ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಅವರು ಎಲ್ಲಾ ನಿರುದ್ಯೋಗಿ ಯುವಕ ಯುವತಿಯರಿಗೆ ಹಾಗೂ ಮನೆಯಲ್ಲಿ ಇರುವ ಗೃಹಿಣಿಯರಿಗೆ ಸೇರಿದಂತೆ ಎಲ್ಲರಿಗೂ ಒಂದು ಸುವರ್ಣ ಅವಕಾಶವನ್ನು ನೀಡಿದ್ದು ಮನೆಯಲ್ಲಿ ಸ್ವಜಾಗ ಇದ್ದವರು ಪ್ರತಿ ತಿಂಗಳು 30 ರಿಂದ 50 ಸಾವಿರ ರೂಪಾಯಿಗಳನ್ನು ಸಂಪಾದಿಸಬಹುದಾಗಿದೆ. ಇಂದಿನ ಕಾಲದಲ್ಲಿ ಆನ್ಲೈನ್ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಾರೆ. ಹಾಗೆಯೇ ಇಲ್ಲಿ ಎಸ್ಬಿಐನ ಮೂಲಕ ಹೇಗೆ ಸಂಪಾದಿಸಬಹುದು ಎಂದು ತಿಳಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಅತಿ ಹೆಚ್ಚು ಖಾತೆದಾರರನ್ನು ಹೊಂದಿರುವ ಏಕೈಕ ಬ್ಯಾಂಕ್ ಆಗಿದೆ ಈ ಸಂದರ್ಭದಲ್ಲಿ ಎಸ್ ಬಿ ಐ ಬ್ಯಾಂಕ್ ನಲ್ಲಿ ಕೋಟ್ಯಾಂತರ ಜನರ ಖಾತೆಗಳು ಲಭ್ಯವಿದೆ. ಎಸ್ ಬಿ ಐ ನಲ್ಲಿ ಹಲವಾರು ರೀತಿಯ ಗಳಿಕೆಗಳು ಇವೆ. ಹೆಚ್ಚಿನ ಜನರು ಎಸ್ ಬಿ ಐ ನಲ್ಲಿ ಹಣವನ್ನು ಹೂಡಿಕೆ ಮಾಡುವುದರ ಮುಖಾಂತರ ಗಳಿಕೆಯನ್ನು ಬಯಸುತ್ತಾರೆ. ಅಲ್ಲದೆ ಮ್ಯೂಚುವಲ್ ಫಂಡ್, ಎಫ್ ಡಿ ಹಾಗೂ ಸ್ಟಾಕ್ ಇತರ ಮಾರ್ಗಗಳಿಂದಲೂ ಜನರು ಗಳಿಕೆಯನ್ನು ಪಡೆಯುತ್ತಾರೆ ಹಾಗೂ ಕೆಲವು ಜನಪ್ರಿಯ ವ್ಯವಹಾರಗಳ ಸಹಾಯದಿಂದಲೂ ಸಹ ಹಣವನ್ನು ಪಡೆಯಬಹುದು.
ಹಾಗೆಯೇ ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವಂತಹ ನಿರುದ್ಯೋಗಿ ಯುವಕ, ಯುವತಿಯರು, ಗೃಹಣಿಯರು ಸೇರಿದಂತೆ ಇತರರಿಗೆ ಎಸ್ ಬಿ ಐ ನ ಎಟಿಎಂ ಫ್ರಾಂಚೈಸಿ ಹೊಂದುವ ಮೂಲಕ ತಿಂಗಳಿಗೆ 30 ರಿಂದ 50 ಸಾವಿರ ರೂಪಾಯಿಗಳನ್ನು ಸಂಪಾದನೆ ಮಾಡಬಹುದಂತಹ ಒಂದು ಸುವರ್ಣಾವಕಾಶವನ್ನು ಎಸ್ ಬಿ ಐ ಬ್ಯಾಂಕ್ ನೀಡಿದೆ. ಹಾಗಾದರೆ ಎಸ್ ಬಿ ಐ ಎಟಿಮ್ ಫ್ರಾಂಚೈಸಿ ಪಡೆಯುವುದು ಹೇಗೆ ಹಾಗೂ ಅದಕ್ಕೆ ಬೇಕಾಗಿರುವ ಅರ್ಹತೆಗಳು ಏನು ಎಂಬುದನ್ನು ಇಲ್ಲಿ ತಿಳಿಯಬಹುದು.
ಮೊದಲನೆಯದಾಗಿ ಎಸ್ ಬಿ ಐ ಬ್ಯಾಂಕ್ ಎ ಟಿ ಎಮ್ ನ ಫ್ರಾಂಚೈಸಿ ಆಗಲು ಬಯಸುವವರು ತಮ್ಮ ಹೆಸರಿನಲ್ಲಿ 80 ರಿಂದ 100 ಚದರ ಅಡಿ ಜಾಗ ಇರಬೇಕು. ಆ ಲಭ್ಯವಿರುವ ಜಾಗದಲ್ಲಿ ಕೊಠಡಿಗಳನ್ನು ನಿರ್ಮಿಸಬೇಕು. ಆ ಭೂಮಿಯು ಹೆಚ್ಚು ಜನ ಸಂದಣಿ ಇರುವ ಜಾಗವಾಗಿ ಇರಬೇಕು. ಆ ಲಭ್ಯವಿರುವ ಜಾಗದಲ್ಲಿ ನಿರಂತರ ವಿದ್ಯುತ್ ಸಂಪರ್ಕ ಇರಬೇಕು. ಎಸ್ ಬಿ ಐ ಎಟಿಮ್ ಫ್ರಾಂಚೈಸಿ ಆಗಲು ಮುಂಚಿತವಾಗಿ ಬ್ಯಾಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ವೀಸಾ ಟೆಸ್ಟ್ ಸ್ಥಾಪಿಸಲು ಸೊಸೈಟಿ ಅಥವಾ ಸಂಬಂಧ ಪಟ್ಟ ಅಧಿಕಾರಿಗಳಿಂದ ನಿರಾಪೇಕ್ಷಣ ಪ್ರಮಾಣ ಪತ್ರ ಪಡೆಯಬೇಕು.
ಎಸ್ ಬಿ ಐ ಎ ಟಿ ಎಮ್ ಫ್ರಾಂಚೈಸಿ ಆಗಲು ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು ಈ ಕೆಳಕಂಡಂತೆ ಇವೆ:
ಎಸ್ ಬಿ ಐ ಎಟಿಎಮ್ ಫ್ರಾಂಚೈಸಿ ಆಗ ಬಯಸುವ ವ್ಯಕ್ತಿಯ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಪಾಸ್ ಪುಸ್ತಕ ಅಥವಾ ರದ್ದು ಪಡಿಸಿದ ಚೆಕ್, ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಫೋಟೋ , ರೇಷನ್ ಕಾರ್ಡ್, ವಿದ್ಯುತ್ ಬಿಲ್, ಇ-ಮೇಲ್ ಐಡಿ, ಫೋನ್ ನಂಬರ್, ಜಿ ಎಸ್ ಟಿ ನಂಬರ್, ಕಂಪನಿಗೆ ಅಗತ್ಯವಿರುವ ಹಣಕಾಸಿನ ದಾಖಲೆಗಳು ಜಾಗಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳು.
ಹೆಚ್ಚಿನ ವಿವರಗಳಿಗೆ ಎಸ್ ಬಿ ಐ ವೆಬ್ ಸೈಟ್ ಅನ್ನು ವೀಕ್ಷಿಸಿ.