ಮನೆಯಲ್ಲಿ ಇದ್ದರೆ ಚಿನ್ನ ಚಿಂತೆಯು ಏತಕೆ ಇನ್ನ ಎನ್ನುವ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ಕಷ್ಟಕಾಲಕ್ಕೆ ಕೈಯಲ್ಲಿ ಹಣ ಇಲ್ಲದಿದ್ದರೆ ಮನೆಯಲ್ಲಿರುವ ಬಂಗಾರವನ್ನು ಅಡವಿಟ್ಟು ಸಾಲ ಪಡೆದು ಸಮಸ್ಯೆಯಿಂದ ಹೊರ ಬರಬಹುದು. ಹಾಗಾಗಿ ಹೆಚ್ಚಿನ ಜನ ಬಂಗಾರವನ್ನು ಕೂಡ ಒಂದು ಪ್ರಾಪರ್ಟಿ ಆಗಿ ಪರಿಗಣಿಸಿ ಅದರ ಮೇಲೆ ಹೂಡಿಕೆ ಮಾಡುತ್ತಾರೆ.
ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಬಂಗಾರದ ಮೇಲೆ ಎಷ್ಟು ಮೋಹ ಇದೆ ಎಂದು ಎಲ್ಲರಿಗೂ ಗೊತ್ತು. ಅದೊಂದು ಅಲಂಕಾರಿಕ ಸಾಧನವು ಆಗಿದೆ ಹಾಗೆ ಪ್ರತಿಷ್ಠೆಯನ್ನು ತೋರಿಸುವಂತಹ ಸೊತ್ತು ಮಾತ್ರವಲ್ಲದೆ ಕಷ್ಟ ಕಾಲಕ್ಕೆ ನೆರವಾಗುವಂತಹ ಸ್ನೇಹಿತ ಕೂಡ ಹೌದು. ಆದರೆ ಈ ರೀತಿ ಬಂಗಾರದಂತ ತೆಗೆದುಕೊಳ್ಳುವಾಗ ಹಲವಾರು ವಿಷಯಗಳ ಬಗ್ಗೆ ಗಮನ ಇರಬೇಕು.
ಈಗ ಸಾಕಷ್ಟು ಬಂಗಾರದ ಮೇಲೆ ಲೋನ್ ಕೊಡುವಂತಹ ಫೈನಾನ್ಸ್ ಕಂಪನಿಗಳು ಶುರು ಆಗಿವೆ. ಗಲ್ಲಿಗೊಂದು ಆಫೀಸ್ ಇರುವ ಇಂತಹ ಕಂಪನಿಗಳ ಬಳಿ ಹೋಗುವ ಮುನ್ನ ಗ್ಯಾರಂಟಿ ಬಗ್ಗೆ ಕೂಡ ಚಿಂತೆ ಮಾಡಬೇಕು. ಅಷ್ಟು ಮಾತ್ರ ಅಲ್ಲದೆ ನಮ್ಮ ಚಿನ್ನಕ್ಕೆ ಎಷ್ಟು ಪರ್ಸೆಂಟ್ ಬಡ್ಡಿ ವಿಧಿಸಿದ್ದಾರೆ, ಆ ಸಾಲ ತಿಳಿಸುವುದಕ್ಕೆ ಎಷ್ಟು ಸಮಯ ಕೊಡುತ್ತಿದ್ದಾರೆ ಇದಕ್ಕಿಂತ ಬೇರೆ ಫೈನಾನ್ಸ್ ಕಂಪನಿಗಳಿಗೆ ಎಷ್ಟು ವ್ಯತ್ಯಾಸವಿದೆ ಈ ಎಲ್ಲ ವಿಷಯಗಳ ಬಗ್ಗೆ ಕೂಡ ಗಮನ ಹರಿಸಬೇಕು.
ಇಲ್ಲವಾದಲ್ಲಿ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಆದರೆ ಚಿನ್ನ ಅಡವಿಡುವ ಸಮಯದಲ್ಲಿ ಕೈಗೆ ಹಣ ಬಂದರೆ ಸಾಕು ಎಂದು ಅನೇಕರು ಹತ್ತಿರದಲ್ಲಿರುವ ಯಾವುದೋ ಒಂದು ಫೈನಾನ್ಸ್ ಕಂಪನಿಗೆ ಹೋಗಿ ಚಿನ್ನ ಅಡವಿಟ್ಟು ಬಂದುಬಿಡುತ್ತಾರೆ. ಬಳಿಕ ಕೆಲ ದಿನಗಳಾದ ಮೇಲೆ ಮಾಡಿದ ತಪ್ಪಿನ ಅರಿವಾಗುತ್ತದೆ.
ಅಂತಹ ಸಮಯದಲ್ಲೂ ಕೂಡ ನಿಮ್ಮ ಸಾಲವನ್ನು ಬ್ಯಾಂಕ್ ನಿಂದ ಬ್ಯಾಂಕಿಗೆ ವರ್ಗಾವಣೆ ಮಾಡಿಕೊಳ್ಳುವ ಅನುಕೂಲತೆ ಸಿಕ್ಕರೆ ಎಷ್ಟು ಉಪಯೋಗ ಅಲ್ಲವೇ, ಇಂತಹದೊಂದು ಅವಕಾಶ ಈಗ ಲಭ್ಯವಿದೆ. ಅದರಿಂದ ನೀವು ಯಾವುದೇ ಫೈನಾನ್ಸ್ ಕಂಪನಿಯಲ್ಲೂ ಕೂಡ ನಿಮ್ಮ ಬಂಗಾರವನ್ನು ಅಡವಿಟ್ಟಿದ್ದರೆ.
ಬಳಿಕ ಬೇರೆ ಕಂಪನಿಯಲ್ಲಿ ನಿಮಗೆ ಅನುಕೂಲಕರವಾದ ಕಂಡಿಷನ್ ಗಳ ಜೊತೆ ಹೆಚ್ಚು ಮೊತ್ತದ ಹಣ ಸಿಗುತ್ತದೆ ಎಂದು ಅಥವಾ ಹೆಚ್ಚು ಕಾಲಾವಕಾಶ ಇದೆ ಎಂದು ಅಥವಾ ಕಡಿಮೆ EMI ಸೌಲಭ್ಯ ಇದೆ ಎಂದು ನೀವು ಅಲ್ಲಿ ಸಾಲ ಪಡೆಯಲು ಇಚ್ಛಿಸಿದರೆ, ಈಗಾಗಲೇ ಪಡೆದಿರುವ ಸಾಲವನ್ನು ತೀರಿಸುವುದರ ಬದಲು ಮತ್ತೊಂದು ಕಂಪನಿಗೆ ನಿಮ್ಮ ಲೋನ್ ಅನ್ನು ಟ್ರಾನ್ಸ್ಫರ್ ಮಾಡಬಹುದು.
ಈ ಹೊಸ ಅವಕಾಶದಿಂದ ಚಿನ್ನ ಇಟ್ಟು ಸಾಲ ಪಡೆಯುವ ಗ್ರಾಹಕನಿಗೆ ಬಾರಿ ವರಮಾನವಾಗುತ್ತದೆ. ಯಾಕೆಂದರೆ ಕೆಲವೊಮ್ಮೆ ನೀವು ಇಟ್ಟಿದ್ದ ಬಂಗಾರಕ್ಕೆ ಫೈನಾನ್ಸ್ ಕಂಪನಿ ಕೊಟ್ಟಿದ್ದ ಹಣಕ್ಕಿಂತ ಹೆಚ್ಚಿನ ಮೊತ್ತದ ಹಣ ಬೇರೆ ಫೈನಾನ್ಸ್ ಕಂಪನಿಯಲ್ಲಿ ಸಿಗಬಹುದು ಅಥವಾ ಬಡ್ಡಿದರ ಕಡಿಮೆ ಆದರೆ ಅದು ಕೂಡ ನಿಮಗೆ ಉಳಿತಾಯವೇ ಮತ್ತು ಈ ರೀತಿ ಲೋನ್ ಟ್ರಾನ್ಸ್ಫರ್ ಮಾಡಿದಾಗ ಮತ್ತೊಮ್ಮೆ ಸಾಲ ಕಟ್ಟುವ ಅವಧಿ ವಿಸ್ತರಿಸುವುದರಿಂದ EMI ಕೂಡ ಕಡಿಮೆ ಆಗುತ್ತದೆ.
ಆಗ ನಿಮ್ಮ ತಿಂಗಳ ಬಜೆಟ್ ಸ್ವಲ್ಪ ಕಡಿಮೆ ಆಗುತ್ತದೆ. ಈಗಾಗಲೇ ಯಾವುದೇ ಫೈನಾನ್ಸ್ ಕಂಪನಿಯಲ್ಲಿ ನಿಮ್ಮ ಚಿನ್ನವನ್ನು ಅಡ ಇಟ್ಟಿದ್ದರೆ ಈ ಕೂಡಲೇ ಹೋಗಿ ಈ ವಿಷಯದ ಬಗ್ಗೆ ಚರ್ಚಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.