ನಮ್ಮ ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿಕೆನ್ನೆಯ ಬೆಳಗಿ ರಚಿತಾ ರಾಮ್ ಅವರು ಚಂದನವನದ ಪ್ರಮುಖ ನಾಯಕ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ಎಲ್ಲಾ ನಟರ ಜೊತೆ ತೆರೆಯನ್ನು ಹಂಚಿಕೊಂಡಿರುವ ರಚಿತರಾಮ್ 2013ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಅರಸಿ ಸೀರಿಯಲ್ ನಲ್ಲಿ ಇವರಿಗೆ ಒಂದು ಪ್ರಮುಖ ಪಾತ್ರ ನೀಡಲಾಗಿತ್ತು. ಇದರಿಂದ ಇವರು ಹೆಚ್ಚು ಜನ ಮನ್ನಣೆಯನ್ನು ಪಡೆದುಕೊಂಡರು ರಚಿತರಾಮ್ ಅವರ ಬಾಲ್ಯದ ಹೆಸರು ಬಿಂದಿಯಾ ರಾಮ ಇವರ ಪೂರ್ವಜರು ಮಧ್ಯಪ್ರದೇಶದ ಭೂಪಾಲ್ ಮೂಲದವರು ಎಂದು ಹೇಳಲಾಗುತ್ತದೆ. ರಚಿತಾ ರಾಮ್ ಅವರ ತಂದೆ ಪ್ರಮುಖವಾಗಿ ಭರತನಾಟ್ಯ ಕಲಾವಿದರಾಗಿದ್ದರು.
ಕಥಕ್ ಮತ್ತು ಭರತನಾಟ್ಯದಲ್ಲಿ ತರಬೇತಿಯನ್ನು ಪಡೆದಿರುವಂತಹ ರಚಿತಾ ರಾಮ್ ಅವರು ಸುಮಾರು 50 ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಅರಸಿ ಎಂಬ ಧಾರವಾಹಿಯ ಮೂಲಕ ಜನಪ್ರಿಯತೆಯನ್ನು ಪಡೆದಿರುವಂತಹ ರಚಿತಾ ರಾಮ್ ಅವರು 2013ರಲ್ಲಿ ತೆರೆಕಂಡಂತಹ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪ್ರವೇಶ ಮಾಡಿದರು ಈ ಒಂದು ಚಿತ್ರಕ್ಕೆ ಸಾಕಷ್ಟು ಜನರನ್ನು ಆಡಿಶನ್ ಗೆ ಕರೆಯಲಾಗಿತ್ತು ಅವರಲ್ಲಿ ರಚಿತಾ ರಾಮಾ್ ಅವರು ಆಯ್ಕೆಯಾದರು. ಈ ಚಿತ್ರದಲ್ಲಿ ತಮ್ಮ ಡೈಲಾಗ್ ಡೆಲಿವರಿ, ಸ್ಟೈಲ್ ಮತ್ತು ಕ್ಯೂಟ್ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡರು. ನಂತರ ದರ್ಶನ್ ಅವರ ಅಂಬರೀಷ, ನಟ ಗಣೇಶ್ ಅವರ ದಿಲ್ ರಂಗೀಲ, ಸುದೀಪ್ ಅವರ ಜೊತೆಗೆ ರನ್ನ, ಶ್ರೀ ಮುರುಳು ಅವರ ಜೊತೆಗೆ ರಥಾವರ ಹಾಗೆ ಪುನೀತ್ ರಾಜಕುಮಾರ್ ಅವರ ಜೊತೆಗೆ ಚಕ್ರವ್ಯೂಹ ಹೀಗೆ ಮುಂತಾದ ಸಿನಿಮಾಗಳಲ್ಲಿ ನಟಿಸಿರುವಂತಹ ರಚಿತಾ ರಾಮ್ ಅವರು ಈಗಿನ ಬಹು ಬೇಡಿಕೆ ನಟಿಯಾಗಿದ್ದಾರೆ.
ಇದೀಗ ರಚಿತಾ ರಾಮ್ ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳ ಆಫರ್ ಗಳು ಇದೆ, ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಸಹ ರಚಿತರಾಮ್ ಅವರು ನಟನೆಯನ್ನು ಮಾಡುತ್ತಿದ್ದಾರೆ ಹಾಗೆಯೇ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇದು ಪ್ರೇಕ್ಷಕರಿಗೆ ತುಂಬಾ ಖುಷಿಯನ್ನು ತಂದುಕೊಟ್ಟಿದೆ. ರಚಿತಾ ರಾಮ್ ಅವರು ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಾಕಷ್ಟು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡದಲ್ಲಿ ಇರುವಂತಹ ಟಾಪ್ ಹೀರೋಯಿನ್ ಗಳ ಪಟ್ಟಿಯಲ್ಲಿ ರಚಿತಾ ರಾಮ್ ಅವರು ಕೂಡ ಒಬ್ಬರು ಇವರು ಸುಮಾರು 2013 ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಇವರ ಎಲ್ಲಾ ಸಿನಿಮಾಗಳನ್ನು ಸಹ ಪ್ರೇಕ್ಷಕರು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಇವರ ಮುಂದಿನ ಸಿನಿಮಾಗಳಿಗಾಗಿ ರಚಿತಾ ರಾಮ್ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ.
ಪ್ರತಿ ವರ್ಷವೂ ಕೂಡ ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ಅನುಬಂಧ ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತದೆ ಈ ಒಂದು ಕಾರ್ಯಕ್ರಮದಲ್ಲಿ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಅವರು ಕೂಡ ಉಪಸ್ಥಿತಿ ಆಗಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ರಚಿತಾ ರಾಮ್ ಅವರು ಮಾಡಿರುವಂತಹ ಕ್ಯೂಟ್ ಆದಂತಹ ಡ್ಯಾನ್ಸ್ ಎಲ್ಲಾ ಕಡೆ ವೈರಲ್ ಆಗುತ್ತಿದೆ. 8 ಜನ ಸೀರಿಯಲ್ ನಟರ ಒಟ್ಟಿಗೆ ಡಾನ್ಸ್ ಮಾಡಿರುವಂತಹ ರಚಿತಾ ರಾಮ್ ಅವರ ವಿಡಿಯೋ ಸಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವರ ಡಾನ್ಸ್ ನೋಡಿ ಅಭಿಮಾನಿಗಳು ತುಂಬಾ ಖುಷಿಪಟ್ಟಿದ್ದಾರೆ ಅಷ್ಟು ಸುಂದರವಾಗಿ ಇವರ ಡ್ಯಾನ್ಸ್ ಮೂಡಿ ಬಂದಿದೆ. ಈ ಡ್ಯಾನ್ಸ್ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.