ಬಸ್ ನಲ್ಲಿ ಪ್ರಯಾಣ ಬೆಳೆಸುವವರಿಗೆ ಬೇಸರದ ಸುದ್ದಿ, ಬಸ್ ಟಿಕೆಟ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ.
ರಾಜ್ಯ ಸರ್ಕಾರವು ಹೊಸ ವರ್ಷದ ಆರಂಭದಿಂದಲೇ ಸರ್ಕಾರಿ ಬಸ್ ಪ್ರಯಾಣಕರಿಗೆ ದರ ಹೆಚ್ಚಳ ಮಾಡಿರುವಂತಹ ಮಾಹಿತಿಯನ್ನು ಹೊರ ಹಾಕಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಎಲ್ಲಾ ರೀತಿಯ ಬಸ್ಗಳ ಪ್ರಯಾಣ ದರವನ್ನು ಶೇಕಡ 15 ರಷ್ಟು ಹೆಚ್ಚಿಸಲು ಗುರುವಾರ ನಡೆಸಿದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಪರಿಷ್ಕೃತ ದರ ಜನವರಿ 5 ರಿಂದಲೇ ಜಾರಿಯಾಗಲಿದೆ ಸಾಮಾನ್ಯ ಬಸ್, ನಗರ ಸಾರಿಗೆ ಬಸ್, ಐಶಾರಾಮಿ ಬಸ್ ಸೇರಿ ಎಲ್ಲ ಬಸ್ ಗಳ ಹಾಲಿ ಪ್ರಯಾಣ ದರವನ್ನು ಶೇಕಡ 15ರಷ್ಟು ಸಮಾನವಾಗಿ ಹೆಚ್ಚಳ ಮಾಡಲಾಗಿದೆ. ರಾಜ್ಯದ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು, ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ನಷ್ಟದಲ್ಲಿದೆ.
ಈ ಕಾರಣದಿಂದ ಪ್ರಯಾಣದ ದರ ಏರಿಕೆ ಮಾಡಬೇಕೆಂಬ ಬೇಡಿಕೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜನವರಿ 5 ರಿಂದಲೇ ಬಸ್ ಟಿಕೆಟ್ ದರ ಹೆಚ್ಚಳ.
ರಾಜ್ಯ ಸರ್ಕಾರವು ತೆಗೆದುಕೊಂಡಿರುವ ತೀರ್ಮಾನಗಳು ಜನವರಿ 5 ರಿಂದಲೇ ಜಾರಿಗೆ ಬರಲಿದೆ. 2025 ರಲ್ಲಿ ನಾಲ್ಕು ನಿಗಮಗಳಿಗೆ ಡೀಸೆಲ್ ವೆಚ್ಚ 9.16 ಕೋಟಿ ತಗುಲುತ್ತಿತ್ತು, ಪ್ರಸ್ತುತ 13.21 ಕೋಟಿ ರೂ ಗೆ ಹೆಚ್ಚಳವಾಗಿದೆ. ಈ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಪ್ರತಿದಿನ ಸಿಬ್ಬಂದಿ ವೆಚ್ಚವು 12.85 ಕೋಟಿ ರೂ ಇದ್ದದ್ದು ಪ್ರಸ್ತುತ 18.36 ಕೋಟಿ ರೂಗಳಾಗಿದೆ. ಪ್ರತಿದಿನ 9.56 ಕೋಟಿ ರೂ ಹೆಚ್ಚುವರಿ ಉಂಟಾಗುತ್ತದೆ ಆದ್ದರಿಂದ ದರ ಏರಿಕೆ ಮಾಡಲಾಗಿದೆ.
ಶೇಕಡ 15ರಷ್ಟು ಬಸ್ ಟಿಕೆಟ್ ದರ ಹೆಚ್ಚಳದಿಂದಾಗಿ ನಾಲ್ಕು ನಿಗಮಗಳ ಮಾಸಿಕ ಆದಾಯದಲ್ಲಿ 74.85 ಕೋಟಿ ರೂಗಳಷ್ಟು ಹೆಚ್ಚಳವಾಗಲಿದೆ ಶಕ್ತಿ ಯೋಜನೆಗಾಗಿ ಪ್ರಸ್ತುತ ಸಾಲಿನ ಬಜೆಟ್ ನಲ್ಲಿ 5015 ಕೋಟಿ ರೂ ಅನುದಾನ ಹಂಚಿಕೆ ಮಾಡಲಾಗಿದೆ ಪ್ರತಿ ತಿಂಗಳು ನಾಲ್ಕು ನಿಗಮಗಳಿಗೆ 417 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗುತ್ತದೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಆಗುವುದಿಲ್ಲ ಎಂದು ಹೆಚ್ ಕೆ ಪಾಟೀಲ್ ತಿಳಿಸಿದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡುವ ಶಕ್ತಿ ಯೋಜನೆಯಿಂದ ಸಾರಿಗೆ ನಿಯಮ ಭಾರಿ ನಷ್ಟದಲ್ಲಿದೆ ಶಕ್ತಿ ಯೋಜನೆಯನ್ನು ಪರಿಷ್ಕರಣೆ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿದ್ದವು, ಆದರೆ ಶಕ್ತಿ ಯೋಜನೆ ಕೈಬಿಡದೆ ಅಥವಾ ಮಾರ್ಪಾಡು ಮಾಡದೆ ರಾಜ್ಯ ಸರ್ಕಾರ ಪ್ರಯಾಣದರ ಪರಿಷ್ಕರಣೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ.
ಮಹಿಳೆಯರಿಗೆ ಬಸ್ ಫ್ರೀ ಇದಿಯಾ ಇಲ್ಲವಾ.?
ಸಿದ್ದರಾಮಯ್ಯ ಅವರ ಸರ್ಕಾರವು ಈಗಾಗಲೇ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣವನ್ನು ಕಲ್ಪಿಸಿ ಕೊಟ್ಟಿದ್ದು ಇದರಲ್ಲಿ ಯಾವುದೇ ವ್ಯತ್ಯಾಸಗಳು ಇರುವುದಿಲ್ಲ ಮಹಿಳೆಯರಿಗೆ ಎಂದಿನಂತೆ ಉಚಿತ ಬಸ್ ಪ್ರಯಾಣ ನಡೆಸಲು ಸರ್ಕಾರವು ಅನುಮೋದನೆಯನ್ನು ನೀಡಲಾಗಿದೆ ಇದನ್ನು ಹೊರತುಪಡಿಸಿ. ಬಸ್ ಟಿಕೆಟ್ ದರದಲ್ಲಿ 15 ಪರ್ಸೆಂಟ್ ಹೆಚ್ಚಳವನ್ನು ಮಾಡಲಾಗಿದ್ದು ಈ ಕುರಿತಾದಂತಹ ಮಾಹಿತಿಯನ್ನು ಮೇಲೆ ವಿವರಿಸಲಾಗಿದೆ.