ಅನ್ನ ಭಾಗ್ಯ ಯೋಜನೆ ಮೂಲಕ ಉಚಿತವಾಗಿ ಪಡಿತರ ಚೀಟಿ ಮೂಲಕ ಅಕ್ಕಿಯನ್ನು ಪಡೆಯುತ್ತಿದ್ದ ಬಿಪಿಎಲ್ ಕಾರ್ಡ್ ದಾರರಿಗೆ ಇದೀಗ ಇನ್ನೊಂದು ಸಿಹಿ ಸುದ್ದಿ ಸರ್ಕಾರದ ಕಡೆಯಿಂದ ಸಿಕ್ಕಿದೆ. ಈ ಬಾರಿ ಕೇಂದ್ರ ಸರ್ಕಾರವು ಇಂತಹದೊಂದು ಸಿಹಿ ಸುದ್ದಿ ನೀಡಿದ್ದು ಇದರಿಂದ ದೇಶದ ಎಲ್ಲ ಬಡ, ನಿರ್ಗತಿಕ ವರ್ಗದವರು ಮತ್ತು ರೈತರು ಖುಷಿಯಾಗಿದ್ದಾರೆ. ನಮ್ಮ ದೇಶದಲ್ಲಿ ಕೋಟ್ಯಾಂತರ ಕುಟುಂಬಗಳು BPL ಕಾರ್ಡನ್ನು ಹೊಂದಿವೆ.
ಬಿಪಿಎಲ್ ಕಾರ್ಡ್ ಅವರು ಬಡತನ ರೇಖೆಗಿಂತ ಕೆಳಗಿದ್ದಾರೆ ಇವರಿಗೆಲ್ಲ ಉಚಿತವಾದ ಆಹಾರ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಸರಕಾರದ ಮಹತ್ವಕಾಂಕ್ಷೆ. ಇದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಇದರ ಜೊತೆ ಈಗ ಹೊಸ ಯೋಜನೆಯನ್ನು ಸೇರ್ಪಡೆ ಮಾಡಿದೆ. ಯಾವುದೆಂದರೆ ಕೇಂದ್ರ ಸರ್ಕಾರದ ಆಹಾರ ಪಾಕೆಟ್ ಯೋಜನೆ 2023.
ಈ ಯೋಜನೆ ಪ್ರಮುಖ ಅಂಶಗಳು ಏನೆಂದರೆ ಸರ್ಕಾರವು ಈವರಿಗೆ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಅಕ್ಕಿ, ರಾಗಿ, ಗೋಧಿ ಮತ್ತು ಮಾತ್ರ ನೀಡುತ್ತಿತ್ತು. ಇನ್ನು ಮುಂದೆ ಇದರ ಜೊತೆ ಅನ್ನಪೂರ್ಣ ಪ್ಯಾಕೆಟ್ ಅನ್ನುವ ಉಚಿತ ಪಾಕೆಟ್ ಅನ್ನು ನೀಡಲು ಮುಂದಾಗಿದೆ. ಆ ಪ್ಯಾಕೆಟ್ ಮೂಲಕ ಇನ್ನಷ್ಟು ಆಹಾರ ಪದಾರ್ಥಗಳನ್ನು ಅದಕ್ಕೆ ಸೇರಿಸಿ ಉಚಿತವಾಗಿ ಅನ್ನಪೂರ್ಣ ಪಾಕೆಟ್ ಅನ್ನು ಕೊಡಲು ಚಿಂತಿಸಿದೆ.
ಈಗಾಗಲೇ ಇದಕ್ಕೆ ಕಾರ್ಯ ಸೂಚಿ ಆರಂಭವಾಗಿದ್ದು ಈ ಯೋಜನೆಯ ಫಲಾನುಭವಿಗಳಾಗಲು ನೋಂದಣಿ ಕೂಡ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರವೇ ಒಂದು ಶಿಬಿರವನ್ನು ಏರ್ಪಡಿಸಲಿದೆ. ಏಪ್ರಿಲ್ 24, 2023ರ ನಂತರ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಹಾರ ಪ್ಯಾಕೆಟ್ಗಳ ಪ್ರಯೋಜನವನ್ನು ಪಡೆಯಲು ನೋಂದಾಯಿಸಲು ಹಣ ದುಬ್ಬರ ಪರಿಶೀಲನ ಶಿಬಿರವನ್ನು ಏರ್ಪಡಿಸಲಾಗುತ್ತದೆ.
ಈ ಶಿಬಿರದಲ್ಲಿ ಪಾಲ್ಗೊಂಡು ಅರ್ಜಿ ಫಾರಂ ಪಡೆದು ತಮ್ಮ ವೈಯುಕ್ತಿಕ ವಿವರಗಳನ್ನೆಲ್ಲ ತುಂಬಿಸಿ ಕೇಳಲಾಗುವ ಸಂಭಂದಿತ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸುವ ಮೂಲಕ ನೀವು ಇದಕ್ಕೆ ನೋಂದಣಿ ಆಗಬಹುದು. ಅಥವಾ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ಅಧಿಕೃತ ವೆಬ್ಸೈಟ್ ಗಳಿಗೆ ಭೇಟಿ ಕೊಟ್ಟು ಆ ಪ್ರಕಾರದ ನಿಯಮಗಳನ್ನು ಪೂರ್ತಿಗೊಳಿಸಿ ಸಹ ನೋಂದಣಿ ಆಗಬಹುದು. ಶೀಘ್ರವಾಗಿ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಶತ ಪ್ರಯತ್ನ ಪಡುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ಈ ಉಚಿತ ಅನ್ನಪೂರ್ಣ ಪಾಕೆಟ್ ಯೋಜನೆಯನ್ನು ಸಾಕಾರಗೊಳಿಸಲು ನಿರ್ಧರಿಸಿದೆ. ಇದಕ್ಕೆ ಸಹಕಾರಿ ಇಲಾಖೆಯು ಕೂಡ ನಿಗ ವಹಿಸಿ ಸಾಥ್ ನೀಡಲಿದೆ. ಒಂದು ಉಚಿತ ಪಾಕೆಟ್ ಗೆ ಬೆಲೆ 370 ತಗಲಲಿದೆ. ಆದರೆ ಸರ್ಕಾರ ದೇಶದ ನಾಗರಿಕರಿಗೆ ಇದನ್ನು ಉಚಿತವಾಗಿ ಕೊಡಲು ನಿರ್ಧಾರ ಮಾಡಿರುವುದರಿಂದ ಸರ್ಕಾರಕ್ಕೆ ಇನ್ನು ಮುಂದೆ 392 ಕೋಟಿ ರೂ ಹೊರೆ ಹೆಚ್ಚಾಗಲಿದೆ.
ಆದರೂ ಈ ಯೋಜನೆ ಮೂಲಕ ದೇಶದ ಬಡವರಿಗೆ ನೆರವಾಗಲು ಇದನ್ನು ಜಾರಿಗೆ ತರಲಾಗಿದೆ. ಸರ್ಕಾರ ನೀಡುವ ಈ ಉಚಿತ ಪಾಕೆಟ್ ಯೋಜನೆಯಲ್ಲಿ ಸಿಗುವ ಆಹಾರ ಪದಾರ್ಥಗಳು ಮತ್ತು ಅದರ ಪ್ರಮಾಣ ಈ ರೀತಿ ಇರಲಿದೆ.
● ಸಕ್ಕರೆ – 1 ಕೆಜಿ
● ತೊಗರಿ ಬೇಳೆ – 1 ಕೆಜಿ
● ಸಾಸಿವೆ ಎಣ್ಣೆ – 1 ಲೀಟರ್
● ಉಪ್ಪು – 1 ಕೆಜಿ
● ಕೊತ್ತಂಬರಿ – 100ಗ್ರಾಂ
● ಮೆಣಸಿನ ಪುಡಿ – 100ಗ್ರಾಂ
● ಅರಿಶಿನ ಪುಡಿ – 100ಗ್ರಾಂ