ಎಲ್ಲಾ ನ್ಯಾಯಬೆಲೆ ಸಂಚಾಲರು ಅಂದರೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು (Distributor’s) ತಮ್ಮ ನ್ಯಾಯಬೆಲೆ ಅಂಗಡಿಯಲ್ಲಿ (Fair price shop) ಪಡಿತರ ಪಡೆಯವ SC ಮತ್ತು ST ಫಲಾನುಭವಿಗಳ ಕುಟುಂಬಸ್ಥರಲ್ಲಿ ಒಬ್ಬರ ಜಾತಿ ಪ್ರಮಾಣ ಪತ್ರದ ನಕಲನ್ನು (SC & ST Caste certificate Zerox) ಪ್ರತಿಯನ್ನು ಪಡೆದುಕೊಂಡು ಜುಲೈ 31, 2023 ರ ಒಳಗೆ ಕಾರ್ಯಾಲಯಕ್ಕೆ ತಪ್ಪದೇ ಮಾಹಿತಿ ತಲುಪಿಸಬೇಕು ಎಂದು ಮಾನ್ಯ ಜಂಟಿ ನಿರ್ದೆಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and Civil supply department) ಆದೇಶದ ಮೇರೆಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ರಾಜ್ಯದಲ್ಲಿ ಈಗ ಪಡಿತರ ಚೀಟಿದಾರರಿಗೆ ಒಂದರ ಮೇಲೆ ಒಂದರಂತೆ ಬಂಪರ್ ಸುದ್ದಿ. ಪಡಿತರ ಚೀಟಿದಾರರಲ್ಲಿ ಇತ್ತೀಚಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿಯಮದ ಪ್ರಕಾರ ಮಹಿಳೆಯರೇ ಕುಟುಂಬದ ಮುಖ್ಯಸ್ಥರಾಗಿರುತ್ತಾರೆ(Head of the family). ಈ ಮುಖ್ಯಸ್ಥರ ಖಾತೆಗೆ ಗೃಹಲಕ್ಷ್ಮಿ(Gruhalakshmi Scheme) ಯೋಜನೆಯಡಿ ಪ್ರತಿ ತಿಂಗಳು 2,000ರೂ. ಸಹಾಯದನವನ್ನು ನೀಡಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸಿ ರಾಜ್ಯದಲ್ಲಿ ಲಿಂಗ ಸಮಾನತೆಯನ್ನು ಕಾಪಾಡಬೇಕು ಎನ್ನುವ ಗುರಿಯನ್ನು ನೂತನ ಸರ್ಕಾರ ಹೊಂದಿದೆ.
ಈ ಸುದ್ದಿ ನೋಡಿ:- ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಜೀರೋ ವಿದ್ಯುತ್ ಬಿಲ್ ಯಾರಿಗೆಲ್ಲಾ ಮಾತ್ರ ಗೊತ್ತಾ.?
ಚುನಾವಣೆಗೂ ಮುನ್ನ ಕೊಟ್ಟಿದ್ದ ಭರವಸೆಯಂತೆ ಗೃಹಲಕ್ಷ್ಮಿ ಗ್ಯಾರಂಟಿ ಕಾರ್ಡ್ ಯೋಜನೆಯನ್ನು ಜಾರಿಗೆ ತಂದು ಈ ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ. ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಆಧಾರದ ಮೇಲೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಇದಕ್ಕೆ ಪ್ರಮುಖ ದಾಖಲೆಯಾಗಿ ಪಡಿತರ ಚೀಟಿ ಸಂಖ್ಯೆಯನ್ನು ಕೇಳಲಾಗುತ್ತಿದೆ. ಆಗಸ್ಟ್ ತಿಂಗಳಿಂದ ರೇಷನ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಗಳ ಯಜಮಾನಿಯು ಈ ಗೃಹಲಕ್ಷ್ಮಿ ಯೋಜನೆಯ 2000ರೂ. ಸಹಾಯಧನವನ್ನು ಪಡೆಯಲಿದ್ದಾರೆ.
ಅದರ ಜೊತೆಗೆ ಅನ್ನಭಾಗ್ಯ ಯೋಜನೆಯಡಿ (Annabhagya Scheme) ನೀಡುವ ಪಡಿತರವನ್ನು 10Kgಗೆ ಏರಿಸಲಾಗುವುದು ಎನ್ನುವ ಭರವಸೆಯನ್ನು ಕೂಡ ಕೊಟ್ಟಿದ್ದರು. ಅಕ್ಕಿ ದಾಸ್ತಾನು ಲಭ್ಯವಾಗದ ಕಾರಣ ಒಬ್ಬ ವ್ಯಕ್ತಿಗೆ ಎಂದಿನಂತೆ 5Kgಅಕ್ಕಿ ಹಾಗೂ ಉಳಿದ 5Kg ಅಕ್ಕಿ ಬದಲಿಗೆ Kg ಗೆ 35ರಂತೆ 180ರೂ. ಸಹಾಯಧನವನ್ನು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಯಾವ ಅರ್ಜಿಯನ್ನು ಕೂಡ ಅಹ್ವಾನ ಮಾಡದೆ DBT ಮೂಲಕ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿ ಅದಕ್ಕೆ ಚಾಲನೆ ಕೂಡ ನೀಡಿದೆ.
ಇದನ್ನು ತಪ್ಪದೆ ನೋಡಿ:- ಬ್ಯಾಂಕ್ ನಲ್ಲಿ ಸಾಲ ಮಾಡಿದ್ದವರಿಗೆ ಗುಡ್ ನ್ಯೂಸ್. ಸಾಲ ಮರುಪಾವತಿ ವಿಧಾನದಲ್ಲಿ ಮಹತ್ತರ ಬದಲಾವಣೆ ತಂದ ಸರ್ಕಾರ
ಇದರನ್ವಯ ಜುಲೈ ತಿಂಗಳಲ್ಲಿ ರಾಜ್ಯದ ಎಲ್ಲಾ BPL ಮತ್ತು AAY ಕಾರ್ಡ್ ಹೊಂದಿರುವವರು ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಹಣವನ್ನು ಪಡೆದಿದ್ದಾರೆ. ಹೀಗಾಗಿ ಕಳೆದ ತಿಂಗಳಿನಿಂದ ರಾಜ್ಯದಲ್ಲಿ ರೇಷನ್ ಕಾರ್ಡ್ ವಿಷಯ ಭಾರೀ ಚರ್ಚೆಯಲ್ಲಿ ಇದೆ. ಇದುವರೆಗೂ ಕೂಡ ಕಾರ್ಡ್ ಪಡೆಯದಿದ್ದವರು ಹಾಗೂ BPL ಕಾರ್ಡ್ ಗಾಗಿ ಅರ್ಜಿ ಹಾಕುವವರು, ಮತ್ತು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರು, ರೇಷನ್ ಕಾರ್ಡ್ ಅಲ್ಲಿ ಹೆಸರು ತಿದ್ದುಪಡಿ ಮಾಡಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಇದರ ನಡುವೆ ಸರ್ಕಾರವು ಈ ಮೇಲೆ ತಿಳಿಸಿದಂತೆ ಹೊಸ ಆದೇಶವನ್ನು ನೀಡಿರುವುದು ಯಾವ ಉದ್ದೇಶಕ್ಕಾಗಿ ಎಂದು ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ರೇಷನ್ ಕಾರ್ಡ್ ಈ ರೀತಿ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗೆ ಮಾತ್ರವಲ್ಲದೆ ಇದನ್ನು ಹೊರತುಪಡಿಸಿ ಇನ್ನು ಅನೇಕ ಸರ್ಕಾರಿ ಸೌಲಭ್ಯ ಪಡೆಯಲು ಅಗತ್ಯ ದಾಖಲೆಯಾಗಿದೆ.
ವೈದ್ಯಕೀಯ ಚಿಕಿತ್ಸೆ, ವಿದ್ಯಾರ್ಥಿವೇತನ ಪಡೆಯಲು, ಗ್ರಾಮ ಪಂಚಾಯಿತಿಯಿಂದ ಸಿಗುವ ಅನುದಾನಗಳು ಮತ್ತು ಕೃಷಿ ಇಲಾಖೆಯಿಂದ ರೈತರಿಗಾಗಿ ನೀಡುವ ಯೋಜನೆಗಳಲ್ಲೂ BPL ಕಾರ್ಡ್ ಹೊಂದಿರುವವರಿಗೆ ವಿಶೇಷ ಸೌಲಭ್ಯಗಳಿವೆ. ಆದರೆ ಸದ್ಯಕ್ಕೆ ಈಗ ಆಹಾರ ಅಧಿಕಾರಿಗಳು ಈ ರೀತಿ ಒಂದು ಆದೇಶವನ್ನು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಯಾಕೆ ನೀಡಿದ್ದಾರೆ ಎಂದು ಮುಂದಿನ ದಿನಗಳಲ್ಲಿಯೇ ಇದರ ಕಾರಣ ಗೊತ್ತಾಗಬಹುದು ಕಾದು ನೋಡೋಣ.