ಕರ್ನಾಟಕ ರಾಜ್ಯದಲ್ಲಿ (Karnataka) ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ (Gruhajyothi Scheme) ಜುಲೈ 2023 ತಿಂಗಳಿನಿಂದ ಜಾರಿಯಲ್ಲಿದೆ. ಈಗ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಯವರು ಹೊಸ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು (PM Suryodaya Scheme) ಘೋಷಿಸಿ ದೇಶದ ಎಲ್ಲಾ ಕುಟುಂಬಗಳಿಗೂ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವುದು ಮಾತ್ರವಲ್ಲದೆ ಇಂಧನ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಜನವರಿ 22ರಂದು ಅಯೋಧ್ಯಾ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಬೆನ್ನಲ್ಲೇ ಪ್ರಧಾನ ಮಂತ್ರಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಜಗತ್ತಿನ ಎಲ್ಲ ಭಕ್ತರು ಸೂರ್ಯವಂಶಿ ಶ್ರೀರಾಮನ ಬೆಳಕಿನಿಂದ ಶಕ್ತಿಯನ್ನು ಪಡೆಯುತ್ತಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿ ಷ್ಠಾಪನೆಯಾಗಿರುವ ಈ ದಿನ, ಭಾರತೀಯರು ತಮ್ಮ ಮನೆಯ ಛಾವಣಿಗಳ ಮೇಲೆ ತಮ್ಮದೇ ಸೌರ ಫಲಕಗಳನ್ನು ಹೊಂದಿರಬೇಕೆಂಬ ನನ್ನ ನಿರ್ಣಯ ಇನ್ನೂ ಗಟ್ಟಿಯಾಗಿದೆ.
ಈ ಸುದ್ದಿ ನೋಡಿ:- ಚೀಟಿ ವ್ಯವಹಾರಕ್ಕೆ ಖಾಲಿ ಚೆಕ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ.? ಚೀಟಿ ವ್ಯಾವರ ಮಾಡೋರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!
ಅಯೋಧ್ಯೆಯಿಂದ ಮರಳಿದ ಬಳಿಕ ನಾನು ತೆಗೆದು ಕೊಂಡಿರುವ ಮೊದಲ ನಿರ್ಣಯವೇ ಸೂರ್ಯೋದಯ ಯೋಜನೆ ಯನ್ನು ಬಿಡುಗಡೆ ಮಾಡುವುದು. ಇದು ಕೇವಲ ಬಡವರ ಮನೆಯ ವಿದ್ಯುತ್ ದರಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಇಂಧನ ಕ್ಷೇತ್ರದಲ್ಲಿ ಭಾರತೀಯರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆಯೂ ಕೂಡ ಕೇಂದ್ರ ಸರ್ಕಾರದಿಂದ ಇದೇ ಮಾದರಿಯಲ್ಲಿ ಸೋಲಾರ್ ರೂಫ್ ಟಾಪ್ ಯೋಜನೆ (Solar roof top Scheme) ಜಾರಿಯಲ್ಲಿತ್ತು. ಸೂರ್ಯೋದಯ ಯೋಜನೆಯೂ ಕೂಡ ಅದನ್ನೇ ಹೊರತಿದ್ದು ಮನೆ ಚಾವಣಿಗಳ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು (Solar Panel) ಜೋಡಿಸಿ.
ಈ ಸುದ್ದಿ ನೋಡಿ:- ಮನೆ ಮಾಲೀಕರೆ ಎಚ್ಛರ, ಈ ನಿಯಮ ಪಾಲಿಸದೆ ಇದ್ದಲ್ಲಿ ಬಾಡಿಗೆದಾರರೇ ಮನೆ ಮಾಲೀಕರಾಗಿ ಬಿಡಬಹುದು…
ವಿದ್ಯುತ್ ಉತ್ಪಾದಿಸಿ ಕುಟುಂಬದ ಬಳಕೆಗೆ ವಿನಿಯೋಗಿಸಿಕೊಳ್ಳುವುದು ಹಾಗೂ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದ ಆದಾಯ ಹೊಂದುವುದಾಗಿದೆ. ಸೋಲಾರ್ ಪ್ಯಾನೆಲ್ ಅಳವಡಿಕೆಯ ಘಟಕ ವೆಚ್ಚಕ್ಕೆ ಸರ್ಕಾರವೇ ಸಬ್ಸಿಡಿ (Subsidy) ನೆರವು ಕೂಡ ಒದಗಿಸುತ್ತಿದೆ. ಯೋಜನೆ ಕುರಿತಾದ ಹೆಚ್ಚಿನ ವಿವರ ಹೇಗಿದೆ ನೋಡಿ
ಯೋಜನೆಯ ಹೆಸರು:- ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ.
ಯೋಜನೆಯ ಉದ್ದೇಶ:-
* 1 ಕೋಟಿ ಮನೆಗಳ ಛಾವಣಿಗಳ ಮೇಲೆ ಸೌರಫಲಕಗಳನ್ನು ಅಳವಡಿಸುವ ಗುರಿ.
* ಜನರ ಮೇಲಿನ ವಿದ್ಯುತ್ ದರ ಹೊರೆ ಯನ್ನು ತಗ್ಗಿಸುವುದು
* ಇಂಧನ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸುವುದು
ಸಬ್ಸಿಡಿ ವಿವರ:-
* ಘಟಕ ವೆಚ್ಚದ 40% ಸಬ್ಸಿಡಿ ಸಿಗಲಿದೆ
* 3kw ಸಾಮರ್ಥ್ಯದ ಸೌರಫಲಕ ಅಳವಡಿಕೆಗೆ 2.20 ಲಕ್ಷ ವೆಚ್ಚವಾಗಲಿದೆ ಅಂದಾಜು ತಿಂಗಳಿಗೆ 360 ಯೂನಿಟ್ ಅಷ್ಟು ವಿದ್ಯುತ್ ಉತ್ಪಾದನೆ ಆಗಲಿದೆ
* 5kw ಸಾಮರ್ಥ್ಯದ ಸೌರ ಫಲಕ ಅಳವಡಿಕೆಗೆ 3.5 ಲಕ್ಷ ಖರ್ಚಾಗಲಿದೆ.
* ಸಬ್ಸಿಡಿ ಹೊರತುಪಡಿಸಿ ಉಳಿದ 60% ಹಣವನ್ನು ಒಮ್ಮೆಲೆ ಪಾವತಿಸಲು ಸಾಧ್ಯವಾಗದ ಕುಟುಂಬಗಳಿಗೆ EMI ರೂಪದಲ್ಲಿ ಮಾಸಿಕವಾಗಿ ರೂ.4,000 ಅಥವಾ ರೂ.5,000 ಕಟ್ಟಲು ಅವಕಾಶ ಮಾಡಿಕೊಡಲಾಗುತ್ತಿದೆ.
ಈ ಸುದ್ದಿ ನೋಡಿ:- HDFC ಬ್ಯಾಂಕ್ ಸ್ಕಾಲರ್ಶಿಪ್ 75,000 ವಿದ್ಯಾರ್ಥಿ ವೇತನ ಪಡೆಯಿರಿ. 1 ನೇ ತರಗತಿಯಿಂದ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವವರು ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.!
* ಈ ಯೋಜನೆಯನ್ನು ಅಳವಡಿಸಿಕೊಳ್ಳುವ ಮೂಲಕ ವಾರ್ಷಿಕವಾಗಿ ಬಡ ಕುಟುಂಬವು ಕೂಡ 30 ರಿಂದ 40,000 ದವರೆಗೆ ವಿದ್ಯುತ್ ಶುಲ್ಕವಾಗಿ ಪಾವತಿ ಮಾಡುತ್ತಿದ್ದ ಹಣವನ್ನು ಉಳಿಸಬಹುದಾಗಿದೆ ಮತ್ತು ಹೆಚ್ಚುವರಿ ವಿದ್ಯುತ್ ಉತ್ಪಾದನೆಯನ್ನು ಮಾರಾಟ ಮಾಡುವ ಮೂಲಕ ನಿಶ್ಚಿತ ಆದಾಯವನ್ನು ಕೂಡ ಗಳಿಸಬಹುದಾಗಿದೆ. ಅತಿ ಶೀಘ್ರವಾಗಿ ಎಲ್ಲರಿಗೂ ತಲುಪಲಿದೆ.