ಸಾಮಾನ್ಯವಾಗಿ ಯುವ ಜನತೆಗಿಂತ ಹಿರಿಯ ನಾಗರಿಕರಲ್ಲಿ ದೇವರ ಮೇಲೆ ಭಕ್ತಿ ಹಾಗೂ ನಂಬಿಕೆ ಹೆಚ್ಚಾಗಿರುತ್ತದೆ,ಮ. ದೇವಸ್ಥಾನಕ್ಕೆ ಹೋಗುವವರು, ದೇವರ ಕಾರ್ಯಗಳಲ್ಲಿ ತೊಡಗಿ ಕೊಳ್ಳುವವರು, ಅಥವಾ ದೇವಸ್ಥಾನಗಳ ವಿಶೇಷ ಪೂಜೆಗಳಲ್ಲಿ ಭಾಗವಹಿಸುವವರಲ್ಲಿ ಹಿರಿಯ ನಾಗರಿಕರದ್ದೇ ಮೇಲುಗೈ. ಸುದೀರ್ಘ ಜೀವನವನ್ನು ಕಳೆದ ಹಿರಿಯ ನಾಗರಿಕರು ತಮ್ಮ ಸಂಧ್ಯಾ ಕಾಲದಲ್ಲಿ ಈ ರೀತಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟು ದೇವರಿಗೆ ಹತ್ತಿರವಾಗಿರಲು ಬಯಸುತ್ತಾರೆ.
ಜೀವನ ಪೂರ್ತಿ ನಾನಾ ಜಂಜಾಟಗಳಲ್ಲಿ ಸಿಲುಕಿ ಕೊಂಡಿದ್ದ ಇವರು ತಮ್ಮ ರಿಟೈರ್ಡ್ ಲೈಫ್ ಅನ್ನು ಇದೇ ರೀತಿ ಕಳೆಯಬೇಕು ಎನ್ನುವ ಪ್ಲಾನ್ ಕೂಡ ಮಾಡಿರುತ್ತಾರೆ. ಆದರೆ ಇತ್ತೀಚೆಗೆ ದೇವಸ್ಥಾನಗಳಲ್ಲಿ ಆಗುತ್ತಿರುವ ಜನಸಂದಣಿ ಇವರನ್ನು ಹೈರನ್ನಾಗಿಸಿ ಬಿಡುತ್ತಿದೆ. ಅದರಲ್ಲೂ ವಿಶೇಷ ದಿನಗಳ ಇದ್ದ ಸಂದರ್ಭದಲ್ಲಂತೂ ದೇವಸ್ಥಾನದಲ್ಲಿ ಅಪಾರ ಜನಸಂಖ್ಯೆ ತುಂಬಿರುತ್ತದೆ.
ಅಂತಹ ಸಮಯದಲ್ಲಿ ಹಿರಿಯ ನಾಯಕರಿಕರು ಎಲ್ಲರ ಸಮಕ್ಕೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುವಷ್ಟರಲ್ಲಿ ಸುಸ್ತಾಗಿ ಬಿಡುತ್ತಾರೆ. ಹಾಗಾಗಿ ಇದನ್ನೆಲ್ಲ ಹತ್ತಿರದಿಂದ ಕಂಡಿದ್ದ ಅರ್ಚಕರ ಸಮಿತಿಯು ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಒಂದು ಸೂಕ್ತ ವ್ಯವಸ್ಥೆ ಕಲ್ಪಿಸ ಬೇಕು ಎಂದು ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿತ್ತು.
ಅದನ್ನು ಪರಿಶೀಲಿಸಿದ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳಿಗೂ ಅನ್ವಯವಾಗುವಂತೆ ಹೊಸ ನಿಯಮವನ್ನು ತಂದಿದ್ದಾರೆ. ಹಿರಿಯ ನಾಗರಿಕರಿಗೆ ದರ್ಶನಕ್ಕೆ ಮೊದಲ ಆದ್ಯತೆ ನೀಡುವ ಅಥವಾ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಿಕೊಡುವ ನಿರ್ಧಾರಕ್ಕೆ ಬಂದಿದೆ.
ಈ ಬಗ್ಗೆ ಇಲಾಖೆಯ ಮುಖ್ಯಸ್ಥರು ಮಾತನಾಡಿ ಇತ್ತೀಚೆಗೆ ಧಾರ್ಮಿಕ ಕ್ಷೇತ್ರಗಳ ಭೇಟಿ ಕೊಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಹಿರಿಯ ನಾಗರಿಕರು ಇದ್ದಾರೆ. ಇವರಿಗೆ ಸರ್ಕಾರದಿಂದ ಹೊಸ ರೀತಿ ವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅದರ ಪ್ರಕಾರ ಇನ್ನು ಮುಂದೆ 65 ವರ್ಷಕ್ಕಿಂತ ವಯಸ್ಸಿನ ಮೇಲ್ಪಟ್ಟ ಹಿರಿಯ ನಾಗರಿಕರು ಅವರ ಆಧಾರ್ ಕಾರ್ಡ್ ಅಥವಾ ಇತರೆ ವಯಸ್ಸಿನ ದೃಢೀಕರಣ ಪತ್ರ ತೋರಿಸಿದರೆ ಅವರು ಸರತಿ ಸಾಲಿನಲ್ಲಿ ನಿಲ್ಲದೆ ದೇವರ ದರ್ಶನವನ್ನು ಪಡೆಯಬಹುದು.
ಅಥವಾ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗಿದ್ದರೆ ಅವರಿಗಾಗಿಯೇ ಪ್ರತ್ಯೇಕ ಸರತಿಸಾಲಿನ ವ್ಯವಸ್ಥೆಯನ್ನು ಮಾಡಲು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಹೊಡಪಡುವ ದೇವಸ್ಥಾನದ ಆಡಳಿತ ಮಂಡಳಿಗಳಿಗೆ ಆದೇಶ ಹೊರಡಿಸಿದ್ದೇವೆ ಎಂದು ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. ಇದರ ಜೊತೆಗೆ ಪ್ರತಿಯೊಂದು ಹಿಂದೂ ಧಾರ್ಮಿಕ ದೇವಸ್ಥಾನದಲ್ಲೂ ಕೂಡ ಹಿರಿಯ ನಾಗರಿಕರಿಗಾಗಿ ಒಂದು ಸಹಾಯವಾಣಿಯನ್ನು ನಿರ್ಮಿಸಿ ಅವರಿಗೆ ನೆರವಾಗಲು ಚಿಂತನೆ ನಡೆಸುತ್ತಿದ್ದೇವೆ ಆ ಯೋಜನೆ ಕೂಡ ಪ್ರಗತಿಯಲ್ಲಿದೆ ಎನ್ನುವುದನ್ನು ಸಹ ಮುಖ್ಯಸ್ಥರು ತಿಳಿಸಿದ್ದಾರೆ.
ಇದರಿಂದ ಇನ್ನು ಮುಂದೆ ಹಿರಿಯ ನಾಗರಿಕರು ಹಿಂದೂ ಧಾರ್ಮಿಕ ದೇವಾಲಯಗಳಿಗೆ ಭೇಟಿ ಕೊಡುವಾಗ ಸೂಕ್ತ ದಾಖಲೆಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಸರ್ಕಾರದ ಈ ನಿರ್ಧಾರದಿಂದ ಹಿರಿಯ ನಾಗರಿಕರಿಗೆ ಬಹಳ ಅನುಕೂಲವಾಗಿದೆ, ಜನಸಂದಣಿ ನೂಕು ನುಗ್ಗಲಿನಲ್ಲಿ ಹಿರಿಯ ನಾಗರಿಕರಿಗೆ ಹಾನಿಯಾಗುವುದು ತಪ್ಪುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ಎಲ್ಲಾ ಹಿರಿಯ ನಾಗರಿಕರಿಗೂ ತಲುಪಿಸುವ ಉದ್ದೇಶದಿಂದ ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆಗೆ ಈ ಮಾಹಿತಿಯನ್ನು ತಪ್ಪದೆ ಹಂಚಿಕೊಳ್ಳಿ.