ಇತ್ತೀಚಿನ ದಿನಗತಳಲ್ಲಿ ಪತಿ ಪತ್ನಿ ನಡುವೆ ಮನಸ್ತಾಪ ಬಂದು ಅದು ಸರಿ ಹೋಗುವುದೇ ಇಲ್ಲ ಎನ್ನುವ ಹಂತಕ್ಕೆ ಬಂದಾಗ ವಿ’ಚ್ಛೇ’ದ’ನ ತೆಗೆದುಕೊಳ್ಳಲು ನಿರ್ಧರಿಸುತ್ತಾರೆ ಮತ್ತು ಕೋರ್ಟ್ ನಲ್ಲಿ ಇದಕ್ಕಾಗಿ ಅರ್ಜಿ ಕೂಡ ಹಾಕಿರುತ್ತಾರೆ. ಈ ರೀತಿ ವಿಚ್ಛೇದನಗಳನ್ನು ಪತಿಗೆ ಪತ್ನಿ, ಪತ್ನಿಗೆ ಪತಿಯಾಗಲಿ ಕೊಡುವುದಲ್ಲ ಕೋರ್ಟ್ ಇವರಿಬ್ಬರ ಸಂಬಂಧ ಸುಧಾರಿಸುವುದಿಲ್ಲ ಎನ್ನುವ ಸ್ಥಿತಿ ಕಂಡು ಬಂದಾಗ ವಿ’ಚ್ಛೇ’ದ’ನ ನೀಡಿ ಬಿಡುಗಡೆ ಮಾಡುತ್ತದೆ.
ಇದು ಕಾನೂನಿನ ಪ್ರಕಾರವಾಗಿ ನಡೆಯುವ ಕ್ರಮ ಆಗಿದೆ ಆದರೆ ಕೆಲವರು ಈ ರೀತಿ ಕೋರ್ಟ್ ನಲ್ಲಿ ಲಿಟಿಗೇಶನ್ ಹಾಕಿ, ಡಿ’ವೋ’ರ್ಸ್ ಆಗಿಯೇ ಹೋಯಿತು ಎಂದು ಪರಿಗಣಿಸುತ್ತಾರೆ ಮತ್ತು ಇದೇ ಧೈರ್ಯದ ಮೇಲೆ ಇನ್ನೂ ಡಿ’ವೋ’ರ್ಸ್ ಪಡೆದೇ ತೀರುತ್ತೇವಲ್ಲ ಎಂದುಕೊಂಡು ಮರು ಮದುವೆಗೆ ಸಿದ್ದರಾಗಿಬಿಡುತ್ತಾರೆ.
ಅದರಲ್ಲೂ ವಿಶೇಷವಾಗಿ ಈಗಿನ ಕಾಲದಲ್ಲಿ ಮ್ಯಾಟ್ರಿಮೋನಿಲ್ ಸಂಬಂಧಗಳನ್ನು ಹೆಚ್ಚು ಹರಸುತ್ತಿರುವುದರಿಂದ ಮ್ಯಾಟ್ರಿಮೋನಿಯಲ್ ಗಳಲ್ಲಿ ಸರಿಯಾಗಿ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಅವರು ಡಿ’ವೋ’ರ್ಸ್ ಆಗಿದೆ ಎನ್ನುವ ರೀತಿಯಲ್ಲೇ ಹೆಚ್ಚಿನ ಸಮಯದಲ್ಲಿ ಬಿಂಬಿಸಿರುತ್ತಾರೆ.
ಹೀಗಾಗಿ ಆ ವಿಚಾರ ಮತ್ತೆ ಕೆಣಕಿ ನೋ’ವು ಮಾಡುವುದು ಬೇಡ ಎಂದುಕೊಂಡು ಡಿ’ವೋ’ರ್ಸ್ ಆಗಿದೆ ಎಂದೇ ನಂಬಿಬಿಡುತ್ತಾರೆ ಮದುವೆಯೂ ಆಗುತ್ತಾರೆ. ಈ ರೀತಿ ಮ್ಯಾಟ್ರಿಮೋನಿಯಲ್ ಗಳಲ್ಲಿ ನಡೆಯುವ ಮದುವೆ ವಿಚಾರಗಳಲ್ಲಿ ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದಕ್ಕೂ ಕೂಡ ಕೆಲ ಹೆಚ್ಚಿನ ಸಮಯವಕಾಶ ಇರುವುದಿಲ್ಲ ನಿಶ್ಚಯವಾದ ವಾರಕ್ಕೆಲ್ಲ ಮದುವೆ ಆಗಿರುವ ಉದಾಹರಣೆಗಳು ಇವೆ.
ಈ ರೀತಿ ಆತುರದಲ್ಲಿ ಆದ ಮದುವೆಗಳು ಮತ್ತೆ ಕೋರ್ಟ್ ಗೆ ಬಂದು ನಿಲ್ಲುತ್ತವೆ. ಯಾಕೆಂದರೆ ಈ ರೀತಿ ತರಾತುರಿಯಲ್ಲಿ ಮದುವೆ ಆಗುವವರು ಅನೇಕ ವಿಚಾರಗಳನ್ನು ಮುಚ್ಚಿಟ್ಟಿರುತ್ತಾರೆ. ಇವುಗಳಲ್ಲಿ ಡಿ’ವೋ’ರ್ಸ್ ಆಗಿ ಹೋಗಿದೆ ಎಂದು ಹೇಳಿರುವುದು ಕೂಡ ಒಂದಾಗಿರುತ್ತದೆ.
ಒಂದು ವೇಳೆ ಡಿ’ವೋ’ರ್ಸ್ ಆಗಿದೆ ಎಂದು ಹೇಳಿ ಸಂಬಂಧ ಹುಡುಕುತ್ತಿದ್ದರೆ ಮುಚ್ಚು ಮರೆ ಇಲ್ಲದೆ ಈ ವಿಚಾರದಲ್ಲಿ ಓಪನ್ ಆಗಿ ಕೋರ್ಟ್ ನಿಂದ ತೀರ್ಪು ಆಗಿದೆಯಾ ಎನ್ನುವುದನ್ನು ಕೇಳಿ ತಿಳಿದು ಆ ಸಂಬಂಧಪಟ್ಟ ದಾಖಲೆಗಳನ್ನು ನೋಡಿ ಮುಂದುವರೆಯದು ನೂರಕ್ಕೆ ನೂರರಷ್ಟು ಬೆಸ್ಟ್ ಇಲ್ಲವಾದಲ್ಲಿ ಕಾನೂನು ಪ್ರಕಾರವಾಗಿ ಮೊದಲನೇ ಹೆಂಡತಿ ಬದುಕಿರುವಾಗಲೇ ಮತ್ತು ಆ ಹೆಂಡತಿ ಗೆ ವಿ’ಚ್ಛೇ’ದ’ನ ನೀಡದೆ ಇದ್ದಾಗ ಅಥವಾ ಕೋರ್ಟ್ ನಲ್ಲಿ ವಿಚ್ಛೇದನದ ಬಗ್ಗೆ ಇನ್ನೂ ಕೇಸ್ ಇದ್ದು ಅದು ತೀರ್ಪು ಬರದೇ ಇದ್ದಾಗ ಮತ್ತೊಂದು ಮದುವೆ ಆಗುವುದು ತಪ್ಪು.
ಇದನ್ನು ಬಹುಪತ್ನಿತ್ವ ಎಂದು ಹೇಳಲಾಗುತ್ತದೆ ಮತ್ತು ಕಾನೂನು ಪ್ರಕಾರವಾಗಿ ಎರಡನೇ ಹೆಂಡತಿ ಎನ್ನುವ ವಿಚಾರವೇ ಇಲ್ಲದೆ ಇರುವುದರಿಂದಾಗಿ ಆಕೆಗೆ ಹೆಂಡತಿಗೆ ಸಿಗಬೇಕಾದ ಸ್ಥಾನಮಾನಗಳನ್ನು ನಂತರದ ದಿನಗಳಲ್ಲಿ ಪಡೆದುಕೊಳ್ಳಬೇಕಾದಾಗ ಕಾನೂನು ತೊಡಕುಗಳು ಉಂಟಾಗುತ್ತವೆ.
ಈ ವಿಚಾರದಲ್ಲಿ ಬೇಕೆಂದಲೇ ವಿಚಾರಗಳನ್ನು ಮುಚ್ಚಿಟ್ಟಿದ್ದಾಗ ಎರಡನೇ ಮದುವೆ ಆದವರೇ ಮತ್ತೆ ಮೋ’ಸ ಹೋಗಿರುತ್ತಾರೆ. ಹಾಗಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಈ ರೀತಿ ಸುಳ್ಳು ಹೇಳಿ ಮದುವೆ ಆಗಿದ್ದರಿಂದ 21/2022 ಪ್ರಕರಣ ಒಂದರಲ್ಲಿ ಹೀಗೆ ಡಿ’ವೋ’ರ್ಸ್ ಆಗಿದೆ ಎಂದು ಹೇಳಿ ನಂಬಿಸಿ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿರುವಾಗಲೇ ತೀರ್ಪು ಬರುವ ಮುನ್ನವೇ ಸುಳ್ಳು ಹೇಳಿ ಮದುವೆ ಆದರೆ ಆಕೆಗೂ ಕೂಡ ಹೆಂಡತಿಯ ಸ್ಥಾನ ಇರುತ್ತದೆ ಎನ್ನುವ ತೀರ್ಪನ್ನು ನೀಡಿದೆ.
ನಿಜವಾಗಿಯೂ ಮೋ’ಸ ಹೋದವರು ನ್ಯಾಯದ ಮೊರೆ ಹೋಗಿ ನ್ಯಾಯ ಪಡೆಯಬಹುದು ಆದರೆ ಇಷ್ಟೆಲ್ಲ ಆಗುವ ಮೊದಲು ಮೊದಲೇ ಎಚ್ಚೆತ್ತುಕೊಂಡಿದ್ದರೆ ಅದಕ್ಕಿಂತಲೂ ಒಳ್ಳೆಯದು.