Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳು ಸರ್ಕಾರದಿಂದ ತಮಗೆ ಯಾವುದೇ ಸ್ಕಾಲರ್ಶಿಪ್ ಸಿಗುವುದಿಲ್ಲ ಎಂದು ಹೆಚ್ಚಿನ ಸಮಯ ಬೇಸರಗೊಂಡಿರುತ್ತಾರೆ. ಇನ್ನು ಮುಂದೆ ಆ ರೀತಿ ಬೇಜಾರು ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ, ಸರ್ಕಾರವು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುತ್ತಿದೆ.
ಅದೇ ರೀತಿ OBC ಅಂದರೆ 2A, 2B, 3A, 3B ವಿದ್ಯಾರ್ಥಿಗಳಿಗೂ ಕೂಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಭರ್ಜರಿ ಗುಡ್ ನ್ಯೂಸ್ ಇದೆ. ಈ ಯೋಜನೆಗಳಿಗೆ ನೀವು ಅರ್ಜಿ ಸಲ್ಲಿಸುವ ಮೂಲಕ ಈ ಆರ್ಥಿಕ ವರ್ಷದಲ್ಲಿ 50,000 ದಿಂದ 1 ಲಕ್ಷದವರೆಗೂ ಹಣ ಉಳಿತಾಯ ಮಾಡಬಹುದು, ಆಸಕ್ತಿ ಇರುವ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಮಾಹಿತಿಗಾಗಿ ಕೊನೆಯವರೆಗೂ ಓದಿ.
ಇತ್ತೀಚಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ ಮಾಡಲಾಗಿತ್ತು, ಆಗ ಹಿಂದುಳಿದ ವರ್ಗಗಳ ಸೇರಿದ ವಿದ್ಯಾರ್ಥಿಗಳು ತಮಗೂ ಕೂಡ ಈ ಅವಕಾಶ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆಸೆ ಪಟ್ಟಿದ್ದರು. ಅದಕ್ಕೆ ಈಗ ಸರ್ಕಾರ ಅಸ್ತು ಎಂದಿದೆ.
ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSC, KPSC, PSI, FDA ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ ಹುದ್ದೆ ಪಡೆಯಲು ಇಚ್ಚಿಸುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಉಚಿತವಾಗಿ ತರಬೇತಿ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದು ಎಂದರೆ ಅದು ಯಾವುದೇ ತಪಸ್ಸಿಗಿಂತ ಕಡಿಮೆ ಇಲ್ಲ. ಕಾಲೇಜು ಶಿಕ್ಷಣ ಒಂದು ರೀತಿ ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ರೀತಿಯ ಬೇರೆ ಇರುತ್ತದೆ. ಇದಕ್ಕೆ ಪೂರಕ ವಾತಾವರಣ ಕೂಡ ಇರಬೇಕು. ಇದಕ್ಕಾಗಿ ಸಮಾನ ಮನಸ್ಥಿತಿಯ ವಿದ್ಯಾರ್ಥಿಗಳು ಒಟ್ಟಿಗೆ ಕೂಡಿ ಓದುತ್ತಾ, 24*7 ಲೈಬ್ರರಿ ವ್ಯವಸ್ಥೆ ಹೊಂದಿ.
ವಿದ್ಯಾಭ್ಯಾಸಕ್ಕೆ ಅಗತ್ಯ ಇರುವ ದಿನಪತ್ರಿಕೆಗಳು ಮ್ಯಾಗಝೀನ್ ಗಳನ್ನು ಸರ್ಕಾರದ ವತಿಯಿಂದ ಉಚಿತವಾಗಿ ಪಡೆದು ತಜ್ಞರಿಂದ ಈ ಕುರಿತು ಚರ್ಚೆ ಹಾಗೂ ತರಬೇತಿ ಪಡೆದುಕೊಂಡು ಒಬ್ಬ ಸರ್ಕಾರಿ ನೌಕರನಾಗಿ ಹೊರಬರಲು ಸರ್ಕಾರದ ವತಿಯಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಪದವಿ ವಿದ್ಯಾಭ್ಯಾಸ ಮುಗಿಸಿರುವ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಖಾಸಗಿ ಸಂಸ್ಥೆಗಳಲ್ಲಿ ರೂ. 50,000ದಿಂದ 1 ಲಕ್ಷದವರೆಗೆ ಶುಲ್ಕ ವಿಧಿಸುತ್ತಾರೆ, ಆದರೆ ಈಗ ಸರ್ಕಾರ ಉಚಿತವಾಗಿ ಈ ಅವಕಾಶ ಕಲ್ಪಿಸಿಕೊಟ್ಟಿದೆ.
ಅರ್ಜಿ ಸಲ್ಲಿಸುವ ವಿಧಾನ:-
* bcwd.karnataka.gov.in ಈ ಲಿಂಕ್ ಕ್ಲಿಕ್ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
* ಮುಖಪುಟದಲ್ಲಿ online application for UPSC and Banking pre examination coaching for the year 2023-24 ಎನ್ನುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
* ಯು.ಪಿ.ಎಸ್.ಸಿ / ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿಗಾಗಿ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ ಎನ್ನುವ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಆಧಾರ್ ಸಂಖ್ಯೆಯಲ್ಲಿ ಇರುವಂತೆ ಹೆಸರನ್ನು ಹಾಕಿ ಕ್ಯಾಪ್ಚ ಕೋಡ್ ಎಂಟ್ರಿ ಮಾಡಿ ಪ್ರೋಸಿಡ್ ಕ್ಲಿಕ್ ಮಾಡಿ ನಂತರ ನಿಮ್ಮ ಕೆಲ ವೈಯುಕ್ತಿಕ ಹಾಗೂ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ವಿವರಗಳನ್ನು ಕೇಳಲಾಗಿರುತ್ತದೆ, ಅದರಲ್ಲಿ ತುಂಬಿಸಿ ಅರ್ಜಿ ಸಲ್ಲಿಕೆ ಕಂಪ್ಲೀಟ್ ಮಾಡಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 04 ಡಿಸೆಂಬರ್, 2023.