ಕೃಷಿ (Agriculture) ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ, ರೈತನನ್ನು (Farmer) ನಮ್ಮ ದೇಶದ ಬೆನ್ನೆಲುಬು ಎಂದು ಕೂಡ ಹೇಳುತ್ತೇವೆ. ಹಾಗಾಗಿ ಕೃಷಿ ವಲಯವು ಸಮೃದ್ಧಿಯಾಗಿದ್ದರೆ ದೇಶವು ಅಭಿವೃದ್ಧಿಯಾದಂತೆ. ಅದರಲ್ಲೂ ಕೂಡ ಭಾರತವು ಹಳ್ಳಿಗಳಿಂದ ಕೂಡಿದ ದೇಶ ಹಾಗಾಗಿ ಹಳ್ಳಿಯಲ್ಲಿ ಇರುವಂತಹ ಆರ್ಥಿಕ ಪರಿಸ್ಥಿತಿಯನ್ನು ಸುಭದ್ರವಾಗಿಸಲು ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿವೆ.
ರೈತರಿಗೆ ಕೃಷಿ ಹೆಚ್ಚಿನ ಆದಾಯ ತರುವ ಮೂಲವಾಗಿದ್ದರೂ ಕೂಡ ಇದರೊಂದರಿಂದಲೇ ಆತನ ಜೀವನ ನಡೆಯಲಾರದು, ಹಾಗಾಗಿ ಬಿಡುವಿನ ಸಮಯದಲ್ಲಿ ಆತ ಕೃಷಿಯ ಜೊತೆಗೆ ಕೃಷಿಗೆ ಸಂಬಂಧಿಸಿದ ಕಸಬುಗಳಾದ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ, ಮೀನುಗಾರಿಕೆ ಇವುಗಳಲ್ಲಿ ಕೂಡ ತೊಡಗಿಕೊಳ್ಳುತ್ತಾನೆ.
ಆದರೆ ಈಗ ದೇಶದಲ್ಲಿ ಅವುಗಳಿಗೂ ಎಷ್ಟು ಬೇಡಿಕೆ ಎಂದರೆ ಕೃಷಿಯಂತೆ ಅದನ್ನು ಕೂಡ ಕಾಣಲಾಗಿದೆ. ಯಾಕೆಂದರೆ ಕೃಷಿ ಮೂಲಕ ಹೇಗೆ ಆಹಾರದ ಕೊರತೆ ನೀಡುತ್ತದೆಯೋ ಅದೇ ರೀತಿ ಹೈನುಗಾರಿಕೆ ಹಾಗೂ ಕುರಿ ಕೋಳಿ ಸಾಕಾಣಿಕೆ, ಮೀನುಗಾರಿಕೆ ಇವುಗಳು ಕೂಡ ಆಹಾರದ ಮೂಲಗಳಾಗಿವೆ.
ಇದರಿಂದ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಸರ್ಕಾರ ಇದನ್ನೇ ಉದ್ದಿಮೆಯಾಗಿ ಆರಂಭಿಸಿಕೊಂಡು ಹಳ್ಳಿಯಲ್ಲಿ ಇದ್ದುಕೊಂಡು ಈ ಕ್ಷೇತ್ರದಲ್ಲಿ ಸಾಧನೆ ಮಾಡ ಬಯಸುವ ರೈತನಿಗೆ ಇದಕ್ಕೆ ಸಂಬಂಧಿಸಿದ ಘಟಕ ನಿರ್ಮಾಣ ಮಾಡಿಕೊಳ್ಳಲು ಮತ್ತು ಅದಕ್ಕೆ ಬೇಕಾದ ಮೂಲಭೂತ ವೆಚ್ಚಗಳಿಗೆ ನೆರವು ನೀಡಲು ರಾಷ್ಟ್ರೀಯ ಜಾನುವಾರು ಮಿಷನ್ (NLM Scheme) ಎನ್ನುವ ಅಭಿಯಾನವನ್ನು ಆರಂಭಿಸಿದೆ .
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ (Animal husbandry and dairy farming and fishing department) ಅರ್ಹ ಮತ್ತು ಆಸಕ್ತ ರೈತರಿಗೆ ತಮ್ಮ ಉತ್ತಮ ಸ್ಥಾಪನೆಗೆ ಆಹ್ವಾನ ಮಾಡಿದೆ. ಸೂಕ್ತ ದಾಖಲೆಗಳನ್ನು ನೀಡಿ ರೈತರು ಕನಿಷ್ಠ 50 ಲಕ್ಷದವರೆಗೆ ಸಾಲ ಪಡೆಯಬಹುದು ಮತ್ತು ಇದರಲ್ಲಿ ಅರ್ಧದಷ್ಟು ಸಬ್ಸಿಡಿ ಆಗಿರುತ್ತದೆ.
ರೈತರಿಗೆ ಹೆಚ್ಚಿನ ಆನುವಂಶಿಕ ಅರ್ಹತೆಯ ರಾಸುಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ತಳಿ ಗುಣಾಕಾರ ಮಾಡುವ ಫಾರ್ಮ್ಗಳ ನಿರ್ಮಾಣ ಮಾಡಲು 50% ಬಂಡವಾಳ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ದನ-ಕರು ಸಾಕಾಣಿಕೆ, ಹೈನುಗಾರಿಕೆ, ಕೋಳಿ, ಕುರಿ, ಮೇಕೆ,ಹಂದಿ ಸಾಕಾಣಿಕೆ, ಮೇವು ಬೆಳೆಯುವುದು ಮತ್ತು ಹಾಲಿನ ಸಂಗ್ರಹಣೆ, ಸಂಸ್ಕರಣೆ, ಮಾರುಕಟ್ಟೆ ಮತ್ತು ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಮತ್ತು ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣಕ್ಕೆ ಒತ್ತು ನೀಡುವ ಮೂಲಕ ಡೈರಿ ಅಭಿವೃದ್ಧಿಗಾಗಿ
ಹಬ್ ಸ್ಪೋಕ್ ಮಾದರಿಯ ಮೂಲಕ ಶೇ.50ರಷ್ಟು ಸಬ್ಸಿಡಿ ನೀಡುತ್ತಿದೆ.
ರಾಷ್ಟ್ರೀಯ ಜಾನುವಾರು ಮಿಷನ್ ಗ್ರಾಮೀಣ ಉದ್ಯಮಶೀಲತೆಯನ್ನು ಸೃಷ್ಟಿಸಿ ಮತ್ತು ನಿರುದ್ಯೋಗಿ ಯುವಕರು ಮತ್ತು ಜಾನುವಾರು ಸಾಕಾಣಿಕೆ ಆಸಕ್ತಿ ಇದ್ದವರಿಗೆ ಉತ್ತಮ ಜೀವನೋಪಾಯದ ಅವಕಾಶವನ್ನು ಕಲ್ಪಿಸಿಕೊಟ್ಟ ಆತ್ಮ ನಿರ್ಭರ ಭಾರತ ಕಟ್ಟಲು ದಿಟ್ಟ ಹೆಜ್ಜೆ ಇಡುತ್ತಿದೆ. ತಮ್ಮ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರುವಂತಹ ರೈತರು 5 ಎಕರೆ ಜಮೀನಿಗೆ ಕನಿಷ್ಠ 50 ಲಕ್ಷದವರೆಗೆ ಸಬ್ಸಿಡಿ ಸಮೇತ ಸಾಲ ಸೌಲಭ್ಯ ಪಡೆಯಬಹುದು.
ಇದಕ್ಕೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (SIDBI) ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ನೆರವಾಗಲಿದೆ. NLM ಯೋಜನೆ ಆನ್ಲೈನ್ ಪೋರ್ಟಲ್ ನಲ್ಲಿ ರೈತರು ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ.