ನಮ್ಮ ದೇಶವು ಕೃಷಿ (Agriculture Nation) ಪ್ರಧಾನ ದೇಶ. ಅಲ್ಲದೆ ನಮ್ಮ ದೇಶದಲ್ಲಿ ಹಳ್ಳಿಗಳೇ ಹೆಚ್ಚಾಗಿರುವುದರಿಂದ ಹಳ್ಳಿಗಳಲ್ಲಿ ಕೃಷಿಯನ್ನೇ ಅವಲಂಬಿಸಿ ಜನರು ಜೀವನ ಸಾಗಿಸುತ್ತಾರೆ. ಆದರೆ ಹಳ್ಳಿಯಲ್ಲಿರುವ ಎಲ್ಲಾ ಜನರು ಕೂಡ ಕೃಷಿ ಭೂಮಿಯನ್ನು ಹೊಂದಿರುವುದಿಲ್ಲ. ನಮ್ಮ ದೇಶದಲ್ಲಿ ಇನ್ನು ಕೋಟ್ಯಾಂತರ ಕುಟುಂಬಗಳು ಕೃಷಿ ಕಾರ್ಮಿಕರಾಗಿ (agricultural workers) ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದಾರೆ.
ಆದರೆ ಕೃಷಿ ಚಟುವಟಿಕೆಯಲ್ಲಿ ವರ್ಷಪೂರ್ತಿ ಕೆಲಸ ಸಿಗುವುದು ಕಷ್ಟ ಸಾಧ್ಯ ಹಾಗೂ ಸ್ವಂತ ಜಮೀನು ಇಲ್ಲದಿದ್ದರೆ ಕೃಷಿ ಕಾರ್ಮಿಕರಾಗಿಯೇ ಪೂರ್ತಿ ಜೀವನ ಸಾಗಿಸುವುದು ಈಗಿನ ಖರ್ಚುಗಳಲ್ಲಿ ಬಹಳ ಸಮಸ್ಯೆ. ಇದೇ ಕಾರಣಕ್ಕೆ ಕುಟುಂಬ ದೊಡ್ಡದಾಗುತ್ತಿದ್ದಂತೆ ಕುಟುಂಬ ಸಮೇತರಾಗಿ ಕೃಷಿ ಭೂಮಿ ರಹಿತ ಕುಟುಂಬಗಳು ಹಳ್ಳಿಗಳಿಂದ ನಗರಗಳತ್ತ ಕೆಲಸ ಅರಸಿ ವಲಸೆ (immigration) ಹೋಗುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ರೈತರಿಗೆ ಮತ್ತೊಂದು ಭಾಗ್ಯ.! ಔಷಧಿ ಸಿಂಪಡಣೆಗೆ ಡ್ರೋನ್ ವಿತರಣೆ ಆಸಕ್ತ ರೈತರು ಅರ್ಜಿ ಸಲ್ಲಿಸಿ.!
ಮೂಲಗಳ ಮಾಹಿತಿ ಪ್ರಕಾರ ಈ ರೀತಿ ನಗರಗಳತ್ತ ವಲಸೆ ಹೋಗುವ ಕುಟುಂಬಗಳಲ್ಲಿ ಹಿಂದುಳಿದ ವರ್ಗಕ್ಕೆ (Backward classes) ಸೇರಿದವರು ಹಾಗೂ ಅಲ್ಪಸಂಖ್ಯಾತರ ವರ್ಗಕ್ಕೆ (Minorities) ಸೇರಿದ ಕುಟುಂಬಗಳು ಹೆಚ್ಚಾಗಿ ಇದೆ. ಸಂವಿಧಾನ ಶಿಲ್ಪಿಯಾದ ಡಾ. ಬಿಆರ್ ಅಂಬೇಡ್ಕರ್ (B.R Ambedkar) ಅವರು ಈ ರೀತಿ ಹಿಂದುಳಿದ ವರ್ಗದ ಕುಟುಂಬಗಳು ಹಾಗೂ ಅಲ್ಪಸಂಖ್ಯಾತರ ವರ್ಗದ ಕುಟುಂಬಗಳು ಹಳ್ಳಿಗಳಿಂದ ಪಟ್ಟಣಗಳಿಗೆ ವಲಸೆ ಹೋಗಬಾರದು ಅವರು ಹಳ್ಳಿಯಲ್ಲಿ ನೆಮ್ಮದಿಯಾಗಿ ಜೀವನ ಕಳೆಯವಂತೆ ಆಗಬೇಕು ಎಂದು ಕನಸು ಕಂಡಿದ್ದರು.
ಆದರೆ ಈ ರೀತಿ ಹಳ್ಳಿಗಳಲ್ಲಿ ನೆಮ್ಮದಿಯಾಗಿ ಜೀವನ ನಡೆಸಬೇಕು ಎಂದರೆ 5 ಜನ ಸದಸ್ಯರು ಇರುವ ಒಂದು ಕುಟುಂಬಕ್ಕೆ ಕನ್ವಿಷ್ಟ 1.67 ಕೃಷಿಭೂಮಿ ಇರಬೇಕು ಎಂದು ಕೇಂದ್ರ ಸರ್ಕಾರದ ನಿಯಮ ಹೇಳುತ್ತದೆ. ಇದನ್ನು ಪರಿಗಣನೆಗೆ ತೆಗೆದುಕೊಂಡಿರುವ ಕರ್ನಾಟಕ ರಾಜ್ಯ ಸರ್ಕಾರವು ಈಗ ಈ ಹಾದಿಯಲ್ಲಿ ಸಹಕಾರ ಕೃಷಿ ಯೋಜನೆ (Co operative farming Scheme) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ.
ಸಹಕಾರ ಕೃಷಿ ಯೋಜನೆ ಮೂಲಕ ಹಳ್ಳಿಗಾಡಿನಲ್ಲಿರುವ ಜಮೀನು ರಹಿತ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗಕ್ಕೆ ಸರ್ಕಾರದ ವತಿಯಿಂದ ಜಮೀನು (Land sanction) ನೀಡುವ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿಯನ್ನು ಮಾನ್ಯ ಸಹಕಾರ ಸಚಿವರಾದ ಕೆ.ಸಿ ಮಹದೇವಪ್ಪ (Co-Operative Minister K C Mahadevappa) ಅವರು ತಿಳಿಸಿದ್ದಾರೆ.
ಈ ಯೋಜನೆಯ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ, ಇದಕ್ಕೆ ಸಂಬಂಧಿಸಿದ ಹಾಗೆ ವಿವರಗಳನ್ನು ತರಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ (DC) ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಸಲ್ಲಿಸುವ ವರದಿಯ ಪ್ರಕಾರ ಎಷ್ಟು ಕುಟುಂಬಗಳು ಇವೆ ಎನ್ನುವುದನ್ನು ಗುರುತಿಸಿ ಸರ್ಕಾರಿ ಭೂಮಿ ಎಷ್ಟು ಲಭ್ಯವಿದೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ಕೃಷಿ ಭೂಮಿಯಾಗಿ ರೈತರಿಗೆ ಹಂಚುವ ಪ್ರಯತ್ನ ಮಾಡಲಾಗುತ್ತದೆ.
ಒಂದು ವೇಳೆ ಸರ್ಕಾರಿ ಭೂಮಿ ಇಲ್ಲದಂತಹ ಜಾಗಗಳಿದ್ದರೆ 50 ಎಕರೆ ಕೃಷಿ ಭೂಮಿ ಖರೀದಿ ಮಾಡಿ ಇಂತಹ ಕುಟುಂಬಗಳಿಗೆ ಹಂಚಲಾಗುವುದು, ಸಹಕಾರ ಕೃಷಿ ಯೋಜನೆಗಾಗಿ ಗುಂಪುಗಳನ್ನು ರಚಿಸಿ, ಸಹಕಾರ ಸಂಘದ ಸ್ವರೂಪ ನೀಡಲಾಗುವುದು. ಮೊದಲಿಗೆ ಮೈಸೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ನಂತರ, ಉಳಿದ ಜಿಲ್ಲೆಗಳಿಗೂ ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ತಿಳಿಸಿದ್ದಾರೆ. ರೈತರಿಗೆ ಅನುಕೂಲ ಆಗುವ ಯೋಜನೆ ಬಗ್ಗೆ ಎಲ್ಲ ರೈತರಿಗೂ ತಿಳಿಸುವ ಸಲುವಾಗಿ ಈ ಮಾಹಿತಿಯನ್ನು ನಿಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಶೇರ್ ಮಾಡಿ.