ರಾಜ್ಯದ ಎಲ್ಲಾ ರೈತರಿಗೂ ಕೂಡ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿಯೊಂದು ಇದೆ. ರಾಜ್ಯದ ರೈತರಿಗೆ ಸರ್ಕಾರವು ಈಗಾಗಲೇ ನಾನಾ ಯೋಜನೆಯಿಂದ ಅನುಕೂಲತೆ ಮಾಡಿಕೊಟ್ಟಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ರೈತ ಯುವಕರನ್ನು ಪ್ರೋತ್ಸಾಹಿಸುವ ಕಾರಣ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ನಷ್ಟವನ್ನು ಅನುಭವಿಸುತ್ತಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತುಕೊಟ್ಟು ಪ್ರೋತ್ಸಾಹ ನೀಡುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ.
ಪ್ರತಿ ವರ್ಷ ಬಜೆಟ್ ಆದಾಗಲೂ ಕೂಡ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ರೈತರ ಗಾಗಿಯೇ ಒಂದು ಮೊತ್ತದ ಹಣ ಮೀಸಲಾಗಿರುತ್ತದೆ. ಇದನ್ನು ದೇಶದಾದ್ಯಂತ ಅಥವಾ ರಾಜ್ಯದಲ್ಲಿ ಇರುವ ರೈತರ ಶ್ರೇಯೋಭಿವೃದ್ಧಿಗೆ ಬಳಸಲಾಗುತ್ತದೆ. ಕೃಷಿ ಚಟುವಟಿಕೆಗೆ ಅಗತ್ಯವಾಗಿ ಬೇಕಾದ ರಸಗೊಬ್ಬರಗಳು ಬಿತ್ತನೆ ಬೀಜ ಇವುಗಳನ್ನು ಸಬ್ಸಿಡಿಯಲ್ಲಿ ವಿತರಣೆ ಮಾಡುವುದು ಮತ್ತು ಕೃಷಿ ಸಾಮಗ್ರಿಗಳು ಯಂತ್ರೋಪಕರಣಗಳು ಇವುಗಳ ಖರೀದಿಗೆ ಸಬ್ಸಿಡಿ ರೂಪದ ಸಾಲ ಹಾಗೂ ಸಹಾಯಧನವನ್ನು ನೀಡುವುದು.
ಕೃಷಿ ಸಾಲಕ್ಕೆ ಕಡಿಮೆ ಬಡ್ಡಿ ದರದಲ್ಲಿ ಅಥವಾ ಬಡ್ಡಿ ರಹಿತವಾಗಿ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಗಳ ಮೂಲಕ ಸಾಲ ನೀಡುವುದು ಇನ್ನು ಮುಂತಾದ ಅನೇಕ ಯೋಜನೆಗಳನ್ನು ಕೈಗೊಂಡಿರುವ ಸರ್ಕಾರಗಳು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮತ್ತು CM ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೂಡ ರೈತರಿಗೆ ಸಹಾಯಧನವನ್ನು ನೀಡುತ್ತಿವೆ. ಇದನ್ನು ಹೊರತುಪಡಿಸಿ ಬೆಳೆವಿಮೆ ಕೂಡ ನೀಡುತ್ತಿವೆ.
ಇದರಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತಹ ಫಸಲು ಭೀಮಾ ಯೋಜನೆಯು ದೇಶದಾದ್ಯಂತ ಹೆಸರುವಾಸಿಕೆಯಾಗಿದೆ. ಈ ಬೆಳೆ ವಿಮೆ ಬಗ್ಗೆ ದೇಶದ ಪ್ರತಿಯೊಬ್ಬ ರೈತನಿಗೂ ಕೂಡ ತಿಳಿಯಬೇಕು ಎನ್ನುವ ಕಾರಣಕ್ಕೆ ಜಾಹೀರಾತಿನ ಮೂಲಕ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಫಸಲು ಭೀಮಾ ಯೋಜನೆಯಿಂದ ರೈತರು ಬೆಳೆ ಹಾನಿ ಆದಾಗ ತಮ್ಮ ಬೆಳೆಗಳಿಗೆ ತಗುಲಿದ ವೆಚ್ಚದ ಮೊತ್ತವನ್ನು ವಿಮೆ ರೂಪದಲ್ಲಿ ಸರ್ಕಾರದಿಂದ ವಾಪಸ್ಸು ಪಡೆದುಕೊಳ್ಳಬಹುದು.
ಪ್ರತಿ ಗ್ರಾಮ ಒನ್ ಕೇಂದ್ರಗಳಲ್ಲಿ ಕೂಡ ಈ ರೀತಿ ಬೆಳೆ ವಿಮೆಗಳನ್ನು ಮಾಡಿಸುವ ವ್ಯವಸ್ಥೆ ಮಾಡಿಕೊಡಲಾಗಿದ್ದು ಗ್ರಾಮ ಒನ್ ಸಿಬ್ಬಂದಿಗಳಿಗೂ ಕೂಡ ಈ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ರೈತರಿಗೆ ಮಾಹಿತಿ ತಿಳಿಸಲು ತರಬೇತಿ ನೀಡಲಾಗುತ್ತಿದೆ. ಪ್ರತಿ ಜಿಲ್ಲೆಯ ಆಯ್ದ ಹತ್ತು ಬೆಳೆಗಳಿಗೆ ಈ ರೀತಿ ಆ ಜಿಲ್ಲೆಯ ರೈತರುಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಲು ಹೇಳಲಾಗುತ್ತದೆ. ಹಾಗೆ ಒಂದು ಕನಿಷ್ಠ ಮೊತ್ತದ ವಿಮೆಯನ್ನು ಕೂಡ ಬೆಲೆಯಲ್ಲಿ ರೈತ ಕಟ್ಟಬೇಕಾಗುತ್ತದೆ ನಂತರ ಬೆಳೆ ಅತಿವೃಷ್ಟಿ ಅನಾವೃಷ್ಟಿ ಅಥವಾ ರೋಗಭಾಧೆಯಿಂದ ಹಾಳಾದಾಗ ರೈತನಿಗೆ ಈ ವಿಮೆ ಹಣ ಸಿಗುತ್ತದೆ.
ಇದರ ಜೊತೆಗೆ ರಾಜ್ಯ ಸರ್ಕಾರ ರೈತರಿಗೆ ಮತ್ತೊಂದು ಭರವಸೆ ಸಿಕ್ಕಿದೆ. ರಾಜ್ಯದಲ್ಲಿ ಬೀದರ್, ಯಾದಗಿರಿ ವಿಜಯಪುರ ಮತ್ತು ಕಲ್ಬುರ್ಗಿ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ನಲ್ಲಿ ತೊಗರಿ ಬೆಳೆ ಬೆಳೆದ ರೈತರಿಗೆ ನೆಟೆರೋಗ ಬಾಧಿಸಿದೆ. ಇದರಿಂದ ತೀವ್ರ ಸಂಕಷ್ಟದಲ್ಲಿರುವ ರೈತರುಗಳಿಗೆ ಈಗ ಸರ್ಕಾರದ ಕಡೆಯಿಂದ ಪ್ರತಿ ಹೆಕ್ಟೇರಿಗೆ 10 ಸಾವಿರ ರೂ ಸಹಾಯಧನ ಸಿಗುವ ಭರವಸೆ ಸಿಕ್ಕಿದೆ.
ಈ ಬಗ್ಗೆ ನೂತನ ಕೃಷಿ ಸಚಿವರಾಗಿರುವ ಚೆಲುವರಾಯಸ್ವಾಮಿ ಅವರೇ ಹೇಳಿಕೆ ಕೊಟ್ಟಿದ್ದಾರೆ. ಅರ್ಹ ರೈತರುಗಳು ಗ್ರಾಮ ಲೆಕ್ಕಾಧಿಕಾರಿಗಳಿಗೆ ರೈತರ ಆಧಾರ್ ಕಾರ್ಡ್, ಬ್ಯಾಂಕಿನ ಪಾಸ್ ಪುಸ್ತಕ ಮತ್ತು ಜಮೀನಿನ ಪಹಣಿ ಇತ್ಯಾದಿ ಮಾಹಿತಿಗಳ ಜೊತೆಗೆ ಅರ್ಜಿ ಕೂಡ ಸಲ್ಲಿಸಿ. ಈ ಯೋಜನೆಯ ಫಲಾನುಭವಿಗಳಾಗಬಹುದು.