ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ದೇಶದ ಅತಿ ದೊಡ್ಡ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ತಿಂಗಳು ದೇಶದ ಸುಮಾರು 80 ಕೋಟಿ ಹೆಚ್ಚು ಪಡಿತರ ಚೀಟಿದಾರರು ಉಚಿತವಾಗಿ ಸರ್ಕಾರದಿಂದ ಪಡಿತರವನ್ನು ಪಡೆಯುತ್ತಿದ್ದಾರೆ. ಕರೋನ ಸಂಕಷ್ಟದಂತಹ ಸಮಯದಲ್ಲಿಯೂ ಕೂಡ ಪ್ರಧಾನಿ ಮಂತ್ರಿಗಳ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ದೇಶದ ನಾಗರಿಕರಿಗೆ ಆಹಾರ ಪದಾರ್ಥಗಳ ಕೊರತೆ ಆಗದಂತೆ ನೋಡಿಕೊಳ್ಳಲಾಯಿತು.
ಈ ಯೋಜನೆ ಆರಂಭವಾದ ಸಮಯದಲ್ಲಿ ನಿರ್ಗತಿಕರಿಗೆ ಹಾಗೂ ಬಡವರಿಗೆ ಆಹಾರ ಧಾನ್ಯಗಳನ್ನು ಅತಿ ಕಡಿಮೆ ಬೆಲೆಗೆ ತಲುಪಿಸುವ ಉದ್ದೇಶವನ್ನು ಹೊಂದಿತ್ತು. ನಂತರ ಉಚಿತವಾಗಿ ಒನ್ ರೇಷನ್ ಒನ್ ನೇಷನ್ ಧ್ಯೇಯದಡಿಯಲ್ಲಿ ದೇಶದ ಯಾವುದೇ ಭಾಗದಲ್ಲಿ ಯಾವುದೇ ಫಲಾನುಭವಿಯು ಆಹಾರ ಧಾನ್ಯವನ್ನು ಪಡೆಯುವ ರೀತಿ ಅನುಕೂಲ ಮಾಡಿಕೊಡಲಾಯಿತು.
ಸೆಪ್ಟೆಂಬರ್ 2022 ರಲ್ಲಿ ಈ ಯೋಜನೆ ಅವಧಿ ಮುಕ್ತಾಯವಾಗಿದ್ದರೂ ಈ ಯೋಜನೆಗೆ ಕಂಡು ಬಂದ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಇದು ದೇಶದ ಎಲ್ಲಾ ಜನರಿಗೂ ತಲುಪಿದ ಉತ್ತಮ ರೀತಿ ಮನಗಂಡು ಇದನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಿಸಲಾಯಿತು, ಆ ಪ್ರಕಾರವಾಗಿ ನೀಡಿದ್ದ ಗಡುವು ಕೂಡ ಈಗ ಮುಕ್ತಾಯವಾಗಿದೆ.
ಈಗ ಇದನ್ನು ಮತ್ತೆ ಆರು ತಿಂಗಳವರೆಗೆ ಮುಂದುವರಿಸಲು ಸರ್ಕಾರ ನಿರ್ಧರಿಸಲಾಗಿದೆ ಇದನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಯವರು ದೇಶದ 80 ಕೋಟಿಗೂ ಹೆಚ್ಚು ಜನರು ಇದರ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿದೆ, ದೇಶದ ಪ್ರತಿಯೊಬ್ಬ ನಾಗರಿಕನ ಶಕ್ತಿಯಲ್ಲಿ ಭಾರತದ ಶಕ್ತಿ ಅಡಗಿದೆ ಹಾಗಾಗಿ ಇದನ್ನು ವಿಸ್ತರಿಸಲಾಗುವುದು ಎಂದಿದ್ದಾರೆ.
ಈ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದಾಗಿ ಸರ್ಕಾರವು ಈ ಯೋಜನೆಯನ್ನು ವಿಸ್ತರಿಸಿದೆ ಎಂದು ಹೇಳಿದ ಪ್ರಧಾನಿಗಳು ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವಾದ PM-GKAY ಯ 5ನೇ ಹಂತವು ಮುಕ್ತಾಯವಾಗಿದೆ ಆದರೂ ಸದುದ್ದೇಶ ಹೊಂದಿರುವ ಈ ಯೋಜನೆಯ ಪ್ರಯೋಜನವನ್ನು ಇನ್ನಷ್ಟು ದಿನಗಳು ಪಡೆಯುವಂತಾಗಲಿ ಎನ್ನುವ ಕಾರಣಕ್ಕಾಗಿ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ರಾಜ್ಯದ ಜನತೆಗೆ ಡಬಲ್ ಧಮಾಕ ಎನ್ನಬಹುದು. ಯಾಕೆಂದರೆ ರಾಜ್ಯ ಸರ್ಕಾರವು ಕೂಡ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪಡಿತರವನ್ನು 10 ಕೆಜಿ ಇರಿಸಲಾಗುವುದು ಎನ್ನುವ ಭರವಸೆ ದಾಸ್ತಾನು ಲಭ್ಯವಾಗುವವರೆಗೂ ಕೇಂದ್ರದ 5Kg ರೇಷನ್ ಅನುದಾನದ ಜೊತೆ ಉಳಿದ 5Kg ಗೆ ಬದಲಾಗಿ ಹಣವನ್ನು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವವರ ಖಾತೆಗೆ ವರ್ಗಾವಣೆ ಮಾಡುತ್ತಿದೆ.
ಸರ್ಕಾರವು ಯೋಜನೆ ಆರಂಭ ಆದಾಗಲಿಂದ ಇಲ್ಲಿಯವರೆಗೆ ಸರಿಸುಮಾರು 2.60 ಲಕ್ಷ ಕೋಟಿ ರೂಪಾಯಿಗಳನ್ನು PM-GKAY ಗೆ ಖರ್ಚು ಮಾಡಿದೆ ಮತ್ತು ಮುಂದಿನ ಆರು ತಿಂಗಳವರೆಗೆ 80 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಇದು ಭಾರತದಾದ್ಯಂತ ಸುಮಾರು 80 ಕೋಟಿ ಫಲಾನುಭವಿಗಳನ್ನು ಒಳಗೊಳ್ಳುತ್ತದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಒಳಗೊಂಡಿರುವ ಎಲ್ಲಾ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯಗಳನ್ನು ಉಚಿತವಾಗಿ ಸಿಗುತ್ತದೆ ಹಾಗಾಗಿ ಈ ಯೋಜನೆ ಇನ್ನಷ್ಟು ದಿನಗಳವರೆಗೆ ಮುಂದುವರೆಯುವಂತಾಗಲಿ ಎನ್ನುವುದು ಹಲವರ ಬೇಡಿಕೆ.