ಹಣ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಬಹಳ ಅಗತ್ಯದ ವಸ್ತುವಾಗಿದೆ. ಜೀವನ ಪರ್ಯಂತ ನಮಗೆ ಹಣದ ಅವಶ್ಯಕತೆ ಇರುತ್ತದೆ. ದುಡಿಯುವ ವಯಸ್ಸಿನಲ್ಲಿ ಹಣದ ಬಗ್ಗೆ ಹೆಚ್ಚು ಯೋಚನೆ ಇರುವುದಿಲ್ಲ ಆದರೆ, ವಯಸ್ಸಾದ ಕಾಲದಲ್ಲಿ ದೇಹದಲ್ಲಿ ಶಕ್ತಿ ಕುಂದಿದಾಗ ಕೈಲಿ ಕೆಲಸ ಇಲ್ಲದೆ ಹೋದಾಗ ದಿನನಿತ್ಯದ ಖರ್ಚಿಗೆ ಏನು ಮಾಡುವುದು ಎನ್ನುವ ಚಿಂತೆ ಮೂಡುತ್ತದೆ.
ಹೀಗಾಗಿ ಅನೇಕರು ದುಡಿಯುವ ಕಾಲದಿಂದಲೇ ಉಳಿತಾಯ ಮಾಡಿ ಹಣ ಇಟ್ಟುಕೊಂಡಿರುತ್ತಾರೆ. ಕೆಲವರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣ ಉಳಿಸಿ ಇಟ್ಟುಕೊಂಡರೆ, ಇನ್ನು ಕೆಲವರು ಇದನ್ನೇ ಹೂಡಿಕೆಯಾಗಿ ಮಾಡಿಕೊಂಡು ಪ್ರತಿ ತಿಂಗಳು ಪೆನ್ಷನ್ ಬರುವ ರೀತಿ ಪ್ಲಾನ್ ಮಾಡುತ್ತಾರೆ. ಈಗ ಅಂಚೆ ಕಚೇರಿಗಳು ಹಾಗೂ ಬ್ಯಾಂಕ್ ಗಳಲ್ಲಿಯೂ ಈ ರೀತಿ ಅನೇಕ ಪಿಂಚಣಿ ಯೋಜನೆಗಳಿವೆ ಇದೇ ರೀತಿ ಮುಂದುವರೆದು LIC ಕೂಡ ಇಂತಹದೊಂದು ಯೋಜನೆಗೆ ಅಸ್ತು ಎಂದಿದೆ.
ಜೀವ ವಿಮೆಗಳಿಗೆ ಹೆಸರುವಾಸಿ ಸಂಸ್ಥೆಯಾಗಿದ್ದ ಗ್ರಾಹಕರ ನಂಬಿಕೆ ವಿಮೆ ಸಂಸ್ಥೆ LIC ಈಗ ಹತ್ತು ಹಲವು ವೈಶಿಷ್ಟದೊಂದಿಗೆ ಹೊಸ ರೂಪ ಪಡೆದಿದೆ. LIC ಯಲ್ಲಿ ಈಗ ಪಿಂಚಣಿ ವ್ಯವಸ್ಥೆಯೂ ಲಭ್ಯವಿದೆ. LIC ಯ ಈ ಜೀವನ್ ಶಾಂತಿ ಯೋಜನೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹಿರಿಯ ನಾಗರಿಕರಿಗಾಗಿ ಅವರ ಸಂಧ್ಯಾಕಾಲವನ್ನು ಸರಳವಾಗಿಸುವಂತಹ ಅತ್ಯುತ್ತಮ ಯೋಜನೆ ಇದಾಗಿದ್ದು.
ಈ ಯೋಜನೆಯಲ್ಲಿ ಹೂಡಿಕೆಗೆ ಭದ್ರತೆ ಹಾಗೂ ನಿಶ್ಚಿತ ಆದಾಯದ ಜೊತೆಗೆ ಅವಶ್ಯಕತೆ ಇದ್ದಾಗ ಸಾಲ ಕೂಡ ಸಿಗಲಿದೆ. LIC ಜೀವನ್ ಶಾಂತಿ ಯೋಜನೆ ಬಗ್ಗೆ ಕೆಲ ಪ್ರಮುಖ ವಿವರಗಳನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.
ಯೋಜನೆಯ ಹೆಸರು:- LIC ಜೀವನ್ ಶಾಂತಿ ಯೋಜನೆ.
● LIC ಜೀವನ್ ಶಾಂತಿ ಯೋಜನೆ ಬಗ್ಗೆ ಇರುವ ಒಂದು ಪ್ರಮುಖ ಮಾಹಿತಿ ಏನೆಂದರೆ, ಈ ಯೋಜನೆಯನ್ನು ಖರೀದಿಸಲು ಗ್ರಾಹಕರು ಪ್ರೀಮಿಯಂಗಳನ್ನು ಪಾವತಿಸುವ ಅಗತ್ಯ ಇಲ್ಲ, ಯಾಕೆಂದರೆ ಇದು ಒಂದೇ ಬಾರಿಗೆ ಹೂಡಿಕೆ ಮಾಡುವಂತಹ ಯೋಜನೆಯಾಗಿದೆ. ನೀವು ನಿಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡಿದರೆ.
ಆ ಹೂಡಿಕೆಗೆ ಅನ್ವಯವಾಗಿ ಬಡ್ಡಿ ದರದ ರೂಪದಲ್ಲಿ ಪ್ರತಿ ತಿಂಗಳು ನಿಮಗೆ ಪೆನ್ಷನ್ ನೀವು ನೀಡುವ ಬ್ಯಾಂಕ್ ಖಾತೆಗೆ ಬರುತ್ತದೆ, ಅದನ್ನು ನೀವು ನಿಮ್ಮ ತಿಂಗಳ ಖರ್ಚಿಗೆ ಬಳಸಬಹುದು. ನೀವು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಬಡ್ಡಿಯನ್ನು ಪಡೆಯಲು ಇಚ್ಚಿಸಿದರೆ ಅದಕ್ಕೂ ಕೂಡ ಅವಕಾಶವಿದೆ.
● ಕನಿಷ್ಠ 1.5 ಲಕ್ಷದಿಂದ ಗರಿಷ್ಠ ಯಾವುದೇ ಮಿತಿ ಇಲ್ಲದೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು.
● LIC ಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೇಲೆ ಗ್ರಾಹಕನಿಗೆ ಯಾವುದೇ ಮೆಡಿಕಲ್ ಅಥವಾ ಕಾನೂನಿನ ಎಮರ್ಜೆನ್ಸಿ ಇದ್ದಾಗ ಪೂರ್ತಿಯಾಗಿ ಹಣ ಹಿಂಪಡೆಯಲು ಆವಕಾಶವಿದೆ. ಅದಲ್ಲದೆ ಹೂಡಿಕೆ ಮಾಡಿದ ಹಣದ ಮೇಲೆ ನೀವು ಯೋಜನೆ ಆರಂಭಿಸಿದ 6 ತಿಂಗಳು ತುಂಬಿದ ನಂತರ ಸಾಲ ಕೂಡ ಪಡೆಯಬಹುದು.
ಈ ಬಗೆಯ ಯೋಜನೆಗಳಲ್ಲಿ ಸಾಲ ಸಿಗುವುದು ತೀರ ವಿರಳ, ಆದರೆ LIC ಸಂಸ್ಥೆ ತನ್ನ ಗ್ರಾಹಕರ ಹಿತ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದೆ. ಯೋಜನೆ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಹತ್ತಿರದಲ್ಲಿರುವ LIC ಶಾಖೆಗೆ ಭೇಟಿ ಕೊಡಿ ಅಥವಾ LIC ಅಧಿಕೃತ ವೆಬ್ಸೈಟ್ಗಳಿಗೆ ತೆರಳಿ ಈ ಯೋಜನೆ ಬಗ್ಗೆ ಮಾಹಿತಿ ಪಡೆಯಿರಿ.