ಇದೀಗ ಸಾಮಾಜಿಕ ಜಾಲತಾಣದಲ್ಲಿ 5000 ರೂಪಾಯಿಯ ನೋಟು ಚಲಾವಣೆಗೆ ಬರಲಿದೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ RBI ಒಪ್ಪಿಗೆಯನ್ನು ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ. RBI 2,000 ಮುಖ ಬೆಲೆಯ ನೋಟನ್ನು ಹಿಂಪಡೆದ ಕಾರಣದಿಂದಾಗಿ ಈ ಒಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಇದಕ್ಕೆ RBI ಉತ್ತರಿಸಿದೆ.
2000 ರೂಪಾಯಿ ನೋಟು ವಾಪಸ್ ಪಡೆದಿರುವ RBI
ನಿಮಗೆಲ್ಲರಿಗೂ ತಿಳಿದಿರುವ ಹಾಗೆ RBI ಈಗಾಗಲೇ 2000 ನೋಟನ್ನು ಹಿಂಪಡೆದಿದೆ ಈ ಕಾರಣದಿಂದಾಗಿ 5000 ಮುಖಬೆಲೆಯ ನೋಟು ಮಾರುಕಟ್ಟೆಗೆ ಬರಲಿದೆ ಎಂದು ಎಲ್ಲರೂ ಊಹಾಪೋಹಗಳನ್ನು ಸೃಷ್ಟಿಸುತ್ತಿದ್ದಾರೆ. ಪ್ರಚಲಿತದಲ್ಲಿ 500, 200, 100, 50, 10 ರೂಪಾಯಿಯ ನೋಟುಗಳು ಚಲಾವಣೆಯಲ್ಲಿ ಇದೆ.
5000 ನೋಟು ಬಿಡುಗಡೆ ಬಗ್ಗೆ RBI ನ ಉತ್ತರ.?
5000 ರೂಪಾಯಿಯ ನೋಟು ಚಲಾವಣೆಗೆ ಬರುವುದಿಲ್ಲ ಎಂದು RBI ನ ಗವರ್ನರ್ ಸ್ಪಷ್ಟಪಡಿಸಿದ್ದಾರೆ ಇದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತಹ ಮಾಹಿತಿಯಾಗಿದ್ದು RBI ನಿಂದ ಹೊರ ಬಂದಿರುವಂತಹ ಮಾಹಿತಿ ಅಲ್ಲ ಆದ್ದರಿಂದ ಇದನ್ನು ಯಾರು ಸಹ ಗಂಭೀರವಾಗಿ ತೆಗೆದುಕೊಳ್ಳಬಾರದು.
5000 ಮುಖಬೆಲೆಯ ನೋಟು ಚಲಾವಣೆಗೆ ಬರಲಿದೆ ಎಂದು ವದಂತಿ ಸೃಷ್ಟಿಸಲು ಕಾರಣ ಏನೆಂದರೆ.?
ಭಾರತೀಯ ರಿಸರ್ವ್ ಬ್ಯಾಂಕ್ 2000 ಮುಖಬೆಲೆಯ ನೋಟನ್ನು ಹಿಂಪಡೆದ ನಂತರ ಅಧಿಕ ಬೆಲೆಯ ನೋಟು ಚಲಾವಣೆಯಲ್ಲಿ ಇಲ್ಲ. ಇದೀಗ ಭಾರತದಲ್ಲಿ 500 ರೂಪಾಯಿಯ ನೋಟು ಚಾಲ್ತಿಯಲ್ಲಿ ಇದೆ ಆದ್ದರಿಂದ 5000 ಮುಖಬೆಲೆಯ ನೋಟು ಜಾರಿಗೆ ಬರಲಿದೆ ಎಂದು ಸುದ್ದಿ ಹರಿದಾಡುತ್ತಿದೆ.
ಭಾರತದಲ್ಲಿ ಹಿಂದೆ ಚಲಾವಣೆಯಲ್ಲಿ ಇದ್ದಂತಹ ಅಧಿಕ ಬೆಲೆಯ ನೋಟುಗಳು ಈ ಕೆಳಕಂಡಂತಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿರುವ ಹಾಗೆ ಅಧಿಕ ಬೆಲೆಯ ನೋಟುಗಳು ಭಾರತಕ್ಕೆ ಹೊಸದೇನಲ್ಲ. ಭಾರತದಲ್ಲಿ ಸುಮಾರು 24 ವರ್ಷಗಳ ಕಾಲ ಅಧಿಕ ಬೆಲೆಯ ನೋಟುಗಳು ಚಲಾವಣೆಯಲ್ಲಿ ಇದ್ದವು. 1947 ಸ್ವಾತಂತ್ರ್ಯ ಬಂದ ನಂತರ 10,000 ಮುಖಬೆಲೆಯ ನೋಟುಗಳು ಭಾರತದಲ್ಲಿ ಚಲಾವಣೆಗೆ ಬಂತು. ಹಾಗೆಯೇ 1954ರಲ್ಲಿ 5000 ಮುಖಬೆಲೆಯ ನೋಟು ಚಲಾವಣೆಗೆ ಬಂತು ಆದರೆ 1978ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ 1000, 5000 ಹಾಗೂ 10,000 ನೋಟುಗಳನ್ನು ರದ್ದತಿ ಮಾಡಲಾಯಿತು.
ಇದೀಗ ಜನರು ಡಿಜಿಟಲ್ ಯುಗದಲ್ಲಿ ಇರುವುದರಿಂದ UPI, ನೆಟ್ ಬ್ಯಾಂಕಿಂಗ್, ಡಿಜಿಟಲ್ ಬ್ಯಾಂಕಿಂಗ್ ಗಳು ನಗದಿಗೆ ಪರ್ಯಾಯವಾಗಿ ಬಂದಿದೆ. ಇಂತಹ ಸಮಯದಲ್ಲಿ ಹೆಚ್ಚು ಮುಖಬೆಲೆಯ ನೋಟನ್ನು ಜಾರಿಗೆ ತರುವುದು ಸರಿಯಲ್ಲ ಎಂದು RBI ಸ್ಪಷ್ಟನೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಜನರು ಹೇಗಾಗಿದ್ದಾರೆ ಎಂದರೆ ನಗದು ಇಲ್ಲದಿದ್ದರೂ ಸಹ ಡಿಜಿಟಲ್ ಮುಖಾಂತರವಾಗಿ ತಮ್ಮ ದೈನಂದಿನ ವ್ಯವಹಾರಗಳನ್ನು ನಡೆಸಲು ಸಾಧ್ಯ ಆಗುತ್ತದೆ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಈ ಕಾರಣದಿಂದಾಗಿ RBIಹೆಚ್ಚು ಮುಖಬೆಲೆಯ ನೋಟನ್ನು ಜಾರಿಗೆ ತರುವುದರ ಕಡೆ ಗಮನಹರಿಸಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತಹ ವದಂತಿಗಳ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು RBI ನೀಡಿಲ್ಲ ಆದ್ದರಿಂದ ಈ ವದಂತಿಗಳು ಸುಳ್ಳು ಎಂದು ತಿಳಿದುಕೊಳ್ಳಬಹುದು ಯಾವುದೇ ನೋಟುಗಳನ್ನು ಚಲಾವಣೆಗೆ ತರಬೇಕಾದರೆ RBI ನಿಂದ ಸ್ಪಷ್ಟನೆ ನೀಡಬೇಕು ಅಂದರೆ RBIವನ ಗವರ್ನರ್ ಯಾವುದೇ ಮುಖ ಬೆಲೆಯ ನೋಟನ್ನು ಚಲಾವಣೆ ತರುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದರೆ ಮಾತ್ರ ಭಾರತದಲ್ಲಿ ಅಧಿಕ ಮೊತ್ತದ ನೋಟು ಬಿಡುಗಡೆ ಆಗುತ್ತದೆ.