ಯಾವುದೇ ಒಬ್ಬ ವ್ಯಕ್ತಿಯು ದಾನ ಪತ್ರದ ಮೂಲಕ ತನ್ನ ಆಸ್ತಿಯನ್ನು ಮತ್ತೊಬ್ಬರಿಗೆ ಮಾಡಬೇಕು ಎಂದರೆ ಅದು ಚಿರಾಸ್ತಿ ಆಗಿದ್ದರೂ ಸರಿ ಅಥವಾ ಸ್ಥಿರಾಸ್ತಿ ಆಗಿದ್ದರೂ ಸರಿ ಸಂಪೂರ್ಣವಾಗಿ ಆ ಆಸ್ತಿಯ ಮಾಲೀಕತ್ವ ಹೊಂದಿರುವವರು ಮತ್ತು ಅದು ಅವರ ಸ್ವಯಾರ್ಜಿತ ಆಸ್ತಿ ಆಗಿರುವವರು ಮಾತ್ರ ಈ ರೀತಿ ದಾನ ಪತ್ರದ ಮೂಲಕ ಮತ್ತೊಬ್ಬರಿಗೆ ಆಸ್ತಿಯನ್ನು ನೀಡಬಹುದು.
ಇಲ್ಲವಾದಲ್ಲಿ ಅನೇಕ ರೀತಿಯ ಕಾನೂನು ತೊಡಕುಗಳನ್ನು ದಾನ ಪತ್ರದ ಮೂಲಕ ಬಂದಿದ್ದು ಅಸ್ತಿಯನ್ನು ಖರೀದಿಸುವರು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಜನಸಾಮಾನ್ಯರಿಗೂ ಕೂಡ ಕಾನೂನಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಕೆಲವು ಸಾಮಾನ್ಯ ಬೇಸಿಕ್ ಸಂಗತಿಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ದಲ್ಲಿ ಮಾಡಿದ್ದೇವೆ.
ಈ ಎಲ್ಲಾ ದಾನಪತ್ರಗಳು ರಿಜಿಸ್ಟ್ರರ್ ಆಗಿದ್ದಾಗ ಮಾತ್ರ ಅವು ಮಾನ್ಯವಾಗುತ್ತದೆ, ಇಲ್ಲವಾದಲ್ಲಿ ಯಾವುದೇ ಅನ್ ರಿಜಿಸ್ಟರ್ ದಾನ ಪತ್ರಗಳನ್ನು ಕಾನೂನು ಮಾನ್ಯ ಮಾಡುವುದಿಲ್ಲ. ಅದನ್ನು ಜಾರಿಗೆ ತರಲು ಸಹ ಸಾಧ್ಯವಿರುವುದಿಲ್ಲ. ಆದ್ದರಿಂದ ಯಾವುದೇ ಗಿಫ್ಟ್ ಡಿಡ್ ಆಗಿದ್ದರು ಅದು ರಿಜಿಸ್ಟರ್ ಗಿಫ್ಟ್ ಡೀಡ್ ಆಗಿರಬೇಕಾಗುತ್ತದೆ.
ಈ ರೀತಿ ರಿಜಿಸ್ಟರ್ ದಾನ ಪತ್ರಗಳನ್ನು ಮಾಡಬೇಕಾದರೆ ಯಾರು ಈ ದಾನಗಳನ್ನು ಮಾಡುತ್ತಿದ್ದಾರೆ ಅದನ್ನು ಆ ವ್ಯಕ್ತಿ ಸಂಪೂರ್ಣ ಸ್ವ ಇಚ್ಛೆಯಿಂದ ಮಾಡಬೇಕಾಗುತ್ತದೆ ಆತನಿಗೆ ಯಾವುದೇ ರೀತಿಯ ಬೆದರಿಕೆ ತೊಂದರೆ ಹಿಂಸೆ ಭಯ ಅಥವಾ ಒತ್ತಡಗಳನ್ನು ಉಂಟು ಮಾಡಿ ಈ ದಾನ ಪತ್ರಗಳನ್ನು ಬರೆಸಿಕೊಳ್ಳಬಾರದು.
ಈ ದಾನ ಪತ್ರವನ್ನು ಮಾಡುವಾಗ ಆ ವ್ಯಕ್ತಿ ಸ್ವಾಸ್ಥ್ಯ ಮನಸಿನಿಂದ ಕೂಡಿರಬೇಕು ಎನ್ನುವ ನಿಯಮಗಳು ಇವೆ. ಈ ದಾನಪತ್ರಗಳನ್ನು ಯಾರು ಯಾರಿಗೆ ಮಾಡಬಹುದು ಎಂದರೆ, ಹತ್ತಿರದ ಸಂಬಂಧ ಮತ್ತು ರಕ್ತ ಸಂಬಂಧಗಳಲ್ಲಿ ಯಾರಿಗೆ ಯಾರು ಬೇಕಾದರೂ ಈ ದಾನಪತ್ರಗಳನ್ನು ಮಾಡಬಹುದು. ಬೇರೆಯವರಿಗೂ ಸಹ ಈ ದಾನ ಪತ್ರಗಳನ್ನು ಮಾಡಬಹುದಾಗಿದೆ ಆದರೆ ರಕ್ತ ಸಂಬಂಧಗಳಲ್ಲಿ ಈ ದಾನ ಪಥಗಳನ್ನು ಮಾಡಿದರೆ ಅದನ್ನು ರಿಜಿಸ್ಟರ್ ಮಾಡುವ ಸಮಯದಲ್ಲಿ ಕೆಲವು ವಿನಾಯಿತಿಗಳು ಸಿಗುತ್ತವೆ.
ಈ ರೀತಿ ದಾನ ಪತ್ರಗಳನ್ನು ಮಾಡುತ್ತಿರುವವರು ಹಾಗೂ ಪಡೆಯುತ್ತಿರುವವರು ಇಬ್ಬರಿಂದ ಕೂಡ ಅನೇಕ ದಾಖಲೆಗಳು ಈ ದಾನಪತ್ರ ಮಾಡಲು ಬೇಕಾಗುತ್ತದೆ. ಮತ್ತು ಈ ರೀತಿ ದಾನ ಪತ್ರ ಆಗುತ್ತಿರುವಂತಹ ಆಸ್ತಿಗೆ ಸಂಬಂಧಪಟ್ಟ ಟೈಟಲ್ ಲೀಡ್ ಗಳು ಪ್ರಾಪರ್ಟಿ ಡೀಡ್ ಗಳು, ದಾನಪತ್ರ ಮಾಡುತ್ತಿರುವಂತಹ ವ್ಯಕ್ತಿಗೆ ಆ ಆಸ್ತಿ ಹೇಗೆ ಬಂತು ಎನ್ನುವ ವಿವರಗಳನ್ನು ತಿಳಿಸುವಂತಹ ಎಲ್ಲ ದಾಖಲೆಗಳು ಕೂಡ ದಾನಪತ್ರ ಮಾಡುವ ಸಮಯದಲ್ಲಿ ಬೇಕಾಗುತ್ತದೆ.
ಸಾಮಾನ್ಯವಾಗಿ ನಾವು ಯಾವುದೇ ಒಂದು ಆಸ್ತಿಯನ್ನು ರಿಜಿಸ್ಟರ್ ಮಾಡುವಾಗ ಆಸ್ತಿಗೆ ಸಂಬಂಧಪಟ್ಟ ಯಾವೆಲ್ಲ ದಾಖಲಾತಿಗಳು ಅಗತ್ಯ ಇರುತ್ತದೆಯೋ ದಾಖಲೆಗಳ ಎಲ್ಲಾ ಪ್ರತಿಗಳನ್ನು ಕೂಡ ದಾನ ಪತ್ರ ಮಾಡುವ ಸಮಯದಲ್ಲೂ ಕೂಡ ಕೊಡಬೇಕಾಗುತ್ತದೆ. ಈ ರೀತಿ ದಾನಪತ್ರ ಮಾಡಿ ಅದನ್ನು ರಿಜಿಸ್ಟರ್ ಮಾಡಿಸುವಾಗ ಇಬ್ಬರು ಸಾಕ್ಷಿಗಳ ಎದುರಿಗೆ ಇದನ್ನು ಮಾಡಿಸಬೇಕಾಗುತ್ತದೆ. ಈ ರೀತಿ ದಾನಪತ್ರ ಮಾಡಿಸುವುದು ಮತ್ತು ಅದನ್ನು ರಿಜಿಸ್ಟರ್ ಮಾಡಿಸುವ ಪ್ರಕ್ರಿಯೆಯ ಕುರಿತಂತೆ ಇನ್ನು ಹೆಚ್ಚಿನ ಕಾನೂನು ಮಾಹಿತಿಗಳನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ತಪ್ಪದೆ ಪೂರ್ತಿಯಾಗಿ ನೋಡಿ.