ರೈತರು ತಮ್ಮ ಸಾಕಷ್ಟು ಆರ್ಥಿಕ ಸಮಸ್ಯೆ ಜೊತೆಗೆ ಸಾಮಾಜಿಕವಾಗಿ ಅಕ್ಕ ಪಕ್ಕದ ರೈತರಿಂದ ಕೂಡ ಕೆಲವು ಸಮಸ್ಯೆ ಎದುರಿಸಬೇಕಾಗಿದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯವಾಗಿ ಉಂಟಾಗುವ ತೊಂದರೆ ಎಂದರೆ ಅಕ್ಕ ಪಕ್ಕದ ರೈತರ ಜೊತೆ ಭೂಮಿ ಒತ್ತುವರಿಗಾಗಿ ಕಿತ್ತಾಡುವ ಸಮಸ್ಯೆ.
ಕೆಲವೊಮ್ಮೆ ಇದು ಊರಿನ ಪಂಚಾಯಿತಿ ಕಟ್ಟೆಯಲ್ಲಿ ತೀರ್ಮಾನವಾದರೆ ಅದನ್ನು ಮೀರಿ ಕೋರ್ಟು ಕೇಸು ಅಲೆಯಬೇಕಾದ ಪರಿಸ್ಥಿತಿವರೆಗೆ ಮುಂದುವರೆದದ್ದು ಇದೆ. ಈ ಸಮಸ್ಯೆಗೆ ಪರಿಹಾರ ಬೇಕು ಎಂದರೆ ರೈತ ತನ್ನ ಜಮೀನಿನ ನಿಖರವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು.
ಹೀಗೆ ಮಾಡಲು ರೈತನಿಗೆ ಸರ್ವೈಯರ್ ಗಳ ಸಹಾಯ ಬೇಕು, ರೈತ ಸರ್ವೆ ಮಾಡಿಸಿ, ಜಮೀನಿನ RTC ಪತ್ರವನ್ನು ಪಡೆದಿದ್ದರೆ ಜಮೀನಿನ ಅಳತೆ ಎಷ್ಟಿದೆ ಎನ್ನುವುದು ಆತನಿಗೆ ತಿಳಿಯುತ್ತದೆ. ಇದು ಬಹಳ ಸಮಯ ಹಿಡಿಯುವಂತಹ ಹಾಗೂ ಹಣವು ಕೂಡ ವ್ಯಯವಾಗುವಂತಹ ಪ್ರಕ್ರಿಯೆಯಾಗಿದೆ.
ಕೆಲವೊಮ್ಮೆ ಅಧಿಕಾರಿಶಾಹಿ ವರ್ಗಗಳು ರೈತನಿಗೆ ಸಮಯಕ್ಕೆ ತಕ್ಕ ಸೇವೆಯನ್ನು ಕೊಡದೆ ಇರಬಹುದು. ಈಗ ಇದಕ್ಕೆಲ್ಲ ಪರಿಹಾರ ನೀಡುವ ಉದ್ದೇಶದಿಂದ ತಾಂತ್ರಿಕತೆಯನ್ನು ಕೃಷಿಗೂ ಕೂಡಾ ಪರಿಚಯಿಸಿ ರೈತನಿಗೆ ತನ್ನ ಜಮೀನಿನ ನಿಖರವಾದ ಮಾಹಿತಿಯನ್ನು ತನ್ನ ಮೊಬೈಲ್ ಮೂಲಕ ಪಡೆದುಕೊಳ್ಳುವಂತಹ ಟೆಕ್ನಾಲಜಿಯನ್ನು ಡೆವಲಪ್ ಮಾಡಲಾಗಿದೆ.
ಆನ್ಲೈನ್ ನಲ್ಲಿ ಎಲ್ಲ ಮಾಹಿತಿ ಸಿಗುವ ಮತ್ತು ಎಲ್ಲಾ ಅಪ್ಲಿಕೇಶನ್ ಹಾಕುವ ಅನುಕೂಲತೆ ಇರುವ ಈ ಅವಕಾಶವನ್ನು ಕೃಷಿ ಕ್ಷೇತ್ರಕ್ಕೂ ಕೂಡ ವಿಸ್ತರಿಸಿ ಹೊಸ ರೀತಿಯ ಕ್ರಾಂತಿಯೆಂದರೆ ಸೃಷ್ಟಿಸಲಾಗುತ್ತಿದೆ. ಹಾಗಾದರೆ ಯಾವ ರೀತಿ ಮೊಬೈಲ್ ನಲ್ಲಿಯೇ ತನ್ನ ಜಮೀನಿನ ವಿಸ್ತೀರ್ಣವನ್ನು ರೈತ ಅಳತೆ ಮಾಡಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಮಾಪನ ಎನ್ನುವ ಅಪ್ಲಿಕೇಶನ್‌ನೊಂದಿಗೆ, ಮಾಪನ ಆಪ್ ಡೌನ್ಲೋಡ್ ಮಾಡಿಕೊಂಡು ರೈತರು ತಮ್ಮ ಭೂಮಿಯನ್ನು ಸುಲಭವಾಗಿ ಅಳೆಯಬಹುದಾಗಿದೆ. ಮಾಪನ ಆಪ್ ನಲ್ಲಿ ನಿಮ್ಮ RTC ಸಂಖ್ಯೆ ಸೇರಿದಂತೆ ಕೆಲ ಮಾಹಿತಿಯನ್ನು ಎಂಟ್ರಿ ಮಾಡಿ ನಂತರ ಭೂಮಿಯ ಒಂದು ಮೂಲೆಯಲ್ಲಿ ನಿಂತು, ಪ್ರಾರಂಭದ ಮೇಲೆ ಕ್ಲಿಕ್ ಮಾಡಿದರೆ ಅಪ್ಲಿಕೇಶನ್ ತಕ್ಷಣವೇ ಅಳೆಯಲು ಪ್ರಾರಂಭಿಸುತ್ತದೆ.
ಏರಿಯಾ ಆಯ್ಕೆಯಲ್ಲಿ ನೀವು ಎಕರೆ ಎನ್ನುವುದನ್ನು ಆಯ್ಕೆಮಾಡಿ ಮತ್ತು ನಿಮ್ಮ ಜಮೀನಿನ ಅಳತೆ ಇರುವಷ್ಟು ಸುತ್ತಲೂ ನಡೆಯಬೇಕು. ನೀವು ಹೋಗುತ್ತಿರುವಾಗ ಎಲ್ಲಾ ಕಾರ್ನರ್ ಗಳನ್ನು ಕವರ್ ಮಾಡಿ ಪ್ರಾರಂಭದ ಹಂತಕ್ಕೆ ಮತ್ತೆ ಹಿಂತಿರುಗಿದ ನಂತರ, ನಿಲ್ಲಿಸು ಎನ್ನುವುದನ್ನು ಕ್ಲಿಕ್ ಮಾಡಿದರೆ ಎಕರೆಗಳಲ್ಲಿ ನಿಮ್ಮ ಕ್ಷೇತ್ರದ ನಿಖರ ಅಳತೆಯನ್ನು ಸಿಗುತ್ತದೆ.
ಅಳತೆ ಅಪ್ಲಿಕೇಶನ್ ನ್ನು ಬಳಸುವ ಹಂತ-ಹಂತದ ಪ್ರಕ್ರಿಯೆಯನ್ನು ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗಿದೆ ರೈತರು ಒಂದು ಮೂಲೆಯಲ್ಲಿ ನಿಂತು, ತಮ್ಮ ಹೊಲದ ಸುತ್ತಲೂ ನಡೆದರೆ ಸಾಕು ಅಪ್ಲಿಕೇಶನ್ ಉಳಿದವುಗಳನ್ನು ನೋಡಿಕೊಳ್ಳುತ್ತದೆ. ಬಹಳ ಸರಳವಾಗಿ ಇದನ್ನು ರಚಿಸಲಾಗಿತ್ತು ಪ್ರತಿಯೊಬ್ಬ ರೈತನಿಗೂ ಕೂಡ ಬಳಸಲು ತಿಳಿಯುವಂತಿದೆ.
ಈ ರೀತಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಅಧಿಕಾರಿಗಳಿಗೆ ಕಾಯದೆ ಹೆಚ್ಚಿನ ಸಮಯ ವ್ಯರ್ಥವಿಲ್ಲದೆ ಒಂದು ರೂಪಾಯಿ ಕೊಡ ಖರ್ಚು ಇಲ್ಲದೆ ಯಾವುದೇ ತೊಂದರೆಯಿಲ್ಲದೆ ತಮ್ಮ ಭೂಮಿಯನ್ನು ನಿಯಂತ್ರಿಸಲು ಮಾಪನ ಆ್ಯಪ್ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.
ಮಾಪನ ಆ್ಯಪ್ ಅನ್ನು ಇಂಟರ್ಫೇಸ್ ಮತ್ತು ರಕ್ಷಣಾತ್ಮಕ ವೈಶಿಷ್ಟ್ಯಗಳೊಂದಿಗೆ, ಮೆಷರ್ ಅಪ್ಲಿಕೇಶನ್ ನಲ್ಲಿ ರೈತರು ತಮ್ಮ ಭೂಮಿಯೊಂದಿಗೆ ಸಂವಹನ ನಡೆಸುವ ವಿಧಾನವನ್ನು ಕ್ರಾಂತಿಗೊಳಿಸಲು ಹೊಂದಾಣಿಕೆ ಮಾಡಲಾಗಿದೆ, ಕೃಷಿ ಪದ್ಧತಿಗಳಲ್ಲಿ ದಕ್ಷತೆ ಮತ್ತು ಸುರಕ್ಷತೆಯನ್ನು ಇದು ಖಾತ್ರಿಪಡಿಸುತ್ತಿದೆ.