SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!

 

WhatsApp Group Join Now
Telegram Group Join Now

ಭಾರತದ ಸರ್ಕಾರಿ ವಲಯದ ಬ್ಯಾಂಕ್ ಗಳಲ್ಲಿ ಹೆಸರಾಂತ ಬ್ಯಾಂಕ್ ಆದ SBI (State Bank of India) ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸದಾ ಕಾಲ ತನ್ನ ಗ್ರಾಹಕರಿಗಾಗಿ ವಿಭಿನ್ನ ಬಗೆಯ ಅನುಕೂಲಕರ ಯೋಜನೆಗಳನ್ನು ಪರಿಚಯಿಸುವ SBI ಬ್ಯಾಂಕ್ ಈ ಬಾರಿ ಇದಾಗಲೇ ಬಳಕೆಯಲ್ಲಿರುವ ಯೋಜನೆಯೊಂದರ ಬಡ್ಡಿದರ ಹೆಚ್ಚಳದ ಬಗ್ಗೆ ಘೋಷಣೆ ಮಾಡಿ ಸಂತೋಷ ಪಡಿಸಿದೆ.

ಆ ಪ್ರಕಾರವಾಗಿ ಇನ್ನು ಮುಂದೆ ಯಾರೆಲ್ಲಾ SBI ಬ್ಯಾಂಕ್ ನಲ್ಲಿ ಎರಡು ಕೋಟಿ ಗಿಂತ ಕಡಿಮೆ ಹಣದ ಹಣವನ್ನು ಒಂದು ವರ್ಷದ ಒಳಗೆ ಸ್ಥಿರ ಠೇವಣಿಯನ್ನು ಇಡುತ್ತಾರೆ ಅವರಿಗೆ ಈ ಅನುಕೂಲ ದೊರಕ ಬಡ್ಡಿದರ ಹೆಚ್ಚಳವಾಗಿರುವುದರಿಂದ ಈವರೆಗೂ ದೊರಕುತ್ತಿದ್ದಕ್ಕಿಂತ ಹೆಚ್ಚಿನ ಹಣ ಸಿಗುತ್ತಿದೆ ಇದರ ಸಂಬಂಧಿತ ವಿವರ ಹೇಗಿದೆ ನೋಡಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ಕೋಟಿ ರೂಪಾಯಿ ಒಳಗಿನ ಚಿಲ್ಲರೆ ಠೇವಣಿಗಳ ಮೇಲೆ ಸ್ಥಿರ ಠೇವಣಿ ಬಡ್ಡಿ ದರವನ್ನು ಹೆಚ್ಚಿಸಿದೆ. ಮೇ 15 2024ರಿಂದಲೇ ಈ ಹೊಸ ದರಗಳು ಅನ್ವಯವಾಗುತ್ತಿದ್ದು ಒಂದು ವರ್ಷ ಅವಧಿಗಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿ ಖಾತೆಗಳ ಮೇಲಿನ ಬಡ್ಡಿದರವನ್ನು 25 ರಿಂದ 75 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟಬೇಕು ಅನ್ನುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್ ನಲ್ಲಿ ಸಿಗಲಿದೆ ಅತಿ ಕಡಿಮೆ ಬಡ್ಡಿಗೆ ಸಾಲ.!

ಆದರೆ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ FD ಗಳ ಮೇಲಿನ ಬಡ್ಡಿದರಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇರುವುದಿಲ್ಲ. ಹಿರಿಯ ನಾಗರಿಕರ ವಿಚಾರದಲ್ಲಿ ಇದು ಡಬಲ್ ಧಮಾಕ ಎಂದು ಹೇಳಬಹುದು. ಯಾಕೆಂದರೆ, ಬ್ಯಾಂಕಿಂಗ್ ನಿಯಮಗಳ ಪ್ರಕಾರವಾಗಿ ಹಿರಿಯ ನಾಗರಿಕರು ಪರೀಷ್ಕೃತ ಯಾವುದೇ ಯೋಜನೆ ಮೇಲಿನ ಬಡ್ಡಿ ದರಕ್ಕಿಂತ 50 ಬೇಸಿಕ್ ಪಾಯಿಂಟ್ ಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ.

ಪರಿಷ್ಕೃತಗೊಂಡ SBI ನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಹೀಗಿದೆ:-

* 7 ದಿನಗಳಿಂದ 45 ದಿನಗಳ ವರೆಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಶೇ.3.50
* 46 ದಿನಗಳಿಂದ 179 ದಿನಗಳ ವರೆಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಶೇ.5.50
* 180 ದಿನಗಳಿಂದ 210 ದಿನಗಳ ವರೆಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಶೇ.6.00
* 211 ದಿನಗಳಿಂದ 45 ದಿನಗಳ ಒಂದು ವರ್ಷದವರೆಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಶೇ.6.25

ಒಂದು ವರ್ಷಗಳ ಮೇಲಿನ ಸ್ಥಿರ ಠೇವಣಿಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಅವುಗಳ ಬಡ್ಡಿದರ ಹೀಗಿದೆ :-

* 01 ವರ್ಷದಿಂದ 02 ಗಳ ವರೆಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಶೇ.6.8
* 02 ವರ್ಷಗಳಿಂದ 03 ವರ್ಷಗಳ ವರೆಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಶೇ.7
* 03 ವರ್ಷಗಳಿಂದ 05 ವರ್ಷದೊಳಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಶೇ.6.7
* 05 ವರ್ಷಗಳಿಂದ 10 ವರ್ಷಗಳ ವರೆಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಶೇ.6.5
* ಹಿರಿಯ ನಾಗರಿಕರು ಈ ಮೇಲೆ ತಿಳಿಸಿದ ಸ್ಥಿರ ಠೇವಣಿಗಳ ಮೇಲೆ 0.50% ಹೆಚ್ಚುವರಿ ಬಡ್ಡಿ ದರವನ್ನು ಪಡೆಯುತ್ತಾರೆ. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದರೂ SBI ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಹತ್ತಿರದ SBI ಶಾಖೆಗೆ ಭೇಟಿ ನೀಡಿ.

ಈ ಸುದ್ದಿ ಓದಿ:- PUC ಪಾಸಾದವರಿಗೆ 1 ಲಕ್ಷ ವಿದ್ಯಾರ್ಥಿ ವೇತನ, ಆಸಕ್ತರು ಅರ್ಜಿ ಸಲ್ಲಿಸಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now