗ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (K.H Muniyappa) ಅವರೇ ಸ್ಪಷ್ಟತೆ ಕೊಟ್ಟಿದ್ದಾರೆ. ಇದರ ಜೊತೆಗೆ ಇನ್ನು ಅನೇಕ ವಿಷಯಗಳ ಬಗ್ಗೆ ಅವರು ಮಾಹಿತಿ ಕೊಟ್ಟಿದ್ದಾರೆ. ಕಳೆದ ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು BPL ಕಾರ್ಡ್ ರದ್ದು (Card Cancel) ಮಾಡುವ ಬಗ್ಗೆ ನಾವಿನ್ನು ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಸದ್ಯಕ್ಕೆ ನಮ್ಮ ಮುಂದೆ ಎರಡು ಜವಾಬ್ದಾರಿಗಳಿವೆ. ಈಗಾಗಲೇ 3ಲಕ್ಷ ಅರ್ಜಿಗಳು ರೇಷನ್ ಕಾರ್ಡ್ ಗಾಗಿ ಸಲ್ಲಿಕೆಯಾಗಿವೆ. ಅವು BJP ಸರ್ಕಾರ ಇದ್ದಾಗವೇ ಸಲ್ಲಿಕೆ ಆಗಿದ್ದ ಅರ್ಜಿಗಳು, ಅವುಗಳ ವಿತರಣೆ ಕಾರ್ಯ ನಡೆದಿಲ್ಲ. ಅದನ್ನು ಪೂರ್ತಿಗೊಳಿಸುವಂತೆ ನಮಗೆ ಸೂಚನೆ ಸಿಕ್ಕಿದೆ. ಅದರಂತೆ ರೇಷನ್ ಕಾರ್ಡ್ ಅರ್ಜಿಗಳ ಪರಿಶೀಲನೆ ನಡೆಸಿ APL / BPL ಕಾರ್ಡ್ ಗಳ ವಿತರಣೆ (Card distribution) ಮಾಡಿ ಅವರಿಗೆಲ್ಲ ಅಕ್ಕಿ ತಲುಪುವಂತೆ ಮಾಡಬೇಕು.

ಇದರ ಜೊತೆಗೆ ಅನ್ನ ಭಾಗ್ಯ ಯೋಜನೆಯ ಹೆಚ್ಚುವರಿ ಹಣವನ್ನು ತಲುಪಿಸುವ ಸಲುವಾಗಿ ಪಡಿತರ ಚೀಟಿದಾರರ ಖಾತೆಗಳನ್ನು ಲಿಂಕ್ (account link for Annabhagya money) ಮಾಡುವ ಕೆಲಸ ಬಾಕಿ ಇದೆ. ಯಾಕೆಂದರೆ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸರ್ಕಾರವು ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣವನ್ನು ಕುಟುಂಬದ ಮುಖ್ಯಸ್ಥರ (head of the family) ಖಾತೆಗೆ ವರ್ಗಾವಣೆ ಮಾಡುತ್ತಿದೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದೆ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ.? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

ದಾಸ್ತಾನು ಲಭ್ಯವಾಗುವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ ಇದನ್ನು ಪಡೆಯಲು ರಾಜ್ಯದ 1.2 ಕೋಟಿ ಪಡಿತರ ಚೀಟಿದಾರರು ಅರ್ಹರಾಗಿದ್ದರೂ 21 ಲಕ್ಷ ಪಡಿತರಚೀಟಿದಾರರ ಬ್ಯಾಂಕ್ ಖಾತೆಗಳು ರೇಷನ್ ಕಾರ್ಡಿಗೆ ಲಿಂಕ್ ಆಗದ ಕಾರಣ ಇವೆರೆಲ್ಲರೂ ಅದರಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಗಮನಹರಿಸಿರುವ ಇಲಾಖೆಯ ಅಧಿಕಾರಿಗಳು ಕಳೆದ ತಿಂಗಳಿನಲ್ಲಿ 14 ಲಕ್ಷ ಪಡಿತರ ಚೀಟಿದಾರರ ಮಾಹಿತಿಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವ ಕಾರ್ಯ ಮುಗಿಸಿದ್ದಾರೆ.

ಇನ್ನು ಉಳಿಕೆ 7 ಲಕ್ಷ ಕಾರ್ಡುಗಳ ಮಾಹಿತಿ ಕಲೆ ಹಾಕುವ ಕೆಲಸ ಮಾಡಬೇಕಾಗಿದೆ, ಅತ್ತ ಗಮನ ಕೊಡಲಿದ್ದೇವೆ. ನಮ್ಮ ಸರ್ಕಾರದ ಉದ್ದೇಶ ಯೋಜನೆ ಲಾಭಗಳನ್ನು ಜನರಿಗೆ ತಲುಪಿಸುವುದು ಹೊರತು ಕಾರ್ಡುಗಳನ್ನು ಕಡಿಮೆ ಮಾಡುವುದಲ್ಲ. ಆದರೆ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರು ಇನ್ನು ಕೆಲವು ದಿನ ಕಾಯಬೇಕಾಗುತ್ತದೆ, ಚುನಾವಣೆ ನೀತಿ ಸಂಹಿತೆ ಜಾರಿಗೆ ಇದ್ದ ಕಾರಣ ಇದನ್ನು ಸ್ಥಗಿತಗೊಳಿಸಲಾಗಿತ್ತು.

ಮನೆ ಬಾಡಿಗೆ ಕೊಟ್ಟಿರುವವರಿಗೆ ಮಹತ್ವದ ಸೂಚನೆ, ಕೋರ್ಟ್ ನಿಂದ ಬಂತು ಹೊಸ ಆದೇಶ ತಪ್ಪದೆ ಈ ಸುದ್ದಿ ನೋಡಿ.!

ಈಗಾಗಲೇ ಸಲ್ಲಿಕೆಯಾಗಿರುವ ರೇಷನ್ ಕಾರ್ಡ್ ಗಳ ವಿಲೇವಾರಿ ಕಾರ್ಯ ಮುಗಿಯುವವರೆಗೂ ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು (no permission for new ration card apply) ಅವಕಾಶ ಇಲ್ಲ.ಇದರ ಜೊತೆಗೆ BPL ರೇಷನ್ ಕಾರ್ಡ್ ಹೊಂದಿರುವವರು ವೈಟ್ ಬೋರ್ಡ್ ವಾಹನಗಳನ್ನು ಹೊಂದಿದ್ದರೆ ಅವರ ರೇಷನ್ ಕಾರ್ಡ್ ಗಳು ರದ್ದಾಗುತ್ತವೆ ಎನ್ನುವುದು ನಾವು ಮಾಡಿರುವುದಲ್ಲ 2016ರ BPL ರೇಷನ್ ಕಾರ್ಡ್ ಮನದಂಡಗಳಲ್ಲಿ ಇದೆ.

ಈಗಿನ ಕಾಲದಲ್ಲಿ ಅವಶ್ಯಕತೆಗಾಗಿ ಪ್ರತಿಯೊಬ್ಬರೂ ಕೂಡ ಸಣ್ಣ ಕಾರುಗಳನ್ನು ಹೊಂದಿರುತ್ತಾರೆ, ಈ ನಿಯಮದ ಬಗ್ಗೆ ಮರುಚಿಂತನೆ ಮಾಡಲು ಪ್ರಸ್ತಾಪವನ್ನು ಸರ್ಕಾರದ ಮುಂದಿಡಲಿದ್ದೇವೆ. ಈ ತಕ್ಷಣವೇ ಅವರ ಕಾರ್ಡ್ ಗಳನ್ನು ರದ್ದು ಮಾಡುತ್ತೇವೆ ಎಂದು ಹೇಳಿಲ್ಲ ಎನ್ನುವುದನ್ನು ಸಚಿವರು ತಿಳಿಸಿದ್ದಾರೆ.

Leave a Comment

%d bloggers like this: