ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ಸಂತಸದ ಸುದ್ದಿ, ತದ್ದುಪಡಿ ಅವಧಿಯನ್ನು ಹೆಚ್ಚಿಸಿದ ಆಹಾರ ಇಲಾಖೆ.
ಆಹಾರ ಮತ್ತು ನಾಗರೀಕ ಕಲ್ಯಾಣ ಇಲಾಖೆ ಈ ಮೊದಲು ರೇಷನ್ ಕಾರ್ಡ್ ತಿದ್ದುಪಡಿಗೆ ಡಿಸೆಂಬರ್ 31ರ ವರೆಗೆ ಗಡುವನ್ನು ನೀಡಿತ್ತು ಆದರೆ ತಿದ್ದುಪಡಿಯಲ್ಲಿ ಸಾಕಷ್ಟು ಗೊಂದಲಗಳು ಎದುರಾಗುತ್ತಿರುವ ಕಾರಣದಿಂದಾಗಿ ಸಾಕಷ್ಟು ರೇಷನ್ ಕಾರ್ಡ್ ಗಳು ತಿದ್ದುಪಡಿಯ ಬಾಕಿ ಉಳಿದಿದೆ ಈ ಹಿನ್ನೆಲೆಯಲ್ಲಿ ಜನವರಿ 31ರ ತನಕ ತಿದ್ದುಪಡಿ ದಿನಾಂಕವನ್ನು ಮುಂದೂಡಲಾಗಿದೆ.
ಇದೀಗ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಅವಧಿಯನ್ನು ಮುಂದೂಡಲಾಗಿದೆ ಸಾಕಷ್ಟು ಜನರ ರೇಷನ್ ಕಾರ್ಡುಗಳು ಇನ್ನೂ ತಿದ್ದುಪಡಿಯಲ್ಲಿ ಇರುವ ಕಾರಣದಿಂದಾಗಿ ಈ ನಿಯಮವನ್ನು ಕೈಗೊಳ್ಳಲಾಗಿದೆ. ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡುವಲ್ಲಿ ಗೊಂದಲದಲ್ಲಿದ್ದ ಜನರಿಗೆ ಇದೀಗ ಸರ್ಕಾರ ಸಂತಸದ ಸುದ್ದಿಯನ್ನು ಹೊರಹಾಕಿದೆ ರೇಷನ್ ಕಾರ್ಡ್ ತಿದ್ದುಪಡಿ ಅಂತಿಮ ದಿನಾಂಕವನ್ನು ಸರಕಾರ ಒಂದು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು ಇನ್ನೂ ಅನೇಕ ಕಾರ್ಡ್ ತಿದ್ದುಪಡಿ ಇರುವ ಕಾರಣದಿಂದಾಗಿ ಜನವರಿ 31ರ ತನಕ ತಿದ್ದುಪಡಿ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಅನುವು ಮಾಡಿಕೊಟ್ಟಿದೆ. ಜನವರಿ 31ರ ತನಕ ರೇಷನ್ ಕಾರ್ಡ್ ಗಳನ್ನು ಗ್ರಾಮ ಒನ್ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ರೇಷನ್ ಕಾರ್ಡ್ ನಲ್ಲಿ ಯಾವೆಲ್ಲ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಎಂದು ಈ ಕೆಳಕಂಡಂತೆ ನೀಡಲಾಗಿದೆ.
ಕುಟುಂಬದ ಸದಸ್ಯರ ಹೆಸರನ್ನು ಸೇರಿಸುವುದು
ಮನೆ ಯಜಮಾನರ ಹೆಸರನ್ನು ಬದಲಿಸುವುದು.
ಫೋಟೋ ಬದಲಾವಣೆ ಮಾಡುವುದು
ಹೆಸರು ಸರಿಪಡಿಸಿಕೊಳ್ಳುವುದು
ಹೆಸರು ತೆಗೆಯುವುದು
ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸಿಕೊಳ್ಳುವುದು
ಈ ಮೇಲೆ ತಿಳಿಸಿದಂತಹ ಎಲ್ಲಾ ಬದಲಾವಣೆಗಳನ್ನು ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡುವಂತಹ ಸಂದರ್ಭದಲ್ಲಿ ಸರಿಪಡಿಸಿ ಕೊಳ್ಳಬಹುದಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೇಕಾಗಿರುವಂತಹ ದಾಖಲಾತಿಗಳು.
ರೇಷನ್ ಕಾರ್ಡ್
ಆಧಾರ್ ಕಾರ್ಡ್
ಜಾತಿ ಅಥವಾ ಆದಾಯ ಪ್ರಮಾಣ ಪತ್ರ
6 ವರ್ಷದ ಒಳಗಿನ ಮಕ್ಕಳನ್ನು ರೇಷನ್ ಕಾರ್ಡ್ ಗೆ ಸೇರಿಸಬೇಕಾಗುತ್ತದೆ ಜನನ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವಂತಹ ಸಂದರ್ಭದಲ್ಲಿ ನೀವು ಎಲ್ಲಿ ಹೋಗಿ ನಿಮ್ಮ ರೇಷನ್ ಕಾರ್ಡ್ ಅನ್ನು ತಿದ್ದಿ ಪಡಿ ಮಾಡಿಸಬೇಕು ಎಂಬ ಗೊಂದಲ ಸಾಕಷ್ಟು ಜನರಲ್ಲಿ ಇರುತ್ತದೆ ಗ್ರಾಮ ಒನ್ ಕೇಂದ್ರಗಳಲ್ಲಿ ಹಾಗೆಯೇ ಕರ್ನಾಟಕ ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಡಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ರೇಷನ್ ಕಾರ್ಡ್ ಜನಸಾಮಾನ್ಯರಿಗೆ ತುಂಬಾ ಅಗತ್ಯವಾದಂತಹ ದಾಖಲಾತಿಯಾಗಿದ್ದು. ಸಾಮಾನ್ಯ ಕುಟುಂಬದ ಬಳಿ ರೇಷನ್ ಕಾರ್ಡ್ ಇದ್ದೇ ಇರುತ್ತದೆ ಯಾವುದೇ ಒಂದು ಸರ್ಕಾರಿ ಹುದ್ದೆ, ನೌಕರಿ ಅಥವಾ ಸರ್ಕಾರದ ಯಾವುದೇ ಯೋಜನೆಗಳ ಅಡಿ ನೀವು ಅರ್ಜಿಯನ್ನು ಸಲ್ಲಿಸಲು ರೇಷನ್ ಕಾರ್ಡ್ ತುಂಬಾ ಅಗತ್ಯವಾದಂತಹ ದಾಖಲಾತಿಯಾಗಿದ್ದು ಈ ದಾಖಲೆಯನ್ನು ನಿಮ್ಮ ಕುಟುಂಬದ ಸದಸ್ಯರನ್ನು ಒಳಗೊಂಡಂತೆ ಮಾಡಿಸಿಕೊಳ್ಳಬೇಕು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಡಿಸೆಂಬರ್ 31 ರ 2024 ತನಕ ರೇಷನ್ ಕಾರ್ಡ್ ತಿದ್ದುಪಡಿಯ ಅವಧಿಯನ್ನು ಹೆಚ್ಚಿಸಿ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು ಆದರೆ ಸಾಕಷ್ಟು ರೇಷನ್ ಕಾರ್ಡ್ ಗಳು ಇನ್ನು ತಿದ್ದುಪಡಿ ಆಗದೇ ಇರುವ ಕಾರಣದಿಂದಾಗಿ ಸಾಕಷ್ಟು ಗೊಂದಲಗಳು ಇರುವ ಕಾರಣದಿಂದಾಗಿ ಇದೀಗ ಜನವರಿ 31- 2025 ವರೆಗೆ ರೇಷನ್ ಕಾರ್ಡ್ ತಿದ್ದುಪಡಿಯ ಅವಧಿಯನ್ನು ಮುಂದೂಡಿಕೆ ಮಾಡಲಾಗಿದೆ.