ಉದ್ಯೋಗಿಗಳ ಭವಿಷ್ಯ ನಿಧಿ (EPF) ಎನ್ನುವುದು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುವ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಸಂಘಟಿತ ವಲಯದಲ್ಲಿ ದುಡಿಯುವ ಉದ್ಯೋಗಿಗಳ ಹೆಸರಿನಲ್ಲಿ EPF ಖಾತೆ ಓಪನ್ ಆಗುತ್ತದೆ. ಈ ಖಾತೆಗೆ ಅವರ ತಿಂಗಳ ಸಂಬಳದ 12% ಭಾಗವನ್ನು ಜಮಾ ಮಾಡಲಾಗುತ್ತದೆ.
ಉದ್ಯೋಗಿ ಹೂಡಿಕೆ ಮಾಡುವಷ್ಟೇ ಮೊತ್ತವನ್ನು ಕಂಪನಿಯು ಕೂಡಾ ಠೇವಣಿ ಮಾಡುತ್ತದೆ. ಆದರೆ ಅನೇಕರಿಗೆ EPF ಖಾತೆ ಹೊಂದಿದ್ದರು EPF ನ ನಿಯಮಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿಯದೆ ಹಲವು ಗೊಂದಲಗಳಿವೆ. ಅದರಲ್ಲಿ ಪ್ರಮುಖವಾಗಿ TAX ಬಗ್ಗೆ ಅನುಮಾನಗಳಿವೆ EPFO ದಲ್ಲಿ ಠೇವಣಿ ಇಡುವ ಮೊತ್ತವು ತೆರಿಗೆಗೆ ಒಳಪಡುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿ ಅನೇಕ ಖಾತೆದಾರರು ಇದ್ದಾರೆ.
ಇದರ ಕುರಿತು ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಕಾರ್ಮಿಕ ಭವಿಷ್ಯ ನಿಧಿ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಸರ್ಕಾರಿ ಯೋಜನೆಗಳಲ್ಲಿಯೇ ಅತ್ಯುತ್ತಮ ಯೋಜನೆಯಾಗಿದೆ ಎನ್ನಬಹುದು. ಉದ್ಯೋಗಿಗಳು ತಮ್ಮ ವೇತನದ 12% ಈ ನಿಧಿಗೆ ಠೇವಣಿ ಇಟ್ಟರೆ ಕಂಪನಿಯು ಸಹ ಅದೇ ಮೊತ್ತವನ್ನು ಪಾವತಿಸುತ್ತದೆ.
ಈ ನಿಧಿಯಲ್ಲಿ ಠೇವಣಿ ಇಡುವ ಮೊತ್ತಕ್ಕೆ ಸರ್ಕಾರವೂ ಕೂಡ ಬಡ್ಡಿಯನ್ನೂ ನೀಡುತ್ತದೆ. ಹಾಗಾಗಿ ಹೂಡಿಕೆ ಒಂದಕ್ಕೆ ಅತಿ ಹೆಚ್ಚಿನ ಲಾಭ ಬರುವ ಯೋಜನೆ ಎನ್ನಬಹುದು. ಇದು ಕೂಡ ಒಂದು ಬ್ಯಾಂಕ್ ಖಾತೆ ಮಾದರಿಯ ಉಳಿತಾಯ ಖಾತೆ ಆಗಿರುವ ಕಾರಣ ಆದಾಯ ತೆರಿಗೆ ಇಲಾಖೆಯು ಬ್ಯಾಂಕ್ ಖಾತೆಯು ಗಳಿಸುವ ಬಡ್ಡಿಯ ಮೇಲೆ ತೆರಿಗೆಯನ್ನು ವಿಧಿಸುವ ಹಾಗೆ EPF ಖಾತೆಯಲ್ಲಿ ಠೇವಣಿ ಇಡುವ ಮೊತ್ತವೂ ತೆರಿಗೆ ಹಾಕುತ್ತದೆಯೇ ಎನ್ನುವ ಕನ್ಫ್ಯೂಷನ್ ಇದೆ.
ಇದಕ್ಕೆ ಸ್ಪಷ್ಟತೆ ಏನೆಂದರೆ EPF ಖಾತೆಯಿಂದ ಬರುವ ಆದಾಯವು ಕೂಡ ವಿವಿಧ ತೆರಿಗೆಗಳಿಗೆ ಒಳಪಟ್ಟಿರುತ್ತದೆ. ಈ ಉದ್ಯೋಗ ಭವಿಷ್ಯ ನಿಧಿ ಖಾತೆಯಿಂದ ಹಣ ಹಿಂಪಡೆಯಬೇಕಾದರೆ ಕೆಲ ಸಮಯದಲ್ಲಿ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಅದರ ವಿವರ ಹೀಗಿದೆ. EPF ನಿಯಮಗಳ ಪ್ರಕಾರ, ಉದ್ಯೋಗಿಗಳು PF ನಿಧಿಯಿಂದ ಹಣವನ್ನು ಹಿಂತೆಗೆದುಕೊಳ್ಳಲು ಬಯಸಿದ ಸಮಯದಲ್ಲಿ ಕೆಲವು ಷರತ್ತುಗಳನ್ನು ಪೂರೈಸಬೇಕು. ನಿವೃತ್ತಿಯ ನಂತರವೇ EPF ನಿಧಿಯಿಂದ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು.
EPFO ಇದಕ್ಕಾಗಿ ವಯೋಮಿತಿಯನ್ನು ನಿಗದಿಪಡಿಸಿ 55 ವರ್ಷ ಎಂದು ಘೋಷಿಸಿದೆ. ನಿವೃತ್ತಿಯ ಮೊದಲು ಉದ್ಯೋಗಿ ಏನಾದರೂ PF ನಿಧಿಯಿಂದ ಹಣ ಪಡೆಯಲು ಬಯಸಿದರೆ ಆತನ ಖಾತೆಯಲ್ಲಿರುವ ಠೇವಣಿಗೆ ಕೇವಲ 90% ಮಾತ್ರ ಹಿಂಪಡೆಯಬಹುದು. ಒಂದು ವೇಳೆ ಒಬ್ಬ ವ್ಯಕ್ತಿಯು ತನ್ನ ಕೆಲಸವನ್ನು ಕಳೆದುಕೊಂಡರೆ, ಅಥವಾ ಆತನೇ ರಾಜೀನಾಮೆ ನೀಡಿದರೆ ಅವನು ಮೊದಲ ಬಾರಿಗೆ EPF ನಿಧಿಯಿಂದ 75% ರಷ್ಟು ಮತ್ತು ಎರಡನೇ ಬಾರಿಗೆ ಪೂರ್ಣ ಮೊತ್ತವನ್ನು ಹಿಂತೆಗೆದುಕೊಳ್ಳಬಹುದು.
PF ನಿಧಿಯಿಂದ ಹಣವನ್ನು ಹಿಂಪಡೆಯುವ ಮೊದಲು ಕೇಂದ್ರ ಸರ್ಕಾರವು ಅದಕ್ಕೆ ವಿಧಿಸಿರುವ ನಿಯಮಗಳ ಪ್ರಕಾರ ಕೆಲವು ದಾಖಲೆಗಳನ್ನು ಭರ್ತಿ ಮಾಡಬೇಕು. ಇದಲ್ಲದೆ, PF ನಿಧಿಯಿಂದ ಮೊತ್ತವನ್ನು ಹಿಂಪಡೆಯುವುದು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಸರಳವಾಗಿ ಹೇಳುವುದಾದರೆ EPF ಖಾತೆ ಹೂಡಿಕೆಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹಾ ಪಡೆಯಬಹುದು.
ಆದರೆ ಯಾವುದೇ ಇತರ ಮೂಲದಿಂದ ಬರುವ ಆದಾಯ ಅಥವಾ ಉದ್ಯೋಗಿ ಕೊಡುಗೆಯ ಮೇಲೆ ಪಡೆದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಕಂಪನಿಯ ಕೊಡುಗೆಗಳು ಮತ್ತು ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಉದ್ಯೋಗಿಯು 5 ವರ್ಷಗಳು ಪೂರ್ಣಗೊಳ್ಳುವ ಮೊದಲು PF ನಿಧಿಯಿಂದ ಹಣವನ್ನು ಹಿಂಪಡೆದರೆ TDS ಅನ್ನು ಕೂಡ ಕಡಿತಗೊಳಿಸಿ ನೀಡಲಾಗುತ್ತದೆ ಮತ್ತು 5 ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿ PF ನಿಧಿಯಿಂದ ಹಣವನ್ನು ಹಿಂಪಡೆದರೆ, ಅವರಿಗೆ ಯಾವುದೇ ತೆರಿಗೆ ವಿಧಿಸುವುದಿಲ್ಲ.