Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಹೊಸ ವರ್ಷದ ಆರಂಭದಲ್ಲಿ ಉದ್ಯೋಗ ಕಾಂಕ್ಷಿಗಳಿಗೆ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC Housing Finance limited) ಸಿಹಿ ಸುದ್ದಿ ಕೊಟ್ಟಿದೆ. ತನ್ನ ಸಂಸ್ಥೆಯಲ್ಲಿ ಈ ಬಾರಿ ನೂರಾರು ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು ಇದರ ಸಂಬಂಧ ದೇಶದ ಪ್ರತಿಭಾವನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಕೂಡ ಆಹ್ವಾನ ಮಾಡಿದೆ.
ದೇಶದ ಎಲ್ಲ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿತ್ತು, ಕರ್ನಾಟಕದಲ್ಲೂ ಕೂಡ ಉದ್ಯೋಗಾವಕಾಶಗಳು ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಅಧಿಸೂಚನೆಯಲ್ಲಿ ತಿಳಿಸಿರುವ ನೇಮಕಾತಿ ವಿವರದ ಬಗ್ಗೆ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್
ಹುದ್ದೆಗಳ ವಿವರ:- ಅಪ್ರೆಂಟಿಸ್ ಬಗೆಯ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 250
ಉದ್ಯೋಗ ಸ್ಥಳ:- ಭಾರತದಾದ್ಯಂತ (ಕರ್ನಾಟಕದಲ್ಲಿ 33 ಹುದ್ದೆಗಳು).
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.9,000 – ರೂ.15,000 ಗೌರವ ವೇತನ ಇರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದಾದರೂ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು
ವಯೋಮಿತಿ:–
* ಕನಿಷ್ಠ ವಯೋಮಿತಿ ಅರ್ಜಿ ಸಲ್ಲಿಸುವ ದಿನಕ್ಕೆ ಸರಿಯಾಗಿ 20 ವರ್ಷಗಳು ತುಂಬಿರಬೇಕು
* ಗರಿಷ್ಠ ವಯೋಮಿತಿ ಅರ್ಜಿ ಸಲ್ಲಿಸುವ ದಿನಕ್ಕೆ ಸರಿಯಾಗಿ 25 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಧಾನ:-
https://docs.google.com/forms/d/e/1FAIpQLSf_2BDhjU-FzEaUs7i8hBsL_jxAARvqtrD5xzABiubBsOv0HA/viewform ಲಿಂಕ್ ಕ್ಲಿಕ್ ಮಾಡಿ LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಕ್ಸಾಮಿನೇಷನ್ ಅಪ್ಲಿಕೇಶನ್ ಫಾರಂ ಓಪನ್ ಆಗುತ್ತದೆ
* ಅದರಲ್ಲಿ ನಿಮ್ಮ ಹೆಸರು, ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ನಿಮ್ಮ ವಿದ್ಯಾಭ್ಯಾಸ ಸೇರಿದಂತೆ ವೈಯಕ್ತಿಕ ವಿವರಗಳು ಹಾಗೂ ವಿಳಾಸ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕೇಳಲಾಗಿರುತ್ತದೆ ಮತ್ತು ಆಪ್ಷನ್ ಸಹ ಅಲ್ಲಿ ನೀಡಲಾಗಿರುತ್ತದೆ. ಅವುಗಳಲ್ಲಿ ಸರಿಯಾದದ್ದನ್ನು ಸೆಲೆಕ್ಟ್ ಮಾಡುತ್ತಾ ಬನ್ನಿ
* ನಿಮ್ಮ ಕೆಟಗರಿಗೆ ಸಂಬಂಧಪಟ್ಟ ಹಾಗೆ ಅರ್ಜಿ ಶುಲ್ಕವನ್ನು ಕೂಡ ವಿಧಿಸಲಾಗಿರುತ್ತದೆ ಅದನ್ನು ಆನ್ಲೈನ್ ಮೂಲಕ ಪೇಮೆಂಟ್ ಮಾಡಿ
* ಎಲ್ಲ ವಿವರಗಳು ಸರಿ ಇದೆ ಎನ್ನುವುದನ್ನು ಮತ್ತೊಮ್ಮೆ ಪರೀಕ್ಷಿಸಿಕೊಂಡು ಕೊನೆಯಲ್ಲಿ ಕ್ಯಾಪ್ಚ ಕೋಡ್ ಎಂಟ್ರಿ ಮಾಡಿ ಸಬ್ಮಿಟ್ ಕೊಡಿ ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಥವಾ ಇ-ಮೇಲ್ ವಿಳಾಸಕ್ಕೆ ಇದರ ಸಂಬಂಧಿತ ರಿಪ್ಲೈ ಕಂಪನಿ ಕಡೆಯಿಂದ ಬರುತ್ತದೆ
ಅರ್ಜಿ ಶುಲ್ಕ:-
* PWBD ಅಭ್ಯರ್ಥಿಗಳಿಗೆ ರೂ.472
* SC / ST / ಮಹಿಳಾ ಅಭ್ಯರ್ಥಿಗಳಿಗೆ ರೂ.708
* ಸಾಮಾನ್ಯ/OBC ಅಭ್ಯರ್ಥಿಗಳು: ರೂ.944
* ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ವಿಧಾನದಲ್ಲಿ ಪಾವತಿ ಮಾಡಬೇಕು.
ಆಯ್ಕೆ ವಿಧಾನ:-
* ಲಿಖಿತ ಪರೀಕ್ಷೆ
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 22 ಡಿಸೆಂಬರ್, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಡಿಸೆಂಬರ್, 2023.