ABHA – ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಅಥವಾ ಆರೋಗ್ಯ ID ಕಾರ್ಡ್ ಅನ್ನು NDHM.GOV.IN ಅನುಮೋದಿಸಿದೆ. ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ABHA) ಅಥವಾ ಹೆಲ್ತ್ ಐಡಿಯು ಭಾರತೀಯ ನಾಗರಿಕರಿಗೆ ತಮ್ಮ ಆರೋಗ್ಯ ಸಂಬಂಧಿತ ಡೇಟಾದ ಕೇಂದ್ರೀಕೃತ ಡೇಟಾಬೇಸ್ ಅನ್ನು ಸ್ಥಾಪಿಸಲು.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಭಾರತ ಸರ್ಕಾರದ ಯೋಚನೆಯಾಗಿದೆ ಇತ್ತೀಚೆಗೆ ಕರ್ನಾಟಕ ಸರ್ಕಾರದ (Karnataka Government) ಆರೋಗ್ಯ ಇಲಾಖೆ ಹೊಸ ರೂಪವನ್ನು ನೀಡಿದ್ದು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಎಂದು ಮರು ನಾಮಕರಣ ಮಾಡಿದೆ. ಕಳೆದ ಎರಡು ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯರವರು (CM Siddaramaih) ಈ ನೂತನ ಕಾರ್ಡ್ ಬಿಡುಗಡೆ ಮಾಡಿದ್ದಾರೆ.
7,000 ರೈತರಿಗೆ ಅರಣ್ಯ ಭೂಮಿ ಮಂಜೂರು.! ಮಂಜೂರಾತಿಗೆ ನಿಯಮಗಳೇನು? ಯಾವೆಲ್ಲ ರೈತರಿಗೆ ಹಕ್ಕುಪತ್ರ ಸಿಗಲಿದೆ ನೋಡಿ.!
BPL ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ಈ ಹೆಲ್ತ್ ಕಾರ್ಡ್ ಗಳನ್ನು ತಮ್ಮ ಕುಟುಂಬದ ಕಾಳಜಿಗಾಗಿ ಪಡೆದುಕೊಳ್ಳಬೇಕು. ಯಾಕೆಂದರೆ ಅನಾರೋಗ್ಯ ಉಂಟಾದಾಗ ಗರಿಷ್ಠ 5 ಲಕ್ಷದವರೆಗೆ ಉಚಿತವಾಗಿ ಈ ಯೋಜನೆಯ ಮೂಲಕ ಚಿಕಿತ್ಸೆ ಸಿಗುತ್ತದೆ.
ಹತ್ತಿರದ ಯಾವುದೇ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಅಥವಾ CSC ಕೇಂದ್ರಗಳಲ್ಲಿ ಕೂಡ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ದಾಖಲೆ ಕೊಟ್ಟು ಈ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು ಮತ್ತು ಮೊಬೈಲ್ ನಲ್ಲಿಯೇ ಅಪ್ಲೈ ಮಾಡಿ ಕೆಲವೇ ಗಂಟೆಗಳಲ್ಲಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು. ಅದು ಹೇಗೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.
ಸರ್ಕಾರದಿಂದ 4000 ಉಚಿತ ಬೈಕ್ ವಿತರಣೆ, ಆಸಕ್ತರು ಅರ್ಜಿ ಸಲ್ಲಿಸಿ.!
* ಮೊದಲಿಗೆ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಗೂಗಲ್ ಗೆ ಹೋಗಿ https://abdm.gov.in/ ವೆಬ್ ಸೈಟ್ ಗೆ ಭೇಟಿ ಕೊಡಿ.
* Create Ayushman Bharath Health Account – ABHA Number ಎನ್ನುವ ಮುಖಪುಟ ಓಪನ್ ಆಗುತ್ತದೆ. ಪಕ್ಕದಲ್ಲೇ Create ABHA Number ಎನ್ನುವ ಆಪ್ಷನ್ ಇರುತ್ತದೆ ಕ್ಲಿಕ್ ಮಾಡಿ
* ಆಧಾರ್ ನಂಬರ್ ಮೂಲಕ ಅಥವಾ ಡ್ರೈವಿಂಗ್ ಲೈಸೆನ್ಸ್ ಮೂಲಕ ಈ ರೀತಿ ಎರಡು ವಿಧಾನಗಳಲ್ಲಿ ಕ್ರಿಯೇಟ್ ಮಾಡುವ ಆಪ್ಷನ್ ಇರುತ್ತದೆ.
* ಆಧಾರ್ ನಂಬರ್ ಮೂಲಕ ಕ್ರಿಯೇಟ್ ಮಾಡುವ ಆಪ್ಷನ್ ಕ್ಲಿಕ್ ಮಾಡಿ.
* Create ABHA Number Using Aadhar ಎನ್ನುವ ಪೇಜ್ ಇಂಟರ್ಫೇಸ್ ಓಪನ್ ಆಗುತ್ತದೆ ಅಲ್ಲಿ ಆಧಾರ್ ನಂಬರ್ ಎಂಟ್ರಿ ಮಾಡಲು ಆಪ್ಷನ್ ಇರುತ್ತದೆ. ನಿಮ್ಮ 12 ಅಂಕೆಯ ಆಧಾರ್ ನಂಬರ್ ನಮೂದಿಸಿ, ನೀಡಲಾಗಿರುವ ಟರ್ಮ್ಸ್ ಮತ್ತು ಕಂಡಿಶನ್ ಓದಿ ನೀಡಲಾಗಿರುವ ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ. ಪ್ರಶ್ನೆ ರೂಪದಲ್ಲಿರುವ ಕ್ಯಾಪ್ಚಾ ಬೇಧಿಸಿ ಕ್ಯಾಪ್ಚಾ ಕೋಡ್ ಎಂಟ್ರಿ ಮಾಡಲು ಬಾಕ್ಸ್ ನಲ್ಲಿ ನಮೂದಿಸಿ, Next ಬಟನ್ ಕ್ಲಿಕ್ ಮಾಡಿ.
ಆಸ್ತಿ ಮತ್ತು ಜಮೀನು ರಿಜಿಸ್ಟರ್ ಆಗಿದ್ರೆ ಸಾಲದು, J Form ಕಂಪ್ಲೀಟ್ ಮಾಡಬೇಕು, ಈ ಪ್ರಕ್ರಿಯೆ ಹೇಗಿರುತ್ತದೆ ನೋಡಿ.! ಮನೆ, ಜಮೀನು, ಸೈಟ್ ಇದ್ದವರು ನೋಡಿ
* Confirm OTP ನಮೂದಿಸಲು ಆಕ್ಷನ್ ನೀಡಲಾಗಿರುತ್ತದೆ ಈಗಾಗಲೇ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬಂದಿರುತ್ತದೆ, ಅದನ್ನು ನಮೂದಿಸಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೂಡ ಕೇಳಲಾಗಿರುತ್ತದೆ ಆ ಆಪ್ಷನ್ ನಲ್ಲಿ ನಮೂದಿಸಿ, Verify ಕ್ಲಿಕ್ ಮತ್ತೊಂದು OTP ವೆರಿಫಿಕೇಷನ್ ಗಾಗಿ ಬರುತ್ತದೆ ಅದನ್ನು ಕೂಡ ಎಂಟ್ರಿ ಮಾಡಿ Next ಕ್ಲಿಕ್ ಮಾಡಿ.
* We have found an ABHA , against Aadhar number Provided by you ಎಂದು ಬರುತ್ತದೆ. View Profile ಎನ್ನುವುದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ (ABHA Card) ಸ್ಕ್ರೀನ್ ಮೇಲೆ ನೋಡಬಹುದು ಅದನ್ನು ಡೌನ್ಲೋಡ್ ಮಾಡಿಕೊಳ್ಳಲು ಮತ್ತು ಪ್ರಿಂಟ್ ಪಡೆಯಲು ಕೂಡ ಆಪ್ಷನ್ ಇರುತ್ತದೆ.
* ಈ ವಿಧಾನದಲ್ಲಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ABHA Card ಡೌನ್ಲೋಡ್ ಮಾಡಿಕೊಳ್ಳಿ.