ಕೇಂದ್ರದಲ್ಲಿ ಬಿಜೆಪಿ ಸರ್ಕಾರ (Central govrment) ಬಂದಾಗ ಬಡವರಿಗೆ ಮತ್ತು ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. ಅದರಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಅವರ ವಿದ್ಯಾಭ್ಯಾಸದ ಮತ್ತು ಆರ್ಥಿಕ ಭದ್ರತೆಯ ಬಗ್ಗೆ ಮುಂದಾಲೋಚನೆ ಮಾಡಿ ಸುಕನ್ಯ ಸಮೃದ್ಧಿ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದು, ಸುಕನ್ಯಾ ಸಮೃದ್ಧಿ ಯೋಜನೆ (Sukanya samruddi yojane) ಹೆಣ್ಣು ಮಕ್ಕಳಿಗಾಗಿ ಇರುವ ಉತ್ತಮ ಯೋಜನೆ ಎನಿಸಿಕೊಂಡಿದೆ.
ಈ ಯೋಚನೆಯಲ್ಲಿ ನೀವು ಪ್ರತಿ ತಿಂಗಳು ಹಣ ಹೂಡಿಕೆ ಮಾಡುತ್ತಾ ಬಂದಲ್ಲಿ ನಿಮ್ಮ ಮಗಳಿಗೆ 18 ವರ್ಷ ತುಂಬಿದ ಬಳಿಕ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಮದುವೆ ಖರ್ಚಿಗೆ ಈ ಹಣ ಉಪಯೋಗ ಆಗಲಿದೆ. ಆದ್ದರಿಂದ ಇದು ದೇಶದಾದ್ಯಂತ ಹೆಣ್ಣು ಮಕ್ಕಳ ಹೆತ್ತವರ ಪಾಲಿಕೆ ವರದಾನವಾಗಿದೆ. ಈಗ ಆ ಯೋಜನೆಗಳಲ್ಲಿ ಸ್ವಲ್ಪ ಮಾರ್ಪಾಡು ಮಾಡುವ ಮೂಲಕ ಇನ್ನು ಅನುಕೂಲ ಮಾಡುತ್ತಿದೆ ಕೇಂದ್ರ ಸರ್ಕಾರ.
ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಪೋಸ್ಟ್ ಆಫೀಸ್ ಯೋಜನೆಯೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಈಗ ನೀವು ಅದನ್ನು ದೇಶದ ಇನ್ನಿತರ ರಾಷ್ಟೀಕೃತ ಬ್ಯಾಂಕ್ ಗಳಲ್ಲಿ ಕೂಡ ಆರಂಭಿಸಬಹುದು. ಸ್ವತಃ ಎಸ್‌ಬಿಐ (SBI) ಟ್ವೀಟ್ (Tweet) ಮಾಡಿ ಈ ಖುಷಿ ಸಮಾಚಾರವನ್ನು ಹಂಚಿಕೊಂಡಿದೆ. ಈ ಯೋಜನೆಯನ್ನು ಹತ್ತು ವರ್ಷ ತುಂಬುವ ಮೊದಲು ಯಾವುದೇ ಹೆಣ್ಣು ಮಗಳ ಹೆಸರಿನಲ್ಲಿ ತೆರೆಯಬಹುದು ಆದರೆ ಒಂದು ಹೆಣ್ಣು ಮಗುವಿಗೆ ಒಂದು ಅಕೌಂಟ್ ಮಾತ್ರ ಪಡೆಯಬಹುದು.
ಇದರಲ್ಲಿ ನೀವು ವರ್ಷಕ್ಕೆ ಗರಿಷ್ಠ ಒಂದೂವರೆ ಲಕ್ಷದವರೆಗೆ ಸಹ ಹೂಡಿಕೆ ಮಾಡಬಹುದು ಆದರೆ ನೀವು ಒಂದುವರೆ ಲಕ್ಷದವರೆಗೆ ಯೋಚನೆ ಮಾಡಿಸಿ ಯಾವುದಾದರೂ ಒಂದು ವರ್ಷ ಅಷ್ಟು ಹೂಡಿಕೆ ಮಾಡಲು ಸಾಧ್ಯವಾಗದ ಸಮಯದಲ್ಲಿ ಕನಿಷ್ಠ 250 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಅದನ್ನು ಉಳಿಸಿಕೊಳ್ಳಬಹುದು. ಇಷ್ಟೊಂದು ವಿನಾಯಿತಿಯನ್ನು ಯೋಜನೆ ಹೊಂದಿದೆ ಜೊತೆಗೆ ಆಕರ್ಷಣೀಯ ಬಡ್ಡಿ ದರವನ್ನು ಸಹ ಇದು ಹೊಂದಿದೆ.
ಈ ಯೋಜನೆಯಲ್ಲಿ ನೀವು ಖಚಿತವಾದ ಆದಾಯವನ್ನು ಹೊಂದಿರುತ್ತೀರಿ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ರಿಯಾಯಿತಿಯನ್ನು ಸಹ ಪಡೆಯಲಿದ್ದೀರಿ. ಹೆಣ್ಣು ಮಕ್ಕಳಿಗಾಗಿ ಇರುವ ವಿಶೇಷ ಯೋಜನೆ ಇದಾಗಿದೆ ಯಾವುದೇ ಪೋಷಕರು ತಮ್ಮ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಯೋಜನೆಯನ್ನು ಆರಂಭಿಸಬಹುದು. ಒಂದು ವೇಳೆ ಮೊದಲ ಮಗಳ ಜೊತೆ ಅವಳಿ ಜವಳಿ ಹೆಣ್ಣು ಮಕ್ಕಳು ಇದ್ದರೆ ಮೂರು ಮಕ್ಕಳು ಸಹ ಯೋಜನೆಯ ಫಲಾನುಭವಿಗಳಾಗಬಹುದು.
ಪ್ರಸ್ತುತ ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ ಅಲ್ಲಿ ಹೂಡಿಕೆ ಮಾಡಿರುವವರಿಗೆ ಶೇಕಡ 7.6% ಅಷ್ಟು ಬಡ್ಡಿ ದರವನ್ನು ನೀಡುತ್ತಿದೆ. ಇದು ದೇಶದಲ್ಲಿ ಅತಿ ಹೆಚ್ಚು ಬಡ್ಡಿದರವನ್ನು ಹೊಂದಿರುವ ಯೋಜನೆಯು ಸಹ ಆಗಿದೆ ನೀವು ಮಾಸಿಕ ಕಂತುಗಳನ್ನು ಅಥವಾ ವಾರ್ಷಿಕ ಕಂತಿನಲ್ಲಿ ಸಹ ಹೂಡಿಕೆ ಮಾಡುವ ಅನುಕೂಲತೆ ಮಾಡಿಕೊಡಲಾಗಿದೆ. ನೀವು ವರ್ಷಕ್ಕೆ ಒಂದುವರೆ ಲಕ್ಷದಷ್ಟು ಹೂಡಿಕೆ ಮಾಡಿದರೆ ಅಂತ್ಯದಲ್ಲಿ ತೆರಿಗೆ ಮುಕ್ತವಾಗಿ 15 ಲಕ್ಷ ನಿಮ್ಮ ಕೈ ಸೇರುತ್ತದೆ ನಿಮ್ಮ ಮನೆಯಲ್ಲಿ ಸಹ ಹೆಣ್ಣು ಮಕ್ಕಳು ಇದ್ದರೆ ನೀವು ಹೆಣ್ಣು ಮಕ್ಕಳ ಪೋಷಕರಾಗಿದ್ದರೆ ಈ ಕೂಡಲೇ ತಕ್ಷಣ ನಿಮ್ಮ ಮಕ್ಕಳ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ತೆರೆದು ಇದರ ಸದುಪಯೋಗ ಪಡೆದುಕೊಳ್ಳಿ.