ಸದ್ಯಕ್ಕೆ ಈಗಿನ ಪ್ರಪಂಚವನ್ನು ಆನ್ಲೈನ್ ಯುಗ ಎಂದು ಕರೆಯಬಹುದು. ಯಾಕೆಂದರೆ ಈಗ ಎಲ್ಲಾ ವಿಚಾರವೂ ಕೂಡ ಆನ್ಲೈನ್ ಮಯವಾಗಿ ಹೋಗಿದೆ. ಭಾರತ ಡಿಜಿಟಲೀಕರಣದತ್ತ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದ್ದು ಸರ್ಕಾರ, ಬ್ಯಾಂಕಿಂಗ್, ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲಾ ಪ್ರಕ್ರಿಯೆಗಳು ಕೂಡ ಆನ್ಲೈನ್ ಮಯವಾಗಿ ಹೋಗಿದೆ ಮತ್ತು ಈಗಿನ ಕಾಲದಲ್ಲಿ ಎಲ್ಲಾ ಕುಟುಂಬಗಳಲ್ಲೂ ಕೂಡ ಇಂಟರ್ನೆಟ್ ಬಳಕೆದಾರರು ಇದ್ದಾರೆ ತಮ್ಮ ಮೊಬೈಲ್ ಫೋನ್ಗಳಿಗೆ ಅಥವಾ ಕಂಪ್ಯೂಟರ್ಗಳಿಗೆ ಇಂಟರ್ನೆಟ್ ಕನೆಕ್ಷನ್ ಪಡೆಯುವುದರಿಂದ ದೇಶದ ನಾಗರಿಕರಿಗೂ ಕೂಡ ಅನೇಕ ರೀತಿ ಅನುಕೂಲಗಳು ಆಗುತ್ತಿವೆ.
ಆದರೆ ಇನ್ನೂ ಕೂಡ ಈಗಿನ ಕಾಲದಲ್ಲೂ ಸಂಪೂರ್ಣವಾಗಿ ಎಲ್ಲರಿಗೂ ಈ ವ್ಯವಸ್ಥೆ ತಲುಪಿಲ್ಲ. ಕಾರಣ ಕೆಲವರಿಗೆ ಇಂಟರ್ನೆಟ್ ಕನೆಕ್ಷನ್ ಪಡೆಯಲು ಹಣದ ಸಮಸ್ಯೆ ಇದ್ದರೆ ಇನ್ನೂ ಕೆಲವು ಕಡೆ ನೆಟ್ವರ್ಕ್ ಸಮಸ್ಯೆಯೂ ಕೂಡ ಇದೆಲ್ಲರ ಪರಿಹಾರಕ್ಕೆ ಸರ್ಕಾರಿ ಒಂದು ನಿರ್ಧಾರಕ್ಕೆ ಬಂದಿದೆ. ಸರ್ಕಾರವು ರಾಜ್ಯದ ಎಲ್ಲಾ ಗ್ರಾಮಗಳನ್ನು ಸ್ಮಾರ್ಟ್ ಮಾಡಲು ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.
ಈ ಯೋಜನೆಯಡಿ ರಾಜ್ಯದ ಎಲ್ಲಾ ಹಳ್ಳಿಗಳು ಸ್ಮಾರ್ಟ್ ಆದರೆ ಯೋಜನೆ ನೆನಪಿನಿಂದ ಗ್ರಾಮೀಣ ಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸಕ್ಕೆ ನೆರವಾಗುತ್ತದೆ. ನಂತರ ಅವರಿಗೂ ಉಚಿತವಾಗಿ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಸಹ ವಿತರಿಸಲು ಚರ್ಚೆ ಮಾಡುತ್ತಿದೆ.
ಈ ಸುದ್ದಿ ಓದಿ:- ರೈತರು ಹೀಗೆ ಮಾಡಿದ್ರೆ ನೀರಿನ ಸಮಸ್ಯೆಯೇ ಬರಲ್ಲ, ಎಲ್ಲಾ ರೈತರು ಈ ಟೆಕ್ನಿಕ್ ತಿಳಿದುಕೊಳ್ಳುವುದು ಉತ್ತಮ.!
ಈ ಯೋಜನೆಯಡಿಯಲ್ಲಿ, ಸರ್ಕಾರವು ಈಗ ಎಲ್ಲಾ ಹಳ್ಳಿಗಳಲ್ಲಿ ಇಂಟರ್ನೆಟ್ ಸೌಲಭ್ಯಗಳನ್ನು ಉತ್ತೇಜಿಸಲು ಕ್ರಮ ತೆಗೆದುಕೊಳ್ಳುತ್ತಿದ್ದು ಮುಖ್ಯಮಂತ್ರಿಯವರು ಪ್ರತಿ ಹಳ್ಳಿಯ ಸೆಕ್ರೆಟರಿಯೇಟ್‌ನಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ಒದಗಿಸುವುದಾಗಿ ಘೋಷಿಸಿದ್ದಾರೆ ಮತ್ತು ಗ್ರಾಮಸ್ಥರಿಗೆ ಉಚಿತ ಇಂಟರ್ನೆಟ್ ಸೇವೆಯನ್ನು ಸಹ ಒದಗಿಸುವುದಾಗಿ ತಿಳಿಸಿದ್ದಾರೆ.
ರಾಜ್ಯದ ಪ್ರತಿ ಹಳ್ಳಿಯಲ್ಲೂ ಸೆಕ್ರೆಟರಿಯೇಟ್‌ಗಳ 50 ಮೀಟರ್ ವ್ಯಾಪ್ತಿಯೊಳಗೆ ಉಚಿತ ವೈಫೈ ಸೇವೆ ಯಾವುದೇ ರೀತಿ ಶುಲ್ಕವನ್ನು ವಿಧಿಸದೇ ಒದಗಿಸಿ ಕೊಡುವುದು ಯೋಜನೆಯ ಉದ್ದೇಶ. ಹೀಗೆ ಮಾಡುವುದರಿಂದ ಗ್ರಾಮದಲ್ಲಿರುವ ಸಚಿವಾಲಯದ 50 ಮೀಟರ್ ವ್ಯಾಪ್ತಿಯಲ್ಲಿರುವ ಯಾರು ಬೇಕಾದರೂ ಉಚಿತ ಇಂಟರ್ನೆಟ್ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ದೂರ ದೃಷ್ಟಿಯಿಂದ ಯೋಜನೆ ಪರಿಚಿಸಲಾಗುತ್ತಿದೆ.
ಈಗಾಗಲೇ ಇದಕ್ಕೆ ಸಚಿವ ಸಂಪುಟ ಒಪ್ಪಿದ್ದು ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ ಶೀಘ್ರದಲ್ಲಿಯೇ ಈ ಕಾರ್ಯದ ಅನುಷ್ಠಾನಕ್ಕೆ ಸಂಬಂಧಪಟ್ಟ ಕಾರ್ಯಗಳು ಕೂಡ ಆರಂಭವಾಗಲಿದೆ. ಇದೆಲ್ಲವೂ ಸಾಧ್ಯವಾದರೆ ಆದಷ್ಟು ಬೇಗ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಉಚಿತ ಇಂಟರ್‌ನೆಟ್ ಸೇವೆ ದೊರೆಯಲಿದೆ.
ಈ ಸುದ್ದಿ ಓದಿ:- ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.!
ಉಚಿತವಾದ ಮತ್ತು ಹೆಚ್ಚಿನ ವೇಗವನ್ನು ಹೊಂದಿರುವ ಇಂಟರ್ನೆಟ್ ಸೇವೆ ಸಿಗಲಿದೆ. ಈ ವಿಚಾರವಾಗಿ ಎಲ್ಲರಿಗೂ ತಿಳಿಸಲೇಬೇಕಾದ ಮತ್ತೊಂದು ಮುಖ್ಯವಾದ ಸಂಗತಿ ಏನೆಂದರೆ ಪ್ರಸ್ತುತವಾಗಿ ಈ ಯೋಜನೆಯನ್ನು ಜಾರಿಗೆ ತರುತ್ತಿರುವುದು ಉತ್ತರಪ್ರದೇಶ ಸರ್ಕಾರವಾಗಿದೆ.
ನಮ್ಮ ರಾಜ್ಯದ ಮಟ್ಟದಲ್ಲೂ ಕೂಡ ಹಿಂದೊಮ್ಮೆ ಇದೇ ರೀತಿಯ ಯೋಜನೆ ಬಗ್ಗೆ ಪ್ರಸ್ತಾಪವಾಗಿತ್ತು ಆದರೆ ಅದು ಯಶಸ್ವಿಯಾಗಲಿಲ್ಲ. ಒಂದು ವೇಳೆ ಉತ್ತರ ಪ್ರದೇಶ ಸರ್ಕಾರದ ಈ ಪ್ರಯತ್ನ ಯಶಸ್ವಿಯಾದರೆ ಕರ್ನಾಟಕವು ಸೇರಿದಂತೆ ದೇಶದ ವಿವಿಧ ರಾಜ್ಯಗಳು ಕೂಡ ಇದನ್ನು ಅನುಸರಿಸಿಕೊಳ್ಳುವ ಸಾಧ್ಯತೆಯೂ ಇದೆ.
ಆದಷ್ಟು ಬೇಗ ಈ ಯೋಜನೆ ಕಾರ್ಯ ರೂಪಕ್ಕೆ ಬಂದು ಇದರ ಅನುಕೂಲ ಹಾಗೂ ಅನಾನುಕೂಲತೆಗಳ ಬಗ್ಗೆ ವರದಿಯಾದರೆ ಎಲ್ಲ ರಾಜ್ಯಗಳಿಗೂ ಕೂಡ ಯೋಜನೆ ವೇಗವಾಗಿ ತಲುಪಲು ಅನುಕೂಲವಾಗುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.