Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಡಿಸೆಂಬರ್ 8 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ರೆಪೋ ದರ ಹೆಚ್ಚಳವಾದರೆ ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿದರಗಳಲ್ಲಿ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ಇದು ಖುಷಿಯಾಗಿರುವುದು ಗೃಹ ಸಾಲದ ಸಾಲಗಾರರಲ್ಲಿ ಕಳವಳವನ್ನು ಹೆಚ್ಚು ಮಾಡಿದೆ. ಈ ಹಿಂದಿನ ವರ್ಷಗಳಲ್ಲಿ ನೋಡುವುದಾದರೆ ಮೇ 2022 ರಿಂದ ಫೆಬ್ರವರಿ 2023 ರವರೆಗೆ ರೆಪೊ ದರವು 250 ಬೇಸಿಸ್ ಪಾಯಿಂಟ್ಗಳ ಹೆಚ್ಚಳವಾಗುವ ಮೂಲಕ 6.5 ಪ್ರತಿಶತಕ್ಕೆ ಹೆಚ್ಚಿಸುವುದರೊಂದಿಗೆ, ಗೃಹ ಸಾಲದ ದರಗಳು ಏರಿಕೆಯಾಗಿ, ಸಾಲಗಾರರ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಿವೆ.
ಆ ಪ್ರಕಾರವಾಗಿ ಈಗ ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್ಗಳಲ್ಲೂ ಕೂಡ 8.4-11.0 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ವ್ಯಾಪ್ತಿಗೆ ಗೃಹ ಸಾಲಗಳನ್ನು ಸಿಗುತ್ತಿದೆ. ಇದರಿಂದ ಗೃಹ ಸಾಲಗಳನ್ನು ಪಡೆದುಕೊಂಡವರು ಪಡುತ್ತಿರುವ ಪಾಡು ಹೆಚ್ಚಾಗುತ್ತಿದೆ. ಇದೇ ಮಾತನ್ನು MyMoneyMantra.com ನ ಸಂಸ್ಥಾಪಕ ಮತ್ತು MD ರಾಜ್ ಖೋಸ್ಲಾ ಅವರು ನುಡಿದಿದ್ದಾರೆ.
ಈ ಹೊರೆಯನ್ನು ಕಡಿಮೆ ಮಾಡಲು ಇರುವ ಬದಲಿ ಮಾರ್ಗಗಳು ಕೂಡ ಸದ್ಯದ ಮಟ್ಟಕ್ಕೆ ಹೆಚ್ಚಿನ ತಾಪತ್ರಯ ನೀಡುತ್ತಿವೆ ಎನ್ನುವುದನ್ನು ಸಹ ಅವರು ಅವುಗಳ ಬಗ್ಗೆ ತಿಳಿಸಿದ್ದಾರೆ. ಅವರು ಹೇಳಿರುವ ಪ್ರಕಾರವಾಗಿ ಸಾಲಗಾರರು ಈಗ ತಮ್ಮ ಬ್ಯಾಂಕ್ ಸಾಲದ ಬಡ್ಡಿ ದರ ಕಡಿಮೆ ಮಾಡಿಕೊಳ್ಳಲು ಅವರೇನಾದರೂ ಹೊಸ ಬ್ಯಾಂಕ್ಗೆ ಶಿಫ್ಟ್ ಮಾಡಲು ಹೋದರೆ ಪ್ರೊಸೆಸಿಂಗ್ ಶುಲ್ಕವಾಗಿ ಹೆಚ್ಚುವರಿ ವೆಚ್ಚಗಳನ್ನು ಎದುರಿಸ ಬೇಕಾಗುತ್ತದೆ.
ಇದು ಪ್ರಕರಣ ಒಂದಕ್ಕೆ ಅವರು ಪಡೆಯುವ ಸಾಲದ ಮೊತ್ತದ ಸರಿಸುಮಾರು 0.25% – 2% ರಷ್ಟಿದೆ. ಇದು ಕಾನೂನು ಮತ್ತು ಮೌಲ್ಯಮಾಪನ ಶುಲ್ಕ, ಪ್ರತ್ಯೇಕ ಪಾವತಿ, ದಾಖಲೆ ಪರಿಶೀಲನೆಗೆ ಸಂಬಂಧಿಸಿದ ವೆಚ್ಚ ಇವುಗಳನ್ನು ಒಳಗೊಂಡಿದೆ ಕೆಲವೊಂದು ಪ್ರಕರಣಗಳಲ್ಲಿ ಇನ್ನೂ ಹೆಚ್ಚಾಗಬಹುದು.
ಇಂತಹ ಪರಿಸ್ಥಿತಿಯಲ್ಲಿ ಸಾಲಗಾರರಿಗೆ ತಮ್ಮ ಬಡ್ಡಿದರಗಳನ್ನು ಕಡಿಮೆ ಮಾಡಿಕೊಳ್ಳಲು ಇಮೇಲ್ ವಿನಂತಿಗಳ ಮೂಲಕ ದರ ಕಡಿತಕ್ಕಾಗಿ ಸಾಲ ನೀಡುವ ಬ್ಯಾಂಕ್ ಅನ್ನು ಸಂಪರ್ಕಿಸುವುದು ಮತ್ತು ಅಸಲು ಮೊತ್ತಕ್ಕೆ ಭಾಗಶಃ ಪಾವತಿಗಳನ್ನು ಮಾಡುವಂತಹ ನಿರ್ಧಾರಗಳು ಸದ್ಯಕ್ಕಿರುವ ಹೊರೆಯನ್ನು ಕಡಿಮೆ ಮಾಡಲು ಅನುಕೂಲವಾಗಬಹುದು.
ಇಂತಹ ಪ್ರಯತ್ನಗಳಿಗೆ ಕೂಡ ಸಂಬಂಧಿಸಿದ ಶುಲ್ಕವು ಬಾಕಿ ಉಳಿದಿರುವ ಸಾಲದ ಮೊತ್ತದ 0.25% -0.50% ದವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಈ ಸಮಸ್ಯೆಗೆ ಇರುವ ಮತ್ತೊಂದು ಪರಿಹಾರ ಮಾರ್ಗವೆಂದರೆ ಕಡಿಮೆ ಬಡ್ಡಿದರಗಳೊಂದಿಗೆ ಮತ್ತೊಂದು ಬ್ಯಾಂಕ್ಗೆ ಸಂಪೂರ್ಣ ಸಾಲದ ಬ್ಯಾಲೆನ್ಸ್ ವರ್ಗಾವಣೆ ಮಾಡಿಕೊಳ್ಳುವುದು.
ಆದರೂ ಇದು ಹೆಚ್ಚುವರಿ ದಾಖಲಾತಿ, ಸಮಯ ಹೂಡಿಕೆ ಮತ್ತು ಸಂಬಂಧಿತ ವೆಚ್ಚಗಳನ್ನು ಒಳಗೊಳ್ಳುತ್ತದೆ ಈ ಪ್ರಯತ್ನದಲ್ಲಿ ಮೊದಲು ಸಾಲ ನೀಡಿದ ಬ್ಯಾಂಕ್ ಗಿಂತ ಈಗ ವರ್ಗಾವಣೆಯಾಗುತ್ತಿರುವ ಬ್ಯಾಂಕ್ ಹೆಚ್ಚಿನ-ಬಡ್ಡಿ ದರಗಳನ್ನು ವಿಧಿಸಿದರೆ ಈ ಕಾರ್ಯತಂತ್ರದ ಕ್ರಮವು ವಿಶೇಷವಾಗಿ ಪ್ರಸ್ತುತವಾಗುತ್ತದೆ.
ವರ್ಗಾವಣೆಯು ಸಾಲಗಾರರಿಗೆ ಹೆಚ್ಚು ಅನುಕೂಲಕರವಾದ ಬಡ್ಡಿದರಗಳ ಲಾಭವನ್ನು ಪಡೆಯಲು ಅನುಮತಿಸುತ್ತದೆ ಎನ್ನುವುದು ನಿಜ ಆದರೆ ಅದರಲ್ಲೂ ರಿಸ್ಕ್ ಇರುತ್ತದೆ. ಹೀಗೆ ಸದ್ಯಕ್ಕೆ ಹೋಮ್ ಲೋನ್ ಪಡೆದಿರುವಂತಹ ಗ್ರಾಹಕರು ಇಂತಹದೊಂದು ಸಮಸ್ಯೆಗೆ ಸಿಲುಕಿದ್ದಾರೆ. ಬ್ಯಾಂಕ್ ಗಳು ಬಡ್ಡಿದರದ ನಿಯಂತ್ರಣದ ಬಗ್ಗೆ ಬಗ್ಗೆ ನಿರ್ಧಾರ ತೆಗೆದುಕೊಂಡರೆ ಮಾತ್ರ ಅವರಿಗೆ ಅನುಕೂಲವಾಗಬಹುದು ಈ ಮೇಲೆ ತಿಳಿಸಿದ ಕಾರಣಗಳಿಂದ ಸದ್ಯಕ್ಕದು ಕೂಡ ಅಸಾಧ್ಯ ಎನಿಸುತ್ತಿದೆ.