ಪ್ರಧಾನಮಂತ್ರಿ ಅವರ ಉಜ್ವಲ ಯೋಜನೆಯಿಂದ ಪ್ರತಿ ಮನೆಮನೆಗೂ ಗ್ಯಾಸ್ ಸಿಲಿಂಡರ್ ಬಂತು. ಈಗ ಹೊಗೆ ಮುಕ್ತವಾಗಿ ಅಡುಗೆ ಮಾಡುವ ಅನುಕೂಲತೆ ಗೃಹಿಣಿಯರಿಗೂ ಸಿಕ್ಕಿದರೂ ಕೂಡ ಏರುತ್ತಿರುವ ಅನಿಲ ದರದಿಂದ ಮತ್ತೆ ಅವರು ಚಿಂತೆಗೀಡಾಗಿದ್ದಾರೆ. ಪ್ರತಿ ವರ್ಷದಿಂದ ವರ್ಷಕ್ಕೆ ವಿಪರೀತವಾಗಿ ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿದ್ದು, ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಸಿಕ್ಕಾಪಟ್ಟೆ ಹೆಚ್ಚಾಗಿದೆ.
ಸಿಲಿಂಡರ್ ಪ್ರತಿಯೊಂದು ಕುಟುಂಬಕ್ಕೂ ಕೂಡ ಮೂಲಭೂತ ಅವಶ್ಯಕತೆ ಆಗಿ ಹೋಗಿರುವುದರಿಂದ ಇವುಗಳ ಬೆಲೆ ಏರಿಕೆಯಿಂದ ಬಡವರು ಸಾಮಾನ್ಯ ವರ್ಗದವರು ತತ್ತರಿಸಿ ಹೋಗುವಂತೆ ಆಗಿದೆ. ಸರ್ಕಾರ ಸಬ್ಸಿಡಿ ಯೋಜನೆ ಮಾಡುವ ಪ್ರಯತ್ನ ಮಾಡುತ್ತಾದರೂ ಕೆಲವೇ ತಿಂಗಳಲ್ಲಿ ಅದು ನಿಂತು ಹೋಗಿದ್ದು ಎಲ್ಲರಿಗೂ ಗೊತ್ತೇ ಇದೆ. ಚುನಾವಣೆಯ ಪ್ರಣಾಳಿಕೆಗಳು ಅಷ್ಟೇ ಗ್ಯಾಸ್ ಸಿಲೆಂಡರ್ ಬೆಲೆ ಇಳಿಸುವ ಮಾತುಗಳು ಕೇಳಿ ಬಂದರು ನಂತರ ಇದರ ಬಗ್ಗೆ ಸುದ್ದಿಯೇ ಇಲ್ಲ.
ಇದೆಲ್ಲ ಕಾರಣಗಳಿಂದ ಗೃಹಿಣಿಯರು ಅಡುಗೆ ಮನೆಯಲ್ಲಿ ಬೇಸರದಿಂದಲೇ ಅಡುಗೆ ಮಾಡುವಂತೆ ಆಗಿದೆ. ತಿಂಗಳ ಖರ್ಚು, ನಿಭಾಯಿಸುವುದರ ಜೊತೆಗೆ ಏರುತ್ತಿರುವ ಬೆಲೆಯು ಹೆಚ್ಚುವರಿ ಹೊರೆಯಾಗಿ ಬಾಧಿಸುತ್ತಿದೆ. ಆದರೆ ನೀವು ಇರುವ ಅನುಕೂಲತೆಗಳಲ್ಲಿ ಕಡಿಮೆ ಬೆಲೆಗೆ ಈ ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಬಹುದು. ಅದಕ್ಕಾಗಿ ಸರ್ಕಾರ ಅನುವು ಮಾಡಿಕೊಡದೆ ಇದ್ದರೂ ಕಡಿಮೆ ಬೆಲೆಗೆ ಅಥವಾ ಆಫರ್ ಬೆಲೆಗಳಲ್ಲಿ ಬುಕ್ ಆಗುವಂತೆ ಮಾಡಿಕೊಳ್ಳಬಹುದು.
ಈಗಷ್ಟೇ ಫ್ಲಿಪ್ಕಾರ್ಟ್ ಗೋಲ್ಡನ್ ಕಾಯಿನ್ಗಳ ಮೂಲಕ ಇಂಥದೊಂದು ಅವಕಾಶ ಮಾಡಿಕೊಟ್ಟಿದ್ದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆ ಆಫರ್ ಟೈಮ್ ಮುಗಿದು ಹೋಗಿದ್ದರು ಮತ್ತೊಂದು ಆನ್ಲೈನ್ ವೇದಿಕೆ ಇದಕ್ಕೆ ಅವಕಾಶ ನೀಡಿದೆ. ಈಗ ಇದರ ಮೂಲಕ ನೀವು ಕಡಿಮೆ ಬೆಲೆಗೆ ಸಿಲಿಂಡರ್ ಕೊಳ್ಳಬಹುದು ಈಗ ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ವ್ಯವಹಾರವೂ ಕೂಡ ಆನ್ಲೈನ್ ಮೂಲಕ ನಡೆಯುತ್ತಿವೆ.
ಅದರಲ್ಲೂ ಆಪ್ ಗಳಾದ ಫೋನ್ ಪೇ, ಗೂಗಲ್ ಪೇ,ಪೇಟಿಎಂ ಗಳ ಬಳಕೆ ಹಳ್ಳಿ ಹಳ್ಳಿಗಳವರೆಗೆ ತಲುಪಿದೆ. ಈ ಪೇಟಿಎಂ ಆಪ್ ಮೂಲಕ ನೀವು ಈಗ ನೀವು ನಿಮ್ಮ ಸಿಲಿಂಡರ್ ಅನ್ನು ಕಡಿಮೆ ಬೆಲೆಗೆ ಕೊಳ್ಳಬಹುದು. ಅದು ಹೇಗೆ ಸಾಧ್ಯ ಅನ್ನುತ್ತೀರಾ ಇಂಥದೊಂದು ಭರ್ಜರಿ ಆಫರನ್ನು ತನ್ನ ಗ್ರಾಹಕರುಗಳಿಗೆ ಪೇಟಿಎಂ ನೀಡಿದೆ. ಆದ್ದರಿಂದ ನೀವು ಪೇಟಿಎಂ ಆಪ್ ಮೂಲಕ ಹಣದ ಟ್ರಾನ್ಸಾಕ್ಷನ್ ಮಾಡುವಾಗ ಫ್ರೀ ಗ್ಯಾಸ್ ಎನ್ನುವ ಪ್ರೋಮೋ ಕೋಡ್ ಅನ್ನು ಹಾಕಿ.
ಹಣದ ವಹಿವಾಟು ನಡೆಸಿದರೆ ನೀವು ಇದಕ್ಕೆ ರಿಜಿಸ್ಟರ್ ಆಗುತ್ತಿರಿ. ಈ ರೀತಿ ರಿಜಿಸ್ಟರ್ ಆದವರಲ್ಲಿ 500 ಮಂದಿಗೆ ಬಂಪರ್ ರೀತಿ ಲಾಟರಿ ಹೊಡೆಯಲಿದೆ ಪೇಟಿಎಂ ತನ್ನ 500 ಗ್ರಾಹಕರಿಗೆ 1,000 ರೂಪಾಯಿವರೆಗೆ ಕ್ಯಾಶ್ ರಿಟರ್ನ್ಸ್ ಕೊಡಲಿದೆ. ಆ ಹಣವು ಅವರ ವ್ಯಾಲೆಟ್ಗೆ ತುಂಬಲಿದೆ ನೀವು ಆ ವ್ಯಾಲೆಟ್ ಅಲ್ಲಿರುವ ಪಾಯಿಂಟ್ ಗಳನ್ನು ಬಳಸಿಕೊಂಡು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ನಿಮ್ಮ ಸಿಲಿಂಡರ್ ಬೆಲೆಯಲ್ಲಿ ರೂ.1000 ಕಡಿಮೆ ಆಗುತ್ತದೆ.
ಸದಕ್ಕೀಗ ಕರ್ನಾಟಕದಲ್ಲಿ ಸಿಲಿಂಡರ್ ಬೆಲೆ 1155 ಇದೆ. ನೀವು ಈ ರೀತಿ ನಿಮ್ಮ ವ್ಯಾಲೆಟ್ ಮೂಲಕ ಸಿಲಿಂಡರ್ ಬುಕ್ ಮಾಡಿಕೊಂಡರೆ 155 ಕ್ಯಾಶ್ ಪೇ ಮಾಡಿ, 1000 ರೂಗಳನ್ನು ಬ್ಯಾಲೆಟ್ ಮೂಲಕ ಪೇ ಮಾಡಿ ಗ್ಯಾಸ್ ಸಿಲಿಂಡರ್ ಡೆಲಿವರಿ ಪಡೆಯಬಹುದು. ಆದರೆ ಈ ರೀತಿ ಮಾಡಲು ಇವತ್ತೇ ಕೊನೆ ದಿನ. ಮೇ 30 ಕ್ಕೆ ಈ ಆಫರ್ ಮುಗಿಯಲಿದೆ. ಆದ್ದರಿಂದ ತಕ್ಷಣವೇ ಇದರ ಸದುಪಯೋಗ ಪಡೆದುಕೊಳ್ಳಿ.