ರೈತನಿಗೆ ಮಹತ್ವದ ಸುದ್ದಿ.! ಆಕಸ್ಮಿಕವಾಗಿ ಹಸು ಕರು ಎತ್ತು ಮ-ರಣ ಹೊಂದಿದ್ರೆ ಈ ಯೋಜನೆಯಡಿ 10,000 ಪರಿಹಾರಧನ ಸಿಗುತ್ತೆ.!

 

WhatsApp Group Join Now
Telegram Group Join Now

ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ (Congress ruling) ಸರ್ಕಾರ ಆಡಳಿತದಲ್ಲಿದಾಗ ಅನುಗ್ರಹ ಯೋಜನೆ(Anugraha) ಎನ್ನುವ ಯೋಜನೆಯನ್ನು ಜಾರಿಗೆ ತಂದಿತ್ತು. ನಂತರ BJP ಆಡಳಿತದಲ್ಲಿ ಹಿನ್ನಡೆಯಾಗಿದ್ದ ಈ ಯೋಜನೆಗೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿರುವುದರಿಂದ ಮತ್ತೆ ಬಲ ಬಂದಿದೆ.

ಅದರಲ್ಲೂ ಈ ಬಾರಿ ರೈತರಿಗೆ ಮಳೆ ಕೊರತೆಯಾಗಿ ಕೃಷಿ ಕೈಕೊಟ್ಟಿರುವುದರಿಂದ ಜಾನುವಾರುಗಳನ್ನು ಪರ್ಯಾಯ ಆದಾಯವಾಗಿ ಅವಲಂಬಿಸಿರುವವರಿಗೆ ಈ ಯೋಜನೆ ನೆರವಿಗೆ ಬರಲಿದೆ. ರಾಜ್ಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯು (Animal husbandry and Vertinary services) ಈಗ ಅನುಗ್ರಹ ಯೋಜನೆ (Anugraha scheme for farmers) ಕುರಿತಂತೆ ಒಂದು ಪತ್ರಿಕಾ ಪ್ರಕಟಣೆಯನ್ನು ಕೂಡ ಹೊರಡಿಸಿದ್ದು.

2023-24ನೇ ಸಾಲಿನಲ್ಲಿ ರಾಜ್ಯದ ರೈತರು ಪಶುಸಖಿಯರ (Pashusakhi) ಮೂಲಕ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಯೋಜನೆ ಬಗ್ಗೆ ಮತ್ತು ಇದರ ವಿವರಗಳ ಕುರಿತು ಪ್ರಮುಖ ಮಾಹಿತಿ ಇಲ್ಲಿದೆ ನೋಡಿ.
● ಯೋಜನೆಗೆ ಹೆಸರು:- ಅನುಗ್ರಹ ಯೋಜನೆ
● ಇಲಾಖೆ ಹೆಸರು:- ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಇಲಾಖೆ

● ಯೋಜನೆಯ ವಿವರ:-
ಪಶುಸಂಗೋಪನಾ ಯೋಜನೆಯಡಿಯಲ್ಲಿ ರೈತನು ಸಾಕುವ ಪ್ರಾಣಿಗಳು ಅಕಸ್ಮಾತ್ ಆಗಿ ಮ’ರ’ಣ ಹೊಂದಿದಾಗ ಪರಿಹಾರ ಪಡೆದುಕೊಳ್ಳಬಹುದು. ಪಶು ಸಂಗೋಪನೆಯಲ್ಲಿ ತೊಡಗಿಕೊಂಡಿರುವ ಕೃಷಿ ಜೊತೆಗೆ ಹಸು ಎಮ್ಮೆ ದನ ಕರು ಕುರಿ ಮೇಕೆ ಸಾಕುವ ರೈತನು ಈ ಯೋಜನೆಯ ಪ್ರಯೋಜನ ಪಡೆಯಬಹುದು.

● ಪರಿಹಾರ:-
2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿ ಕುರಿ ಮತ್ತು ಮೇಕೆಗಳಿಗೆ 5,000 ರೂ. ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ 10,000 ರೂ. ಪರಿಹಾರ ಒದಗಿಸಲು ಇಲಾಖೆ ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.

ಇದರಲ್ಲಿ ತಿಳಿಸಿರುವ ಮಾಹಿತಿ ಹೀಗಿದೆ. ಜಾನುವಾರು ಮಾಲೀಕರಿಗೆ ತಿಳಿಸುವುದೇನೆಂದರೆ 2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿ ಆಕಸ್ಮಿಕ ಮ.ರಣ ಹೊಂದಿದ ಆಡು ಮತ್ತು ಕುರಿಗಳಿಗೆ ಪ್ರತಿಯೊಂದಕ್ಕೆ ಗರಿಷ್ಟ 5000ರೂ. ಮತ್ತು ದನ ಮತ್ತು ಎಮ್ಮೆಗಳಿಗೆ ಗರಿಷ್ಠ 10,000ರೂ. ನಂತೆ ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿದೆ.

ಜಾನುವಾರು ಮಾಲೀಕರು ಸದರಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮೃತಪಟ್ಟ ಜಾನುವಾರಿನ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶು ವೈದ್ಯರಿಂದ ದೃಢೀಕರಿಸಿದ ನಂತರವೇ ಯೋಜನೆಯ ಪ್ರಯೋಜವನ್ನು ಪಡೆಯಲು ಸಾಧ್ಯ ಎಂದು ಈ ಮೂಲಕ ತಿಳಿಸಿದೆ. ಪಶು ಸಖಿಯರು ಮೃತಪಟ್ಟ ಜಾನುವಾರು ಮಾಲೀಕರಿಗೆ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲು ಕೋರಿದೆ ಎಂದು ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ.

● ಪ್ರಯೋಜನ ಪಡೆಯುವ ವಿಧಾನ:-
1. ರೈತರು ಜಾನುವಾರುಗಳು ಮ.ರಣ ಹೊಂದಿದ ತಕ್ಷಣ ಸ್ಥಳೀಯ ಪಶು ಆಸ್ಪತ್ರೆಗೆ ಭೇಟಿ ಕೊಟ್ಟು ಪಶು ವೈದ್ಯರಿಂದ ಜಾನುವಾರಿನ ಮರಣೋತ್ತರ ಪರೀಕ್ಷೆ ನಡೆಸಿ ಅವರಿಂದ ದೃಢೀಕರಣ ಪತ್ರ ಪಡೆಯಬೇಕು.
2. ನಂತರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ವಿವರ ಸಮೇತ ತಾಲೂಕಿನ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಛೇರಿಯಲ್ಲಿ ಅರ್ಜಿ ಪಡೆದು ವಿವರ ಭರ್ತಿ ಮಾಡಿ ಸಲ್ಲಿಸಬೇಕು.
3. ಪರಿಹಾರ ಹಣವು ನೇರವಾಗಿ DBT ಮೂಲಕ ರೈತನ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.

● ಹೆಚ್ಚಿನ ಮಾಹಿತಿಗೆ ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಸಹಾಯವಾಣಿ ಸಂಖ್ಯೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.
ಮೊಬೈಲ್ ಸಂಖ್ಯೆ: 8277100200

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now