ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶದ ವಿವಿಧ ವರ್ಗಗಳಿಗೆ ಅನ್ವಯವಾಗುವಂತಹ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಇದರಲ್ಲಿ ಮಹಿಳೆಯರಿಗಾಗಿಯೇ ಜಾರಿಗೆ ತಂದ ಯೋಜನೆಗಳ ಪಟ್ಟಿಯು ಕೂಡ ಇದೆ.
ಇದರಲ್ಲಿ ಇಂದು ದೇಶದಾದ್ಯಂತ ಪರಿಸರ ಮಾಲಿನ್ಯ ಹಾಗೂ ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆ ಕುರಿತಾಗಿ ಮಹತ್ವದ ಕ್ರಾಂತಿ ನಡೆಸಿದಂತಹ ಯೋಜನೆ ಎಂದರೆ ಪ್ರಧಾನಮಂತ್ರಿ ಉಜ್ವಲ ಯೋಜನೆ (Pradana Mantri Ujwal Yojane). ಈ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದು ಮತ್ತು ರೆಗ್ಯುಲೇಟರ್ ಹಾಗೂ ಇನ್ನಿತರ ಉಪಕರಣಗಳನ್ನು ಕೂಡ ಉಚಿತವಾಗಿ ಪಡೆಯುವುದರೊಂದಿಗೆ ಪ್ರತಿ ಬುಕ್ಕಿಂಗ್ ಮೇಲೆ ಈಗ ಸಬ್ಸಿಡಿ ಹಣವನ್ನು ಕೂಡ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿ:- ಒಂದು ಬಾರಿ ಹೂಡಿಕೆ ಮಾಡಿ ಸಾಕು, ಪ್ರತಿ ತಿಂಗಳು 1 ಲಕ್ಷ ಪಿಂಚಣಿ ಪಡೆಯಬಹುದು LIC ಜೀವನ್ ಉತ್ಸವ್ ಪ್ಲಾನ್
ಇದುವರೆಗೂ ಕೂಡ ಸುಮಾರು 9 ಕೋಟಿ ಗಿಂತ ಹೆಚ್ಚು ಕುಟುಂಬಗಳು ಈ ರೀತಿ ಪ್ರಧಾನಮಂತ್ರಿ ಉಜ್ವಲ ಯೋಜನೆ ವ್ಯಾಪ್ತಿಗೆ ಒಳಪಟ್ಟು ಸಬ್ಸಿಡಿ ಪ್ರಯೋಜನ ಪಡೆಯುತ್ತಿವೆ ಎನ್ನುವ ಮಾಹಿತಿ ಅಂಕಿ ಅಂಶಗಳ ಮೂಲಕ ತಿಳಿದು ಬಂದಿದೆ. ಕರೋನ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಈ ಸಬ್ಸಿಡಿ ಸೌಲಭ್ಯವು 2022 ರ ಮೇ ತಿಂಗಳಿಂದ ಮತ್ತೆ ದೇಶದಾದ್ಯಂತ ಜಾರಿಗೆ ಬಂದಿದೆ.
ಅದರಂತೆ ಪ್ರತಿ ಬುಕ್ಕಿಂಗ್ ಮೇಲೆ ರೂ.200 ರೂಪಾಯಿಗಳ ಸಬ್ಸಿಡಿ ಸಿಗುತ್ತಿತ್ತು ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಡೀ ದೇಶದ ಎಲ್ಲ ಸಿಲಿಂಡರ್ ಬಳಕೆದಾರರಿಗೆ ಅನ್ವಯವಾಗುವಂತೆ ಒಮ್ಮೆ ಸಿಲಿಂಡರ್ ಬೆಲೆ ಇಳಿಕೆ ಮಾಡಿ ಮತ್ತೊಮ್ಮೆ ಮಹಿಳಾ ದಿನಾಚರಣೆ ವಿಶೇಷವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ಮಹಿಳೆಯರಿಗೆ ಇನ್ನಷ್ಟು ವಿನಾಯಿತಿ ಕೊಟ್ಟಿದ್ದಾರೆ.
ಈ ಸುದ್ದಿ ಓದಿ:- ಒಂದು ಬೋರ್ ನಿಂದ ಇನ್ನೊಂದು ಬೋರ್ ಗೆ ಲಿಂಕ್ ಇರುತ್ತ.? ಅಕ್ಕ ಪಕ್ಕದವರು ಬೋರ್ ಹಾಕಿದ್ರೆ ನಿಮ್ಮ ಬೋರ್ ನೀರು ಕಡಿಮೆ ಆಗುತ್ತ.?
ಆ ಪ್ರಕಾರವಾಗಿ ಇನ್ನು ಮುಂದೆ ಮೇ 2025ರವರೆಗೂ ವಾರ್ಷಿಕವಾಗಿ 12 ಸಿಲಿಂಡರ್ ಗಳವರೆಗೆ ಪ್ರತಿ ಬುಕ್ಕಿಂಗ್ ಮೇಲೆ ರೂ.300 ರಂತೆ ಒಂದು ವರ್ಷಕ್ಕೆ ಒಟ್ಟು ರೂ.3,600ಗಳನ್ನು ಮಹಿಳೆಯರು ಉಳಿತಾಯ ಮಾಡಲಿದ್ದಾರೆ. ಆದರೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ನೀವು ನಿಮ್ಮ ಗ್ಯಾಸ್ ಕನೆಕ್ಷನ್ ಇ-ಕೆವೈಸಿ (e-KYC) ಮಾಡಿಸಿರಬೇಕು.
ಒಂದು ವೇಳೆ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ನೀವು ಅರ್ಹರಾಗಿದ್ದೀರಿ ಆದರೆ ನಿಮ್ಮ ಕುಟುಂಬಕ್ಕೆ ಗ್ಯಾಸ್ ಸಂಪರ್ಕ ಹೊಂದಿಲ್ಲ ಎಂದರೆ ಸಬ್ಸಿಡಿ ಜೊತೆಗೆ ಮೇಲೆ ತಿಳಿಸಿದ ಎಲ್ಲ ಸೌಲಭ್ಯ ಪಡೆಯಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ಯೋಜನೆಗೆ ನೋಂದಾಯಿಸಿಕೊಳ್ಳಿ.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.! 50 ಸಾವಿರದವರೆಗೆ ಸಹಾಯಧನ ಪಡೆಯಿರಿ.!
ಅರ್ಜಿ ಸಲ್ಲಿಸುವ ವಿಧಾನ:-
* ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಮೊದಲಿಗೆ https://popbox.co.in/pmujjwalayojana ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಅರ್ಜಿ ಫಾರಂ ಡೌನ್‌ಲೋಡ್ ಲಿಂಕ್ ಕ್ಲಿಕ್ ಮಾಡಿ, ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿ ಮತ್ತು ಅದರಲ್ಲಿ ಕೇಳಲಾದ ಎಲ್ಲಾ ವೈಯುಕ್ತಿಕ ವಿವರಗಳನ್ನು ಭರ್ತಿ ಮಾಡಿ.
* ಅಥವಾ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.
* ಈ ಸಮಯದಲ್ಲಿ ನೀಡಬೇಕಾದ ದಾಖಲೆಗಳೆಂದರೆ,
1. ಪಡಿತರ ಚೀಟಿ (BPL)
2. ಆಧಾರ್ ಕಾರ್ಡ್
3. ಫೋಟೋ
4. ಮೊಬೈಲ್ ಸಂಖ್ಯೆ
5. ಇನ್ನಿತರ ಪ್ರಮುಖ ದಾಖಲೆಗಳು.