ತುಂಬಾ ಜನರಿಗೆ ಈ ಒಂದು ಉಗುರು ಸುತ್ತಿನ ಸಮಸ್ಯೆ ಕಂಡುಬರುತ್ತದೆ ಕೆಲವರಿಗೆ ಉಗುರು ಸುತ್ತು ಕೈಗಳಲ್ಲಿ ಹಾಗೆ ಕಾಲುಗಳ ಬೆರಳುಗಳಲ್ಲಿ ಆಗಿರುತ್ತದೆ ಇದರಿಂದ ಅನೇಕ ತೊಂದರೆಗಳು ಉಂಟಾಗುತ್ತದೆ. ಈ ಸಮಸ್ಯೆ ಕಂಡು ಬಂದರೆ ಬೆರಳಿನ ಸುತ್ತ ಕೀವು ತುಂಬಿಕೊಳ್ಳುವುದು ಹಾಗೆಯೇ ನಂಜಾಗುವುದು ಕಾಲು ಊದಿಕೊಳ್ಳುವುದು ಈ ರೀತಿಯಾದಂತಹ ಸಮಸ್ಯೆಗಳು ಹಲವರಲ್ಲಿ ಕಂಡುಬರುತ್ತದೆ. ಈ ಒಂದು ಉಗುರು ಸುತ್ತಿನ ಸಮಸ್ಯೆಗೆ ಮುಖ್ಯವಾದಂತಹ ಕಾರಣ ಎಂದರೆ ನಾವು ಹೆಚ್ಚಾಗಿ ನಮ್ಮ ಕೈ ಬೆರಳುಗಳು ಅಥವಾ ಕಾಲು ಬೆರಳುಗಳನ್ನು ನೀರಿನಲ್ಲಿ ಇರಿಸುವುದು ಅಂದರೆ ಹೆಚ್ಚಾಗಿ ನೀರನ್ನು ಉಪಯೋಗಿಸಿ ಕೆಲಸ ಮಾಡುವುದರಿಂದ ಈ ಒಂದು ಉಗುರು ಸುತ್ತಿನ ಸಮಸ್ಯೆ ಕಂಡು ಬರುತ್ತದೆ. ಹೀಗೆ ಅನೇಕ ಕಾರಣಗಳಿಂದ ನಮ್ಮ ಉಗುರುಗಳಿಗೆ ಫಂಗಲ್ ಇನ್ಫೆಕ್ಶನ್ ಉಂಟಾಗಿ ಈ ಒಂದು ಸಮಸ್ಯೆ ಕಂಡು ಬರುತ್ತದೆ.
ಉಗುರು ಸುತ್ತು ಎಲ್ಲ ಚರ್ಮದವರಿಗೂ ಕೂಡ ಆಗುವುದಿಲ್ಲ ಇದು ಕೇವಲ ಮೃದು ಚರ್ಮವನ್ನು ಹೊಂದಿರುವಂತಹ ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಒಂದು ಸಮಸ್ಯೆಗೆ ಅನೇಕ ಜನರು ಆಸ್ಪತ್ರೆಗಳಿಗೆ ಹೋಗಿ ಅನೇಕ ರೀತಿಯಾದಂತಹ ಟ್ರೀಟ್ಮೆಂಟ್ ಗಳನ್ನು ತೆಗೆದುಕೊಳ್ಳುತ್ತಾರೆ ಈ ಒಂದು ಸಮಸ್ಯೆ ಆಸ್ಪತ್ರೆಗೆ ಹೋಗಿ ಬರಗೆ ಹರಿಸಿಕೊಳ್ಳುವಂತಹ ದೊಡ್ಡ ಸಮಸ್ಯೆ ಏನು ಅಲ್ಲ. ನಮ್ಮ ಮನೆಯಲ್ಲಿ ಇರುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ನಾವು ಈ ಒಂದು ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಈ ಉಗುರು ಸುತ್ತಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಇದಕ್ಕೆ ಬೇಕಾಗಿರುವಂತಹ ಮುಖ್ಯ ಸಾಮಗ್ರಿಗಳು ಈರುಳ್ಳಿ ರಸ, ಅಡುಗೆ ಸೋಡಾ ಹಾಗೆಯೇ ವಿನೇಗರ್.
ಮೊದಲಿಗೆ ನೀವು ಈರುಳ್ಳಿಯನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಅದರಿಂದ ರಸವನ್ನು ತೆಗೆದುಕೊಳ್ಳಿ ನಂತರ ಅದಕ್ಕೆ ಅರ್ಧ ಟೇಬಲ್ ಸ್ಪೂನ್ ನಷ್ಟು ಬೇಕಿಂಗ್ ಸೋಡವನ್ನು ಹಾಕಿ ಹಾಗೆ ಅರ್ಧ ಟೇಬಲ್ ಸ್ಪೂನ್ ನಷ್ಟು ವಿನೇಗರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಒಂದು ಸ್ಪಂಜು ತೆಗೆದು ಕೊಂಡು ಆ ಒಂದು ರಸದಲ್ಲಿ ಸ್ವಲ್ಪ ಸಮಯದ ತನಕ ನೆನೆಯಲು ಹಾಗೆ ಇಡಿ ಅಥವಾ ನೀವು ಕಾಟನ್ ಅನ್ನೋ ಉಂಡೆಯನ್ನು ತೆಗೆದುಕೊಂಡು ಅದನ್ನು ಆ ಒಂದು ರಸದಲ್ಲಿ ನೆನೆಯಲು ಬಿಡಿ ನಂತರ ನೆನೆದಿರು ಸ್ಪಾಂಜ್ ಅಥವಾ ಹತ್ತಿಯ ಉಂಡೆಯನ್ನು ನಿಮ್ಮ ಯಾವ ಬೆರಳಿಗೆ ಉಗುರು ಸುತ್ತು ಸಮಸ್ಯೆ ಇರುತ್ತದೆ ಆ ಬೆರಳಿಗೆ ಆದ್ದರಿಂದ ಕವರ್ ಮಾಡಿ ಬಿಡಿ.
ಹೀಗೆ ಮಾಡುವುದರಿಂದ ನಿಮ್ಮ ಉಗುರು ಸುತ್ತಿನ ಸಮಸ್ಯೆ ನಿವಾರಣೆ ಆಗುತ್ತದೆ ಇನ್ನು ಹಳ್ಳಿ ಕಡೆಗಳಲ್ಲಿ ಇನ್ನೂ ಒಂದು ವಿಧಾನವನ್ನು ಅನುಸರಿಸಲಾಗುತ್ತದೆ ಹಸುಗಳ ಮೂಗಿನ ಒಳಗಡೆ ಉಗುರು ಸುತ್ತು ಆಗಿರುವಂತಹ ಬೆರಳನ್ನು ಇರಿಸುವುದರಿಂದ ಆ ಒಂದು ಹಸುವಿನ ಮೂಗಿನಿಂದ ಬರುವಂತಹ ಗಾಳಿ ನಿಮ್ಮ ಬೆರಳಿಗೆ ತಾಕಿದರೆ ಬೆರಳಿನ ನೋವು ಅತಿ ವೇಗವಾಗಿ ನಿವಾರಣೆಯಾಗುತ್ತದೆ. ಯಾರಿಗೆಲ್ಲ ಉಗುರು ಸುತ್ತಿನ ಸಮಸ್ಯೆಗಳು ಕಂಡುಬರುತ್ತದೆ ಅಂತಹವರು ಈ ಒಂದು ವಿಧಾನವನ್ನು ಅನುಸರಿಸಿದರೆ ಸಾಕು ನಿಮ್ಮ ನೋವು ಅತಿವೇಗವಾಗಿ ಕಡಿಮೆಯಾಗುತ್ತದೆ. ಯಾವುದೇ ಆಸ್ಪತ್ರೆಗಳಿಗೆ ಹೋಗಿ ತೋರಿಸುವಂತಹ ಅವಶ್ಯಕತೆ ಇರುವುದಿಲ್ಲ. ಇದೊಂದು ಸುಲಭ ವಿಧಾನವಾಗಿದ್ದು ನಾವು ನಮ್ಮ ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು.