ಬ್ಯಾಂಕ್ ನಲ್ಲಿ ಸಾಲ ಮಾಡಿದ್ದವರಿಗೆ ಗುಡ್ ನ್ಯೂಸ್. ಸಾಲ ಮರುಪಾವತಿ ವಿಧಾನದಲ್ಲಿ ಮಹತ್ತರ ಬದಲಾವಣೆ ತಂದ ಸರ್ಕಾರ

 

ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಬ್ಯಾಂಕ್ ಗಳಿಂದ ಸಾಲ(Bank loan) ಪಡೆದಿರುತ್ತಾರೆ. ತಮ್ಮ ಕಷ್ಟಕಾಲದಲ್ಲಿ ಅಥವಾ ಯಾವುದೋ ಒಂದು ಸದುದ್ದೇಶದ ಕಾರಣದಿಂದಾಗಿ ಈ ರೀತಿ ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಅನಿವಾರ್ಯವಾಗಿರುತ್ತದೆ.

ಗೃಹ ಸಾಲ, ಉದ್ಯಮಗಳನ್ನು ಆರಂಭಿಸುವುದಕ್ಕಾಗಿ ಸಾಲ, ಶೈಕ್ಷಣಿಕ ಸಾಲ ಅಥವಾ ಕೃಷಿಗಾಗಿ ಸಾಲ ಹೀಗೆ ಯಾವುದೇ ರೀತಿಯ ಸಾಲವನ್ನು ಪಡೆದಿದ್ದರೂ ಅದನ್ನು ಮರುಪಾವತಿ (Loan repayment) ಮಾಡುವುದಕ್ಕೆ ಒಂದು ನಿಯಮ ಮತ್ತು ಅದರಂತೆ ಆದ ವಿಧಾನಗಳಿವೆ.

ಈ ಸುದ್ದಿ ನೋಡಿ:- ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಜೀರೋ ವಿದ್ಯುತ್ ಬಿಲ್ ಯಾರಿಗೆಲ್ಲಾ ಮಾತ್ರ ಗೊತ್ತಾ.?

ಕೆಲವೊಂದು ಬಾರಿ ಸಾಲ ಪಡೆದವರಿಗೂ ಕೂಡ ಸಮಸ್ಯೆಗಳಾಗಿ ಸರಿಯಾದ ಸಮಯಕ್ಕೆ ಸಾಲದ ವಂತಿಕೆಯನ್ನು ಅಥವಾ ಬಡ್ಡಿಯನ್ನು ಅಥವಾ ಸಾಲ ಮರುಪಾವತಿಯನ್ನು ಮಾಡಲು ಸಾಧ್ಯವಾಗಿರುವುದಿಲ್ಲ ಅಂತ ಸಮಯದಲ್ಲಿ ಬ್ಯಾಂಕ್ ಗಳು ಬಲವಂತವಾಗಿ ಸಾಲ ಪಡೆದವರಿಂದ ಹಣವಸೂಲಿ ಮಾಡಲು ಪ್ರಯತ್ನ ಮಾಡುತ್ತವೆ.

ಅದರಲ್ಲೂ ಕೆಲ ಬ್ಯಾಂಕಗಳು ರಿಕವರಿ ಏಜೆಂಟ್ (recovery agents) ಗಳು ಎನ್ನುವ ಮಧ್ಯವರ್ತಿಗಳನ್ನು ನೇಮಿಸಿಕೊಂಡು ಕೊಟ್ಟ ಸಾಲವನ್ನು ವಾಪಸ್ ಪಡೆಯಲು ಪ್ರಯತ್ನ ಮಾಡುತ್ತವೆ. ರಿಕವರಿ ಏಜೆಂಟ್ ಗಳಾಗಿ ಬರುವವರು ಈ ಜವಾಬ್ದಾರಿ ತೆಗೆದುಕೊಳ್ಳುವ ಮುನ್ನ ರಿಕವರಿ ಏಜೆಂಟ್ಗಳಾಗಲು RBI ನೀಡುವ ಪರೀಕ್ಷೆಗಳನ್ನು ಬರೆದು ಅವರು ಗೈಡ್ ಲೈನ್ಸ್ (Guidelines) ಅರಿತು ಅಧಿಕೃತವಾಗಿ ರಿಕವರಿ ಏಜೆಂಟ್ ಗಳಾಗಬೇಕು.

ಈ ಸುದ್ದಿ ನೋಡಿ:- ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿ ಆರಂಭ 2023, ಆಸಕ್ತರು ಅರ್ಜಿ ಸಲ್ಲಿಸಿ. ವೇತನ 92,300/-

ಆದರೆ ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ ರಿಕವರಿ ಏಜೆಂಟ್ ಗಳಾಗಿ ನಿಯಮಗಳನ್ನು ಅರಿಯದೆ ಸಾಲ ಪಡೆದವರಿಂದ ಹೇಗಾದರೂ ದುಡ್ಡು ವಸೂಲಿ ಮಾಡಬೇಕು ಎಂದು ಅವರಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆ (Physical and mental arrasement) ಮಾಡಿ ಹಿಂಸೆ ಕೊಡುತ್ತಾರೆ. ಈ ಬಗ್ಗೆ ಸಾಕಷ್ಟು ಬಾರಿ ಕೇಂದ್ರ ಸರ್ಕಾರಕ್ಕೂ ದೂರುಗಳು ಹೋಗಿವೆ.

RBI 2008ರಲ್ಲಿಯೇ ಎಲ್ಲಾ ಬ್ಯಾಂಕ್ ಗಳಿಗೂ ಈ ರೀತಿ ರಿಕವರಿ ಏಜೆಂಟ್ ಗಳನ್ನು ನೇಮಿಸಿಕೊಂಡು ಸಾಲ ವಸೂಲಿ ಮಾಡುವ ಬಗ್ಗೆ ಕಟ್ಟುನಿಟ್ಟಾಗ ಆದೇಶ ಹೊರಡಿಸಿದೆ. ಆದರೆ ಈ ರೀತಿ ಸಣ್ಣ ಸಾಲಗಾರರನ್ನು ಪದೇ ಪದೇ ತೊಂದರೆ ಕೊಡುತ್ತಿರುವುದು ದೇಶದಾದ್ಯಂತ ಚರ್ಚೆ ವಿಷಯಾಗುತ್ತಿರುವ ವಿಷಯ ಆದ ಕಾರಣ ಈಗ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Financial minister Nirmala Sitharaman) ಅವರಿಗೂ ಕೂಡ ಇದೇ ಪ್ರಶ್ನೆ ಎದುರಾಗಿದೆ.

ಇಂತಹ ಪ್ರಶ್ನೆ ಒಂದಕ್ಕೆ ಉತ್ತರಿಸುವ ಸಮಯದಲ್ಲಿ ಸರ್ಕಾರದ ಹೊಸ ಆದೇಶದ ಬಗ್ಗೆ ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ. ಸಾಲ ಮರುಪಾವತಿ ವಿಚಾರದಲ್ಲಿ ಅನೇಕ ವಿವಾದಗಳಾಗುತ್ತಿವೆ ಎನ್ನುವುದು ಕೇಳಿಬರುತ್ತಿದೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ವೇಳೆ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎನ್ನುವುದು ಕೇಳಿ ಬರುತ್ತಿದೆ. ಈಗಾಗಲೇ ಸುತ್ತೋಲೆ ಹೊರಡಿಸಿ ಬ್ಯಾಂಕ್ಗಳಿಗೆ ಎಚ್ಚರಿಸಲಾಗಿದೆ.

ಬ್ಯಾಂಕ್ ಗಳು ಕೂಡ ಇನ್ನು ಮುಂದೆ ಕಾಲ ಕಾಲಕ್ಕೆ ಕಾರ್ಯವಿಧಾನವನ್ನು ಪರಿಶೀಲಿಸಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಸಾಲ ಕೊಟ್ಟ ಹಣವನ್ನು ವಾಪಸ್ ಪಡೆಯಲು ಸಾಲ ಮರುಪಾವತಿ ಪ್ರಕ್ರಿಯೆ ನಡೆಸುವಾಗ ಕಠಿಣ ಕ್ರಮಗಳನ್ನು ಕೈಗೊಳ್ಳಬಾರದು.

ಸೂಕ್ಷ್ಮವಾಗಿ ವಿಷಯಗಳನ್ನು ಹ್ಯಾಂಡಲ್ ಮಾಡಬೇಕು ಹಾಗೂ ಮಾನವೀಯತೆಯಿಂದ ವರ್ತಿಸಬೇಕು ಎಂದು ನಿರ್ಮಲ ಸೀತಾ ರಾಮನ್ ಅವರು ಮತ್ತೊಮ್ಮೆ ಬ್ಯಾಂಕ್ ಗಳಿಗೆ ಸೂಚಿಸಿದ್ದಾರೆ. ಹಾಗೂ ಈ ವಿಚಾರವಾಗಿ ಯಾವುದೇ ಸಲಹೆಗಳಿದ್ದರೂ ಕೂಡ ಬ್ಯಾಂಕ್ ಗಳು ತಿಳಿಸಬಹುದು ಎಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಬ್ಯಾಂಕ್ಗಳಿಗೆ ಆದೇಶಿಸಿದ್ದಾರೆ.

Leave a Comment

%d bloggers like this: