ರೈತರಿಗೆ ಗುಡ್ ನ್ಯೂಸ್ ಇನ್ಮುಂದೆ ಹಗಲಿನಲ್ಲಿ ವಿದ್ಯುತ್ ನೀಡಲು ಹೊಸ ಯೋಜನೆ ಜಾರಿ.!

 

WhatsApp Group Join Now
Telegram Group Join Now

ಕಳೆದ ತಿಂಗಳಷ್ಟೇ ರಾಜ್ಯ ಸರ್ಕಾರವು ಅಕ್ರಮವಾಗಿ ತಮ್ಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆದಿರುವ ರೈತರಿಗೆ ಅದನ್ನು ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡಿತ್ತು ಮತ್ತು ಅದಕ್ಕಾಗಿ ಅರ್ಜಿ ಕೂಡ ಅಹ್ವಾನ ಮಾಡಿತ್ತು. ಅದರ ಅನುಷ್ಠಾನಕ್ಕೆ ತರುವ ಸಲುವಾಗಿ ಚರ್ಚಿಸಲು ಆಯೋಜಿಸಿದ್ದ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ/

ಈ ಹಿಂದೆ ಅನಧಿಕೃತ ನೀರಾವರಿ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸುವ ಇದ್ದ ಪದ್ಧತಿಯನ್ನು ಕೂಡಲೇ ಬದಲಿಸಿ ಹೊಸದಾಗಿ ಪದ್ಧತಿಯನ್ನು ಜಾರಿಗೆ ತರಲು ಸಚಿವ ಸಂಪುಟವು ತೀರ್ಮಾನಿಸಿದೆ. ಇಂಧನ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಹಿ ಹೊಂದಿರುವ ಪ್ರಕಟಣೆಯೊಂದು ಇಲಾಖೆಯಿಂದ ಬಿಡುಗಡೆಗೊಂಡಿದ್ದು ಅದರಲ್ಲಿ ಈ ಕುರಿತು ಏನೆಲ್ಲಾ ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ ಎನ್ನುವುದರ ಕುರಿತು ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸಿದ್ದೇವೆ.

ಗೃಹಲಕ್ಷ್ಮಿ ಯೋಜನೆ 2000 ಹಣ ಬರದೇ ಇದ್ದವರು, 1ನೇ ಹಾಗೂ 2ನೇ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಜೆರಾಕ್ಸ್ ಸಲ್ಲಿಸಬೇಕು, ಹೊಸ ರೂಲ್ಸ್.!

ರಾಜ್ಯದಲ್ಲಿ ನೀರಾವರಿ ಪಂಪ್ಸೆಟ್ ಗಳನ್ನು ವಿದ್ಯುತ್ ಜಾಲಕ್ಕೆ ವ್ಯವಸ್ಥಿತವಾಗಿ ಸೇರ್ಪಡೆಗೊಳಿಸಲು ಮತ್ತು ಸೌರ ವಿದ್ಯುತ್ತನ್ನು ಸಮರ್ಪಕವಾಗಿ ಬಳಸಲು stand-alone, off grid ಸೋಲಾರ್ ಪಂಪ್ಸೆಟ್‌ಗಳನ್ನು ಹಾಗೂ ip set ಫೀಡರ್ ಸೌರೀಕರಣವನ್ನು ಅನುಷ್ಠಾನಗೊಳಿಸಿ ರೈತರ ಪಂಪ್ಸೆಟ್ ಗಳಿಗೆ ಹಗಲಿನ ವೇಳೆ ವಿದ್ಯುತ್ ಸೌಕರ್ಯ ಕಲ್ಪಿಸಲು ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಅನುಮೋದಿಸಿದೆ‌ ಮತ್ತು ನೀರಾವರಿ ಪಂಪ್ಸೆಟ್ ಬಗ್ಗೆ ಈ ಹಿಂದೆ ಹೊರಡಿಸಿದ್ದ ಎಲ್ಲಾ ಆದೇಶ ಹಾಗೂ ಸುತ್ತೋಲೆಗಳನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದೆ.

● ವಿದ್ಯುತ್ ಸರರ್ಬರಾಜು ಕಂಪನಿಗಳು 2015 ರಿಂದ ಈಚೆಗೆ IP ಸೆಟ್ ಗಳನ್ನು ಸಕ್ರಮಗೊಳಿಸಿ ಮೂಲಸೌಕರ್ಯ ರಚಿಸಲು ಕೈಗೊಂಡಿರುವ ಕ್ರಮಕ್ಕಾಗಿ ಘಟಕೋತ್ತರ ಅನುಮೋದನೆ ನೀಡಿದೆ.
● ವಿದ್ಯುತ್ ಸರಬರಾಜು ಕಂಪನಿಗಳು 2015ರಿಂದ ಈಚೆಗೆ ಬಂಡವಾಳ ವೆಚ್ಚದಲ್ಲಿ ಸಕ್ರಮಕೊಂಡ/ಸಾಮಾನ್ಯ IP ಸೆಟ್ ಗಳಿಗೆ ವಿದ್ಯುತ್ ಮೂಲಸೌಕರ್ಯ ಕಲ್ಪಿಸುವುದಕ್ಕೆ ಘಟನೋತ್ತರ ಅನುಮೋದನೆ ನೀಡಿದೆ.

ಆಹಾರ ಇಲಾಖೆಯಿಂದ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!

● ವಿದ್ಯುತ್ ಸರಬರಾಜು ಕಂಪನಿಗಳು ಸಕ್ರಮಗೊಳಿಸಿದ ಕೃಷಿ ಪಂಪ್ಸೆಟ್ ಗಳಿಗೆ 2022-23 ಮತ್ತು 2023-24 ರಲ್ಲಿ ಟೆಂಡರ್ ಮೂಲಕ ಮೂಲಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಟೆಂಡರ್ ಕರೆಯಲಾದ ಅಂದಾಜುಪಟ್ಟಿಯನ್ನು ಪುನರ್ ಪರಿಶೀಲಿಸಿ ಪಂಪ್ ಸೆಟ್ ಗಳು ಹಾಲಿ ಇರುವ ವಿದ್ಯುತ್ ಮೀಟರ್ ಇಂದ 500 ಮೀಟರ್ ಆಚೆ ಇದ್ದಲ್ಲಿ stand-alone/off-grid solar pump ಅಳವಡಿಸಲು ಸೂಚಿಸಿದೆ. ಸೌರ ಪಂಪ್ ಸೆಟ್ ಉತ್ತೇಜಿಸಲು ಕೇಂದ್ರ ಸರಕಾರದಿಂದ 30%ರಷ್ಟು ಸಹಾಯಧನ ಇದೆ ಅದಲ್ಲದೆ ರಾಜ್ಯ ಸರ್ಕಾರದಲ್ಲಿ ಸಿಗುತ್ತಿದ್ದ 30%ರಷ್ಟು ಸಹಾಯಧನವನ್ನು 50ಕ್ಕೆ ಏರಿಸಿ ಅನುಮೋದಿಸಿದೆ.

● ರೈತರು ಈಗಾಗಲೇ ವಿದ್ಯುತ್ ಸಂಪರ್ಕಕ್ಕಾಗಿ ಮೊತ್ತವನ್ನು ಪಾವತಿಸಿದ್ದರೆ ಪಾವತಿಸಿದ ಮೊತ್ತವನ್ನು ರೈತರ ವಂತಿಕೆ ಎಂದು ಪರಿಗಣಿಸಿ ಪಂಪ್ಸೆಟ್ ಅಳವಡಿಸುವುದು.
● 20.09.2023 ರ ಒಳಗೆ ನೋಂದಾಯಿಸಲ್ಪಟ್ಟ IP Set ಸಂಖ್ಯೆಗಳನ್ನು ಕೂಡಲೇ ದೃಢಪಡಿಸಿಕೊಂಡು ಟೆಂಡರ್ ಕರೆಯಲೇಬೇಕಾದ ಕಾಮಗಾರಿಗಳನ್ನು ನಿಯಮಾನುಸಾರ ಕ್ರಮವಹಿಸಲು ಅನುಮೋದನೆ.

ಗ್ಯಾಸ್ ಏಜೆನ್ಸಿ ತೆಗೆದುಕೊಳ್ಳುವುದು ಹೇಗೆ.? ಬಂಡವಾಳ ಎಷ್ಟು ಬೇಕು, ಲಾಭ ಎಷ್ಟು ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.! ತಿಂಗಳಿಗೆ ಲಕ್ಷ ಲಾಭ ಬರುವ ಬಿಸಿನೆಸ್ ಇದು.!

● stand-alone / off-grid solar ಪಂಪ್ ಸೆಟ್ ಸೌಲಭ್ಯವನ್ನು ಸ್ಥಳೀಯ ಅವಶ್ಯಕತೆಯಂತೆ ಗುರುತು ಮಾಡಿ 10 HP ಸಾಮರ್ಥ್ಯಕ್ಕೆ ಮಿತಿಗೊಳಿಸುವುದು, ಅದಾಗ್ಯೂ MNRE ಷರತ್ತುಗಳ ಪ್ರಕಾರ 7.5HP ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಟಿ ಅಥವಾ ಅನುಮೋದನೆಯು ಸೀಮಿತವಾಗಿರುತ್ತದೆ ಎಂದು ಆದೇಶ.
● stand-alone / off-grid solar
ಅಳವಡಿಸಿಕೊಂಡ ನಂತರ ಅಂತಹ ಪಂಪ್ ಸೆಟ್‌ಗಳನ್ನು GRID POWER ಜಾಲದ ಸಂಪರ್ಕದಿಂದ ಕಡಿತಗೊಳಿಸಲು ಎಲ್ಲಾ ESCOM ಗಳು ಕ್ರಮವಹಿಸುವುದು.

● ಇಲಾಖೆಯಿಂದ ಇಲಾಖೆಗೆ ಶುಲ್ಕರಹಿತ ವರ್ಗಾವಣೆ ಆಧಾರದ ಮೇಲೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಪಡೆಯುವ ಮೂಲಕ ಸಬ್ ಸ್ಟೇಷನ್ ಬಳಿ RESCO ಮಾದರಡಿಯಲ್ಲಿ KUSUM-C ಪ್ರಕಾರಫೀಡರ್ ಸೌರೀಕರಣ ಅನುಷ್ಠಾನಗೊಳಿಸುವುದು.

ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000, 3 ತಿಂಗಳಿಗೆ 60,000, ವರ್ಷಕ್ಕೆ 2,40,000 ಹಣ ಪಡೆಯಬಹುದು.! ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

● KERC ನೀಡಿರುವ ಕಾಲಮಿತಿಯೊಳಗೆ ಎಲ್ಲಾ IP ಸೆಟ್ ಗಳನ್ನು ಎಣಿಕೆ ಮಾಡಿ ಅವುಗಳನ್ನು ಆಯಾ ರೈತರ ಆಧಾರ್ ಸಂಖ್ಯೆಗಳಿಗೆ ಲಿಂಕ್ ಮಾಡಲು ESCOM ಗಳು ಅಗತ್ಯ ಕ್ರಮ ಕೈಗೊಂಡು ಪೂರ್ತಿಗೊಳಿಸುವುದು.
● 29.09.2023 ರ ನಂತರ ನೋಂದಾಯಿಸಲ್ಪಡುವ IP ಸೆಟ್ ಗಳಿಗೆ ಮೂಲ ಸೌಕರ್ಯವನ್ನು ರೈತರು ಸ್ವಯಂ ಕಾರ್ಯನಿರ್ವಹಣೆಯಲ್ಲಿ ರಚಿಸಿಕೊಳ್ಳತಕ್ಕದ್ದು ಎಂದು ಅನುಮೋದನೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now