ಅಣಬೆ ಕೃಷಿ ಮಾಡುವವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 8 ಲಕ್ಷ ಅನುದಾನ ಆಸಕ್ತರು ಅರ್ಜಿ ಸಲ್ಲಿಸಿ.!

ಅಣಬೆ ಕೃಷಿ (Mushroom cultivation) ಈಗ ಅತಿ ಹೆಚ್ಚು ಆದಾಯ ಕೊಡುವ ಬೇಸಾಯವಾಗಿದೆ. ಕೃಷಿಗೆ ಪೂರಕ ಚಟುವಟಿಕೆಯಾಗಿ ಅಥವಾ ಅಣಬೆ ಉತ್ಪಾದನ ಘಟಕಗಳನ್ನು ಆರಂಭಿಸಿ ಕೃಷಿ ಮಾಡಬಹುದು. ಇದಕ್ಕಾಗಿ ವಿಶಾಲವಾದ ಭೂಭಾಗ ಬೇಕು ಎನ್ನುವ ಅಗತ್ಯವೇನು ಇಲ್ಲ, ಘಟಕಗಳಲ್ಲಿ ವ್ಯವಸ್ಥಿತವಾದ ಕೋಣೆಗಳಲ್ಲಿ ಅಣಬೆ ಕೃಷಿಯನ್ನು ಮಾಡಬಹುದು.

WhatsApp Group Join Now
Telegram Group Join Now

ದೇಶದಲ್ಲಿ ಅಣಬೆ ಉತ್ಪಾದನೆಯನ್ನು ಹೆಚ್ಚಿಸಿ ಬೇಡಿಕೆಯನ್ನು ಪೂರೈಸಬೇಕು ಎನ್ನುವ ಉದ್ದೇಶದಿಂದ ಸರ್ಕಾರವು (government) ಕೂಡ ಈಗ ಅಣಬೆ ಕೃಷಿ ಮಾಡಲು ಆಸಕ್ತಿ ತರುವ ರೈತರಿಗೆ ಮತ್ತು ಅಣಬೆ ಬೇಸಾಯವನ್ನು ಉದ್ಯಮವಾಗಿ ಪರಿಗಣಿಸುವವರಿಗೆ ಅನುದಾನ (grant) ನೀಡುವ ಮೂಲಕ ನೆರವಾಗುತ್ತಿದೆ.

ಈ ಸುದ್ದಿ ನೋಡಿ:- ರಾಜ್ಯದ ಎಲ್ಲಾ ಪಡಿತರ ಚೀಟಿದಾರರಿಗೆ ಹೊಸ ಅಧಿಸೂಚನೆ.! ಕೂಡಲೇ ಈ ದಾಖಲೆಯನ್ನು ನಿಮ್ಮ ಗ್ರಾಮದ ನ್ಯಾಯಬೆಲೆ ಅಂಗಡಿಗೆ ತಲುಪಿಸಿ ಇಲ್ಲದಿದ್ದರೆ ರೇಷನ್ ಸಿಗಲ್ಲ.!

ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಅಣಬೆ ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಔಷಧಿಯ ಕ್ಷೇತ್ರ, ಹೋಟೆಲ್ ಉದ್ಯಮ ಮತ್ತು ದಿನನಿತ್ಯ ಬಳಕೆ ಆಗುವ ಆಹಾರ ಪದಾರ್ಥವು ಆಗಿರುವುದರಿಂದ ಅಣಬೆಗೆ ಸಾಕಷ್ಟು ಬೇಡಿಕೆ ಇದೆ.

ಹಾಗಾಗಿ ಅಣಬೆ ಕೃಷಿಯನ್ನು ಆರಂಭಿಸುವುದು ಖಚಿತವಾಗಿ ಲಾಭ ತಂದು ಕೊಡುವ ಉದ್ಯಮವೇ ಆಗಿದೆ ಎಂದು ಕೂಡ ನಂಬಬಹುದು. ಆದರೆ ಅಣಬೆ ಕೃಷಿ ಮಾಡಲು ಅಥವಾ ಉತ್ಪಾದನ ಘಟಕಗಳನ್ನು ಆರಂಭಿಸಿ ಅಣಬೆ ಬೇಸಾಯ ಮಾಡಲು ಘಟಕ ಸ್ಥಾಪನೆಗೆ ಸ್ಥಳ, ಅಣಬೆ ಬೀಜಗಳು, ಅದನ್ನು ನೋಡಿಕೊಳ್ಳಲು ಮಾನವ ಶಕ್ತಿ, ಕ್ರಿಮಿ ಮತ್ತು ಕೀಟನಾಶಕಗಳು ಇನ್ನು ಮುಂತಾದ ಖರ್ಚುಗಳಿರುತ್ತವೆ.

ಇದನ್ನು ಓದಿ:- ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಜೀರೋ ವಿದ್ಯುತ್ ಬಿಲ್ ಯಾರಿಗೆಲ್ಲಾ ಮಾತ್ರ ಗೊತ್ತಾ.?

ಆಸಕ್ತಿ ಇದ್ದು ಹಣಕಾಸಿನ ಕೊರತೆಯಿಂದ ಅಡಚಣೆಯಾಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಅಣಬೆ ಕೃಷಿ ಮಾಡುವವರಿಗೆ ಅನುದಾನ ನೀಡಲು ಅರ್ಜಿ ಆಹ್ವಾನ ಮಾಡಿದೆ. ಅಣಬೆ ಕೃಷಿಗೆ ಅನುದಾನ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು, ಸರ್ಕಾರದಿಂದ ಎಷ್ಟು ಹಣಕಾಸಿನ ನೆರವು ಸಿಗುತ್ತದೆ ಮತ್ತು ಯಾವ ರೀತಿ ಅರ್ಜಿ ಸಲ್ಲಿಸಿ, ಏನೆಲ್ಲಾ ದಾಖಲೆಗಳನ್ನು ನೀಡಬೇಕು ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಅಣಬೆ ಕೃಷಿಗೆ ಸಿಗುವ ಅನುದಾನ ಮೊತ್ತ:-

● ಗರಿಷ್ಠ ಘಟಕ ವೆಚ್ಚ 20 ಲಕ್ಷದ ಒಳಗೆ ನಿರ್ಮಾಣವಾಗುವ ಘಟಕಗಳಿಗೆ ಈ ಸಹಾಯಧನ ಸಿಗುತ್ತದೆ.
● ಘಟಕ ವೆಚ್ಚದ 40%ರಷ್ಟು ಅಥವಾ ಗರಿಷ್ಠ 8 ಲಕ್ಷ ರೂಪಾಯಿವರೆಗೆ ಅನುದಾನ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ:-

● ಅಣಬೆ ಕೃಷಿ ಮತ್ತು ಅಣಬೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನದ ಪ್ರಯೋಜನವನ್ನು ಪಡೆಯಲು ಬಯಸುವ ರೈತರು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಮೊದಲು ತಮ್ಮ ನಿಮ್ಮ ಜಿಲ್ಲೆಯ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ,
ಕೃಷಿ ವಿಜ್ಞಾನ ಕೇಂದ್ರದ ಕಚೇರಿ ಯನ್ನು ಸಂಪರ್ಕಿಸಿ ಅಣಬೆ ಕೃಷಿ ಬಗ್ಗೆ ಮತ್ತು ಸಿಗುತ್ತಿರುವ ಅನುದಾನದ ವಿಚಾರಣೆ ಮಾಡಿ ತಿಳಿದುಕೊಳ್ಳಬೇಕು.

● ಕೃಷಿ ಇಲಾಖೆಯಲ್ಲಿಯೇ ಆಫ್‌ಲೈನ್ ಅರ್ಜಿ ನಮೂನೆಯನ್ನು ಪಡೆದು ವಿವರಗಳನ್ನು ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು
● ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ನೀವು e-Mithra centre ಅಥವಾ CSC ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
● ಈ ಯೋಜನೆಯು ರಾಜಸ್ಥಾನ ರಾಜ್ಯದಲ್ಲಿ ಜಾರಿಯಲ್ಲಿದೆ. ಅಲ್ಲಿನ ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಹಾಗೂ ರಾಜ್ಯದಲ್ಲೂ ಕೂಡ ಜಾರಿಗೆ ಬರುವ ಸಾಧ್ಯತೆ ಇದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

● ಆಧಾರ್ ಕಾರ್ಡ್ ಪ್ರತಿ
● ಬ್ಯಾಂಕ್ ಖಾತೆ ವಿವರ
● PAN ಕಾರ್ಡ್ ಪ್ರತಿ
● ರೈತರ ಅಫಿಡವಿಟ್ ಅಥವಾ ಸಾಲದ ಪ್ರತಿ
● ಜನ್ ಆಧಾರ್ ಅಥವಾ ಭಾಮಾಶಾ ಕಾರ್ಡ್‌ನ ಪ್ರತಿ
● ಯೋಜನೆಯ ವರದಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now