ಗ್ಯಾಸ್ ಲೀಕ್ ಆದ್ರೆ ಅಲಾರಂ ನೀಡುತ್ತೆ ಈ ಬಲ್ಬ್. ಸಿಲಿಂಡರ್ ಬ್ಲಾಸ್ಟ್ ನಂತಹ ದು.ರ್ಘ.ಟನೆಯನ್ನು ತಪ್ಪಿಸಲು ಇಂದೇ ಮನೆಗೆ ತನ್ನಿ LPG ಗ್ಯಾಸ್ ಡಿಟೆಕ್ಟರ್

 

WhatsApp Group Join Now
Telegram Group Join Now

ಇದುವರೆಗೆ ನಾವು ಸಾಕಷ್ಟು ಅಗ್ನಿ ಅವಘಡಗಳ ಬಗ್ಗೆ ಕೇಳಿದ್ದೇವೆ, ಅದರಲ್ಲೂ ಮನೆಗಳಲ್ಲಿ ಆಗುವಂತಹ ಅಗ್ನಿ ಅವಘಡಗಳಲ್ಲಿ ಶೇಕಡ ಭಾಗ ಹೆಚ್ಚು ಸಿಲಿಂಡರ್ ಸ್ಫೋಟದಿಂದಲೇ ಆಗಿರುತ್ತದೆ. ಅಡುಗೆ ಅನಿಲ ಸೋರಿಕೆ ಆಗಿರುವುದನ್ನು ಗಮನಿಸಿದ ಮನೆ ಮುಂದೆ ತೊಂದರೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಸಾಕಷ್ಟು ಜನರ ಪ್ರಾಣ ಹಾನಿಗಳು ಆಗಿದ್ದು ಉದಾಹರಣೆ ಇದೆ ಇದರ ಬಗ್ಗೆ ಎಷ್ಟು ನಿಗ ವಹಿಸಿದರೂ ಸಹ ಸಮಸ್ಯೆ ತಪ್ಪಿಸಲು ಆಗುತ್ತಿರಲಿಲ್ಲ.

ಈಗ ಇದಕ್ಕೊಂದು ಉಪಾಯ ಬಂದಿದೆ. ಎಲ್ಪಿಜಿ ಅಡುಗೆ ಅನಿಲವನ್ನು ಡಿಟೆಕ್ಟ್ ಮಾಡುವಂತಹ ಬಲ್ಪ್ ಒಂದು ಮಾರ್ಕೆಟ್ ಅಲ್ಲಿ ಲಭ್ಯವಿದ್ದು, ಇದನ್ನು ನಿಮ್ಮ ಅಡುಗೆಮನೆ ಕೋಣೆ ಅಥವಾ ಮತ್ತೆಲ್ಲಾದರೂ ಜೋಡಣೆ ಮಾಡುವುದರಿಂದ ಅಡಿಗೆ ಅನಿಲದ ಸೋರಿಕೆ ಕಂಡುಬಂದ ತಕ್ಷಣ ದೊಡ್ಡ ಪ್ರಮಾಣದಲ್ಲಿ ಇದು ಸದ್ದು ಮಾಡಿ ಅವಘಡ ತಪ್ಪಿಸಲಿದೆ. ಹಲೋ ನಿಕಿಕ್ಸ್ ಶೀಲ್ಡ್ ಫೈರ್ ಅಲಾರಾಂ ಎನ್ನುವ ಈ ಸಾಧನವು ಅಡುಗೆ ಮನೆಯ ದುರಂತ ತಪ್ಪಿಸಲು ಸಹಾಯವಾಗಲಿದೆ.

ಈ ಸಾಧನವು ಹೊಗೆ, ಕಾರ್ಬನ್ ಡೈಯಾಕ್ಸೈಡ್, ಮೀಥೇನ್ ಮತ್ತು LPG ಹಾಗೂ ಹೈಡ್ರೋಜನ್ ಅಂತಹ ಅನಿಲ ಸೋರಿಕೆಗಳನ್ನು ಸುಲಭವಾಗಿ ಪತ್ತೆ ಮಾಡುತ್ತದೆ. ನೋಡಲು ಈ ಬಲ್ಬ್ ಸಾಧಾರಣ ಬಲ್ಪ್ ರೀತಿ ಕಂಡರೂ ಕೂಡ ಅನಿಲ ಸೋರಿಕೆ ಆದಾಗ ಅದನ್ನು ಕಂಡುಹಿಡಿದು ಇದು ಎಚ್ಚರಿಸುತ್ತದೆ. ಈ ರೀತಿಯ ಅಲರಾಂ ಬಲ್ಬ್ ಅನ್ನು ನೀವು ಖರೀದಿಸಿ ನಿಮ್ಮ ಮನೆಯ ಅಡುಗೆ ಕೋಣೆ ಅಥವಾ ಇನ್ನಿತರ ಯಾವುದೇ ಭಾಗದಲ್ಲಿ ಬೇಕಾದರೂ ಹಾಕಬಹುದು.

ಈಗ ಮನೆಯಲ್ಲಿರುವ ಯಾವುದೇ ಬಲ್ಪ್ ಹೋಲ್ಡರ್ ಕೂಡ ಇದನ್ನು ಪ್ಲಗ್ ಮಾಡಬಹುದಾಗಿದೆ. ನಂತರ ಈ ಸಾಧನವು ವಿದ್ಯುತ್ ಸರಬರಾಜು ಪಡೆದುಕೊಂಡು ಕೆಲಸ ಮಾಡಲು ಶುರುಮಾಡುತ್ತದೆ. ಈಗಾಗಲೇ ಇದನ್ನು ಪರೀಕ್ಷೆ ಮಾಡಿ ಇದರ ಚಾಕಚಕ್ಯತೆಯನ್ನು ಕೂಡ ಗಮನಿಸಲಾಗಿದೆ. ಇದು ಮಾಡುವ ಶಬ್ದವು 85 ಡೆಸಿಬಲ್ ಗಿಂತಲೂ ಹೆಚ್ಚು ಇದ್ದು ಈ ಶಬ್ದದಿಂದ ಮನೆಯ ಸದಸ್ಯರು ಎಚ್ಚರಿಕೆ ಆಗಬಹುದಾಗಿದೆ ಜೊತೆಗೆ ಅಕ್ಕಪಕ್ಕ ಮನೆಯವರಿಗೂ ಕೂಡ ಇದು ಸಂದೇಶವಾಗಿ ರವಾನೆ ಆಗುತ್ತದೆ.

ಇದನ್ನು ಮನೆ ಮಾತ್ರ ಅಲ್ಲದೆ ಆಫೀಸ್ ಗಳು ಗೋಡಾನ್ಗಳು ಮುಂತಾದ ಕಡೆ ಕೂಡ ಅಗತ್ಯ ಇದ್ದಲ್ಲಿ ಬಳಸಬಹುದಾಗಿದೆ. ಇದುವರೆಗೂ ಕೂಡ ಈ ರೀತಿಯ ಸಮಸ್ಯೆಯನ್ನು ಕಂಡುಹಿಡಿಯಲು ಸ್ಮೋಕ್ ಡಿಟೆಕ್ಟರ್ ಸಾಧನವನ್ನು ಬಳಸಲಾಗುತ್ತಿತ್ತು. ಆದರೆ. ಅದು ಕೇವಲ ಹೊಗೆಯನ್ನು ಮಾತ್ರ ಪತ್ತೆಹೆಚ್ಚುತಿತ್ತು ಈಗ ಹೊಸದಾಗಿ ಬಂದಿರುವ ಹಲೋ ನಿಕಿಕ್ಸ್ ಶೀಲ್ಡ್ ಫೈರ್ ಅಲಾರಾಂ ಬಲ್ಬ್ ಇಂದ ಅನಿಲ ಸೋರಿಕೆ ಕೂಡ ಪತ್ತೆ ಹಚ್ಚಬಹುದು ಎಂದು ತಿಳಿದು ಬಂದಿರುವುದು ಸಾಕಷ್ಟು ಜನರ ಪಾಲಿಗೆ ಸಮಾಧಾನ ತಂದಿದೆ.

ಈಗಾಗಲೇ ಸಾಕಷ್ಟು ಮಂದಿ ಇದನ್ನು ಖರೀದಿಸಲು ಮಾರ್ಕೆಟ್ ಅಲ್ಲಿ ಮುಗಿ ಬೀಳುತ್ತಿದ್ದಾರೆ. ಯಾಕೆಂದರೆ ಕಡಿಮೆ ಬೆಲೆಯಲ್ಲಿ ಜೀವ ರಕ್ಷಣೆ ಮಾಡಬಹುದಾದ ಉಪಯೋಗ ಇರುವ ಸಾಧನ ಇದಾಗಿದೆ. ಅಮೆಜಾನ್ ಮುಂತಾದ ಪ್ಲಾಟ್ಫಾರ್ಮ್ಗಳು ಆಕರ್ಷಣೀಯ ದರದಲ್ಲಿ ಇದನ್ನು ಸೇಲ್ ಮಾಡುತ್ತದೆ. ಅಮೆಜಾನ್ ನಲ್ಲಿ ಇದರ ಬೆಲೆ 700ರೂ ಇದೆ. ಈ ಕೂಡಲೇ ಖರೀದಿಸಿ ನಿಮ್ಮ ಮನೆಗೆ ಒಂದು ಸೇಫ್ಟಿ ಸಾಧನವನ್ನು ಅಳವಡಿಸಿಕೊಳ್ಳಿ. ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳುವ ಮೂಲಕ ಅವರಿಗೂ ಮಾಹಿತಿ ತಲುಪುವಂತೆ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now