ಆಧಾರ್ ಕಾರ್ಡ್ (Aadhar Card) ಎನ್ನುವುದು ಈಗ ಭಾರತದಲ್ಲಿ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ವಲಯದ ಯೋಜನೆಗಳು ಮಾತ್ರವಲ್ಲದೆ, ಖಾಸಗಿ ಕೆಲಸ ಕಾರ್ಯಗಳಿಗೂ ಕೂಡ ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿ ಬೇಕೇ ಬೇಕು ಇದನ್ನು ಗುರುತಿನ ಚೀಟಿಯಾಗಿ, ವಿಳಾಸದ ಪುರಾವೆಯಾಗಿ ಬಳಸುತ್ತಿದ್ದೇವೆ.
12 ಅಂಕಿಗಳುಳ್ಳ ಜೊತೆಗೆ ನಮ್ಮ ಹೆಸರು, ಭಾವಚಿತ್ರ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿರುವ ಈ ಆಧಾರ್ ಕಾರ್ಡನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UADAI) ಎನ್ನುವ ಸಂಸ್ಥೆಯು ನೀಡುತ್ತದೆ ಮತ್ತು ಆಗಾಗ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಕೆಲವು ನಿಯಮಗಳನ್ನು ಕೂಡ ಇದು ಜಾರಿಗೆ ತರುತ್ತದೆ.
ಇದೇ ರೀತಿಯಾಗಿ ಈಗ ಮತ್ತೊಂದು ಹೊಸ ಪ್ರಕಟಣೆ ಇದ್ದು, ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ (Adress update) ಮಾಡುವ ಕುರಿತಾಗಿ ಒಂದು ಸರಳವಾದ ವಿಧಾನವನ್ನು ಪರಿಚಯಿಸುವುದಾಗಿ ತಿಳಿಸಿದೆ. ಆಧಾರ್ ಕಾರ್ಡ್ ನಲ್ಲಿ ಕೆಲವೊಮ್ಮೆ ನಮ್ಮ ಮಾಹಿತಿಯು ತಪ್ಪಾಗಿ ಪ್ರಿಂಟ್ ಆಗಿರುತ್ತದೆ ಅದನ್ನು ನಾವು ತಿದ್ದುಪಡಿ ಮಾಡಿಸಬೇಕಾದ ಅವಶ್ಯಕತೆ ಇರುತ್ತದೆ.
ಇನ್ನು ಕೆಲವೊಮ್ಮೆ ನಾವೇ ನಮ್ಮ ವಿಳಾಸವನ್ನು ಬದಲಾಯಿಸಿರುತ್ತೇವೆ, ಮೊಬೈಲ್ ಸಂಖ್ಯೆ ಬಳಸುತ್ತೇವೆ. ಇಂತಹ ಸಂದರ್ಭಗಳಲ್ಲಿ ನಮ್ಮ ಪ್ರಸ್ತುತ ಮಾಹಿತಿಗೆ ತಕ್ಕ ಹಾಗೆ ಅವುಗಳನ್ನು ಪರಿಷ್ಕರಿಸಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ. ಆದರೆ ಇದುವರೆಗೂ ಕೂಡ ಈ ರೀತಿ ವಿಳಾಸ ಬದಲಾವಣೆ ಮಾಡಬೇಕಾಗಿದ್ದಾಗ ಅದಕ್ಕೆ ಸಂಬಂಧಪಟ್ಟ ದಾಖಲೆಗಳ ಪ್ರತಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ನಾವು ನಮ್ಮ ಆಧಾರ್ ಕಾರ್ಡ್ ಅನ್ನು ವಿಳಾಸವನ್ನು ಬದಲಾಯಿಸಬೇಕಿತ್ತು ಈಗ ಅಷ್ಟೆಲ್ಲ ತಾಪತ್ರಯ ಪಡುವ ಅವಶ್ಯಕತೆ ಇಲ್ಲ.
UIDAI ಇತ್ತೀಚಿಗೆ ನೀಡಿರುವ ಪರಿಷ್ಕೃತ ಮಾರ್ಗಸೂಚಿ ಪ್ರಕಾರವಾಗಿ ಯಾವುದೇ ದಾಖಲೆ ಇಲ್ಲದೆ ಸರಾಗವಾಗಿ ವಿಳಾಸ ಬದಲಾವಣೆ ಮಾಡಬಹುದಾಗಿದೆ. ಆದರೆ ಇದಕ್ಕೆ ಕುಟುಂಬದವರ ಅನುಮತಿ ಮುಖ್ಯ. ಇದರ ಅರ್ಥ ನೀವೇನಾದರೂ ವಿಳಾಸ ಬದಲಾವಣೆ ಮಾಡಬೇಕು ಎಂದರೆ ನಿಮ್ಮ ತಂದೆ ತಾಯಿ ಹೆಂಡತಿ ಅಥವಾ ಮಕ್ಕಳು ಹೀಗೆ ಕುಟುಂಬದ ಬೇರೊಬ್ಬರ ಆಧಾರ್ ಕಾರ್ಡ್ ಸಂಖ್ಯೆ ನೀಡಿದರೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಹೋಗುತ್ತದೆ.
ಆಗ ಅವರು ಅದನ್ನು ನೋಡಿ ತಿಳಿಸುತ್ತಾರೆ, ಆ OTP ಯನ್ನು ನೀವು ನಮೂದಿಸುವ ಮೂಲಕ ವಿಳಾಸ ಬದಲಾವಣೆ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಅವರಿಗೆ OTP ಹೋಗುವುದು ಕುಟುಂಬದ ಸದಸ್ಯರಿಗೆ ಈ ಮಾಹಿತಿ ತಿಳಿದಿದೆ ಎನ್ನುವುದನ್ನು ಸೂಚಿಸುತ್ತದೆ. ನೀವು ನೀಡಿರುವ ಆಧಾರ್ ಸಂಖ್ಯೆಯು ನಿಮ್ಮ ಕುಟುಂಬದ ಸಂಬಂಧಿಕರದ್ದು ಎನ್ನುವುದನ್ನು ದೃಢೀಕರಿಯಸುವುದಕ್ಕಾಗಿ ಪುರಾವೆಯಾಗಿ ನೀವು ರೇಷನ್ ಕಾರ್ಡ್ ಅಥವಾ ಮ್ಯಾರೇಜ್ ಸರ್ಟಿಫಿಕೇಟ್ ಅಥವಾ ಪಾಸ್ಪೋರ್ಟ್ ನೀಡಬಹುದು.
ಒಂದು ವೇಳೆ ಇದ್ಯಾವುದೂ ಇಲ್ಲ ಎಂದರೆ UIDAI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅಲ್ಲಿ ತಿಳಿಸಿರುವ ನಮೂನೆಯಲ್ಲಿಯೇ ಸ್ವಯಂ ದೃಢೀಕರಣ ಪತ್ರವನ್ನು ಕುಟುಂಬದವರ ಸಹಿಯೊಂದಿಗೆ ಪಡೆದು ಸಲ್ಲಿಸಬೇಕು. ಈ ರೀತಿಯಾಗಿ ಪ್ರಕ್ರಿಯೆ ಪೂರ್ತಿಗೊಳಿಸಿದ ನಂತರ ನಿಮ್ಮ ವಿಳಾಸ ಅಪ್ಡೇಟ್ ಆಗುವುದಕ್ಕೆ 30 ದಿನಗಳ ಸಮಯ ತೆಗೆದುಕೊಳ್ಳುತ್ತದೆ.
30 ದಿನಗಳು ಆದ ನಂತರ ಎಂದಿನಂತೆ ಅಂಚೆ ಮೂಲಕ ನಿಮ್ಮ ಮನೆಗೆ ಅಪ್ಡೇಟ್ ಆಗಿರುವ ಆಧಾರ್ ಕಾರ್ಡ್ ಸಿಗುತ್ತದೆ ಅಥವಾ ನೀವೇ ನಿಮ್ಮ ಅಕ್ನಾಲೆಡ್ಜ್ಮೆಂಟ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ಮೂಲಕ 30 ದಿನಗಳಾದ ನಂತರ ಪ್ರಿಂಟ್ ಡೌನ್ಲೋಡ್ ಮಾಡಿಕೊಳ್ಳಬಹುದು.