.
2023 ಮತ್ತು 24ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯು ಮೇ ತಿಂಗಳ ಅಂತ್ಯದಲ್ಲಿ ಶುರು ಆಗಲಿದೆ. ಕೆಲವು ವಿದ್ಯಾರ್ಥಿಗಳು ಸರ್ಕಾರದಿಂದ ವಿಶೇಷ ಅನುದಾನ ಹಾಗೂ ಅನುಕೂಲ ಸಿಗುವ ಮತ್ತು ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ ಸಿಗುವ ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಬಯಸುತ್ತಾರೆ. ರಾಜ್ಯದ ಅಲ್ಪಸಂಖ್ಯಾತರ ಇಲಾಖೆಯು ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇವರ ಮೂಲಕ ಇದಕ್ಕಾಗಿ ನಿಯಮವನ್ನು ರೂಪಿಸಿ, ಆ ಪ್ರಕರವಾಗಿ ಇದುವರೆಗೂ ನಡೆಸಿಕೊಂಡು ಬಂದಿದೆ.
ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ಶಾಲೆ, ನವೋದಯ ವಸತಿ ಶಾಲೆ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಮುಂತಾದ ಶಾಲೆಗಳಲ್ಲಿ ಉಚಿತವಾಗಿ CBSC ಪಠ್ಯಕ್ರಮವನ್ನು ಬೋಧಿಸಲಾಗುತ್ತದೆ. ಸರ್ಕಾರದಿಂದ ನಡೆಸಲಾಗುವ ಈ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಅದಕ್ಕೆ ಪೂರಕವಾದ ವಾತಾವರಣವನ್ನು ಕೂಡ ನಿರ್ಮಿಸಿ ಅವರ ಶಾಲಾ ಶಿಕ್ಷಣವನ್ನು ಮುಗಿಸಲು ಅನುಕೂಲತೆ ಮಾಡಿಕೊಡಲಾಗುತ್ತದೆ.
ಕರ್ನಾಟಕ ರಾಜ್ಯದ ಎಲ್ಲಾ ಭಾಗದ ವಿದ್ಯಾರ್ಥಿಗಳು ಕೂಡ ಈ ರೀತಿ ವಸತಿ ಶಾಲೆಗಳಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯಲು ಆಸೆ ತೋರುತ್ತಾರೆ. ಆದರೆ ಇದಕ್ಕಾಗಿ ಸರ್ಕಾರದ ಕೆಲ ಕ್ರಮಗಳು ಇವೆ. ಈ ರೀತಿ ಆಸಕ್ತಿ ಇರುವ ಮಕ್ಕಳಿಂದ ಅಥವಾ ಪೋಷಕರಿಂದ ಅರ್ಜಿ ಆಹ್ವಾನ ಮಾಡಿ ಆ ಮಕ್ಕಳಿಗೆ ಪರೀಕ್ಷೆ ನಡೆಸಿ ಆಯ್ಕೆಯಾದ ಕೆಲವು ಅಭ್ಯರ್ಥಿಗಳಿಗೆ ಅಷ್ಟೇ ಸರ್ಕಾರ ಈ ಸೌಲಭ್ಯವನ್ನು ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ.
ಅದಕ್ಕಾಗಿ ಪ್ರತಿ ವರ್ಷ ಮೇ ತಿಂಗಳಲ್ಲಿ ಪ್ರವೇಶ ಪರೀಕ್ಷೆಗಳನ್ನು ಕೂಡ ನಡೆಸುತ್ತದೆ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಷ್ಟೇ ಈ ಪರೀಕ್ಷೆಗಳನ್ನು ಬರೆಯಲು ಅವಕಾಶಗಳು ಇರುತ್ತದೆ ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇವರ ಮಾರ್ಗಸೂಚಿಯಂತೆ ಈ ಪ್ರಕ್ರಿಯೆ ನಡೆಯುತ್ತದೆ. ಅಂತೆಯೇ ಈಗ 2023 – 24ನೇ ಸಾಲಿನಲ್ಲಿ ಈ ಶಾಲೆಗಳಲ್ಲಿ ಅಭ್ಯಾಸ ನಡೆಸಲು ಇಚ್ಛೆಪಡುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ.
ಈ ಕುರಿತು ಕೆಲ ಪ್ರಮುಖ ಅಂಶಗಳು ಈ ರೀತಿ ಇದೆ ನೋಡಿ:-
● ಮಾನ್ಯತೆ ಪಡೆದ ಕರ್ನಾಟಕದ ಯಾವುದೇ ಶಾಲೆಯಲ್ಲಿ ಐದನೇ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮಾತ್ರ ಈ ಪ್ರವೇಶ ಪರೀಕ್ಷೆಯನ್ನು ಬರೆಯಲು ಸಾಧ್ಯ.
● ಅಲ್ಪಸಂಖ್ಯಾತರು ಅಥವಾ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
● ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಸೇವಾ ಸಿಂಧು ಪೋರ್ಟಲ್ htts://sevasindhuservices.karnataka.gov.in ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
● ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಅಥವಾ ಪಠ್ಯಕ್ರಮಗಳು ಅಥವಾ ಇನ್ಯಾವುದೇ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೂಚಿಸುತ್ತಿರುವ ವೆಬ್ಸೈಟ್ ಆದ https://dom.karanataka.gov.in ಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.
● ಅಥವಾ ಪೋಷಕರು ಮತ್ತು ಮಕ್ಕಳು ಸಮೀಪದ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ, MDRS / GMRS / Dr.APJAKR ಶಾಲೆಗಳು, ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಭೇಟಿಕೊಟ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.
● ಸಹಾಯವಾಣಿ ದೂರವಾಣಿ ಸಂಖ್ಯೆ 8277799990, 080-22535916 ಗೆ ಕರೆ ಕೂಡ ಮಾಡಿ ಮಾಹಿತಿ ಸಂಗ್ರಹಿಸಬಹುದು.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 27 ಏಪ್ರಿಲ್, 2023.
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ 13 ಮೇ, 2023.