ರಾಜ್ಯದ ಯುವ ಜನತೆಗೆ ಸರ್ಕಾರದ ವತಿಯಿಂದ ಸಿಹಿ ವಿಚಾರವಿದೆ. ಅದೇನೆಂದರೆ, ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ನಿಗಮಗಳು ಇವೆ. ಈ ನಿಗಮಗಳಿಗೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆಯಾಗುತ್ತದೆ. ಆ ಹಣವನ್ನು ನಿಗಮವು ಕಲ್ಯಾಣ ಯೋಜನೆಗಳನ್ನು ರೂಪಿಸಿ ಅರ್ಹರಿಗೆಸಾಲರೂಪದಲ್ಲಿ ಅಥವಾ ಸಬ್ಸಿಡಿ ರೂಪದಲ್ಲಿ ನೀಡುತ್ತದೆ ಈ ಮೂಲಕ ಎಲ್ಲಾ ವರ್ಗದವರ ಅಭಿವೃದ್ಧಿ ಬಯಸುವುದೇ ಸರ್ಕಾರದ ಉದ್ದೇಶವಾಗಿದೆ.
ಅಂತೆಯೇ 2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಹಲವು ನಿಗಮಗಳಲ್ಲಿ ವಿವಿಧ ಯೋಜನೆಯಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ ಯಾವ ಯಾವ ನಿಗಮದಡಿ ಈ ಸೌಲಭ್ಯ ಸಿಗುತ್ತದೆ ಮತ್ತು ಯಾವ ಯೋಜನೆಗಳಿಗೆ ಅರ್ಜಿ ಹಾಕಬಹುದು ಮತ್ತು ಬೇಕಾಗುವ ದಾಖಲೆಗಳೇನು ಎನ್ನುವುದರ ಬಗ್ಗೆ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಗೃಹಲಕ್ಷ್ಮೀ ಯೋಜನೆ 2ನೇ ಕಂತಿನ ಹಣ ಯಾವಾಗ ಬಿಡುಗಡೆ.? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಿಖರ ಮಾಹಿತಿ.!
ನಿಗಮಗಳು:-
● ವೀರಶೈವ ಲಿಂಗಾಯತ ನಿಗಮ
● ಅಂಬಿಗ ಚೌಡಯ್ಯ ನಿಗಮ
● ಡಿ.ದೇವರಾಜು ಅರಸು ನಿಗಮ
● ಒಕ್ಕಲಿಗ ಅಭಿವೃದ್ಧಿ ನಿಗಮ
● ಮಡಿವಾಳ ಮಾಚಿದೇವ ನಿಗಮ
● ಸವಿತಾ ಸಮಾಜ ನಿಗಮ
● ಮರಾಠ ನಿಗಮ
● ವಿಶ್ವಕರ್ಮ ಸಮುದಾಯ ನಿಗಮ
● ಉಪ್ಪಾರ ಅಭಿವೃದ್ಧಿ ನಿಗಮ
● ಕರ್ನಾಟಕ ಅಲೆಮಾರಿ ನಿಗಮ
ಯೋಜನೆಗಳು:-
● ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
● ಗಂಗಾ ಕಲ್ಯಾಣ ಯೋಜನೆ
● ಸ್ವಾವಲಂಬಿ ಸಾರಥಿ ಯೋಜನೆ
● ಜೀವ ಜಲ ಯೋಜನೆ
● ಕಾಯಕ ಕಿರಣ ಯೋಜನೆ
● ವಿದೇಶ ವಿದ್ಯಾವಿಕಾಸ ಯೋಜನೆ
● ಭೋಜನಾಲಯ ಕೇಂದ್ರ ಯೋಜನೆ
● ವಿಭೂತಿ ನಿರ್ಮಾಣ ಘಟಕ ಯೋಜನೆ
● ಚೈತನ್ಯ ಸಬ್ಸಿಡಿ ಮತ್ತು ಸಾಫ್ಟ್ ಸಾಲ ಯೋಜನೆ
● ಚೈತನ್ಯ ನೇರ ಸಾಲ ಯೋಜನೆ
● ಮೈಕ್ರೋ ಕ್ರೆಡಿಟ್ ಸಾಲ ಯೋಜನೆ
● ಅರಿವು ಶಿಕ್ಷಣ ಸಾಲ ಯೋಜನೆ
● ಇನ್ನಿತರ ಆಯಾ ಸಮುದಾಯಕ್ಕೆ ಸಂಬಂಧಪಟ್ಟ ಹಲವು ಕಲ್ಯಾಣ ಯೋಜನೆಗಳು.
ಲೀಸ್ (ಬೋಗ್ಯಕ್ಕೆ) ತೆಗೆದುಕೊಂಡಿರುವ ಮನೆ ಅಂಗಡಿ ಅಥಾವ ಜಮೀನಿನ ಮೇಲೆ ಲೋನ್ ( ಸಾಲ ) ಪಡೆಯಬಹುದಾ.? ಹೊಸ ರೂಲ್ಸ್.!
ಯೋಜನೆ ಪ್ರಯೋಜನ ಪಡೆಯಲು ಅರ್ಹತೆಗಳು:-
● ಅರ್ಜಿ ಸಲ್ಲಿಸುವವರು 18 ವರ್ಷದ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು
● ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು
● ಕುಟುಂಬದ ಆದಾಯವು ಗರಿಷ್ಠ 3.5 ಲಕ್ಷವನ್ನು ಮೀರಿರಬಾರದು
● ಕುಟುಂಬದ ಯಾವ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗದಲ್ಲಿರಬಾರದು.
● ಕುಟುಂಬದ ಯಾವ ಸದಸ್ಯರು ಕಳೆದ ಐದು ವರ್ಷಗಳಿಂದ ಸರ್ಕಾರದ ಇತರೆ ಯಾವುದೇ ಇಲಾಖೆ ಅಥವಾ ನಿಗಮಗಳಿಂದ ಯಾವುದೇ ಯೋಜನೆ ಫಲಾನುಭವಿಗಳಾಗಿರಬಾರದು.
ಬೇಕಾಗುವ ದಾಖಲೆಗಳು:-
● ಸಕ್ಷಮ ಪ್ರಾಧಿಕಾರದಿಂದ ನೀಡಲಾಗುವ ಜಾತಿ ಪ್ರಮಾಣ
● ಸಕ್ರಮ ಪ್ರಾಧಿಕಾರದಿಂದ ನೀಡಲಾಗುವ ಆದಾಯ ಪ್ರಮಾಣ ಪತ್ರ
● ನಿವಾಸ ದೃಢೀಕರಣ ಪತ್ರ
● ಆಧಾರ್ ಕಾರ್ಡ್
● ಬ್ಯಾಂಕ್ ಪಾಸ್ ಬುಕ್ ವಿವರ
● ಸ್ವಯಂ ಘೋಷಣಾ ಪತ್ರ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
● ಮುಖ್ಯವಾಗಿ ಯೋಜನೆಯ ಬಗ್ಗೆ ವಿಸ್ತೃತ ವರದಿ
ಪ್ರಯೋಜನ:-
ಈ ಮೇಲೆ ತಿಳಿಸಿದ ಯೋಜನೆಗಳಿಗೆ ಯೋಜನವಾರು ಸಬ್ಸಿಡಿ ರೂಪದ ಸಾಲ ಮತ್ತು ಅಥವಾ ಬಡ್ಡಿದರದ ಸಾಲ ನೀಡಲಾಗುತ್ತದೆ.
ರೈತರಿಗೆ ಗುಡ್ ನ್ಯೂಸ್ ಇನ್ಮುಂದೆ ಹಗಲಿನಲ್ಲಿ ವಿದ್ಯುತ್ ನೀಡಲು ಹೊಸ ಯೋಜನೆ ಜಾರಿ.!
ಅರ್ಜಿ ಸಲ್ಲಿಸುವ ವಿಧಾನ:-
● ಈ ಯೋಜನೆಗಳ ಪ್ರಯೋಜನ ಕೊಡಲು ಅರ್ಹರಿರುವವರು ಮೊದಲಿಗೆ ಕೇಳಲಾದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು
● ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
● ಆಯಾ ನಿಗಮಗಳ ವೆಬ್ಸೈಟ್ ಗಳಿಗೆ ತೆರಳಿ ಅರ್ಜಿ ಸಲ್ಲಿಸುವ ಲಿಂಕ್ ಮಾಡಿ ವಿವರಗಳನ್ನು ತುಂಬಿಸಿ ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಬಹುದು.
● ಉನ್ನತ ಅಧಿಕಾರಿಗಳು ನಿಮ್ಮ ಅರ್ಜಿ ಪರಿಶೀಲನೆ ನಡೆಸಿ ನೀವು ಅರ್ಹರಿದ್ದರೆ ಅನುದಾನವನ್ನು ನಿಮ್ಮ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾಯಿಸುತ್ತಾರೆ.