Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Karnata government Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi) ಆದೇಶ ಹೊರಬಿದ್ದ ದಿನದಿಂದಲೂ ಕೂಡ ಅರ್ಜಿ ಸ್ವೀಕಾರ ಮಾಡುವ ದಿನಾಂಕ, ಯೋಜನೆ ಲಾಂಚ್ ಆಗುವ ಕಾರ್ಯಕ್ರಮದ ದಿನಾಂಕವನ್ನು ಸಾಕಷ್ಟು ಸಲ ಮುಂದೂಡಲಾಗಿದೆ.
ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ಸಹಾಯಧನ ನೀಡುವಂತಹ ಸರ್ಕಾರದ ಮಹತ್ವಾಕಾಂಕ್ಷೆದು ಯೋಜನೆ ಇದಾಗಿದ್ದು ಮೊದಲಿಗೆ ಸ್ವತಂತ್ರ ದಿನಾಚರಣೆ ಪ್ರಯುಕ್ತ ಆಗಸ್ಟ್ 15ನೇ ತಾರೀಕು ಯೋಜನೆ ಲಾಂಚ್ (launch) ಆಗುತ್ತದೆ ಎಂದು ತಿಳಿಸಲಿತ್ತಾದರೂ ಈಗ ಅಂತಿಮವಾಗಿ ಆಗಸ್ಟ್ 27ರಂದು ಯೋಜನೆ ಜಾರಿಗೆ ಬರಲಿದೆ.
ಬೆಳಗಾವಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರ ಅವರ ಆತಿಥ್ಯದಲ್ಲಿ ಯೋಜನಾ ಜಾರಿಗೆ ತರಲು ನಿರ್ಧರಿಸಲಾಗಿದೆ ಎನ್ನುವ ಬಗ್ಗೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿಗಳಾದ ಡಿ. ಕೆ ಶಿವಕುಮಾರ್ (D.K Shivakumar ) ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ತಿಳಿಸಿದ್ದಾರೆ.
ಇದರೊಂದಿಗೆ ಅದೇ ದಿನ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಪಿಂಕ್ ಸ್ಮಾರ್ಟ್ ಕಾರ್ಡ್ ವಿತರಣೆ (pink smart card distribution) ಮಾಡುವ ಬಗ್ಗೆ ಕೂಡ ಸರ್ಕಾರ ಚಿಂತನೆ ನಡೆಸಿದೆ ಎನ್ನುವ ವಿಚಾರದ ಮಾಹಿತಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಂಚಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳಾಗುವ ಎಲ್ಲರಿಗೂ ಪಿಂಕ್ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಇದರಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಫೋಟೋ ಇರುತ್ತದೆ. ಗೃಹಲಕ್ಷ್ಮಿ ಯೋಜನೆ ಸಹಾಯಧನ 2,000 ಎಂದು ಅದರಲ್ಲಿ ನಮೂದಿಸಲಾಗಿರುತ್ತದೆ.
ಆಗಸ್ಟ್ 27ರಂದು ಅದರ ಪ್ರಕಟಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಹಾಗೆಯೇ ರೇಷನ್ ಕಾರ್ಡ್ ಇಲ್ಲದ ಕಾರಣ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿರುವ ಮಹಿಳೆಯರು ಚಿಂತಿಸಬೇಕಾಗಿಲ್ಲ ಮುಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಮಾಡಿಸಿಕೊಂಡು ಕೂಡ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ 1.03 ಕೋಟಿಗೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ಮೊಬೈಲ್ ಮೂಲಕ ಕೇವಲ 5 ನಿಮಿಷದಲ್ಲಿ ಕಲರ್ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವ ವಿಧಾನ
ಈ ಯೋಜನೆಗೆ ನಿಮ್ಮ ಗ್ರಾಮದಲ್ಲಿ ಯಾರೆಲ್ಲಾ ಅರ್ಹರಾಗಿದ್ದಾರೆ ಎನ್ನುವ ಪಟ್ಟಿಯನ್ನು ನೀವು ತಿಳಿದುಕೊಳ್ಳಬಹುದು. ಅದಕ್ಕಾಗಿ ಈ ಹಂತಗಳನ್ನು ಪಾಲಿಸಿ.
● https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ.
● ಮುಖಪುಟದ ಎಡಭಾಗದಲ್ಲಿ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗಡೆ e-Ration card ಆಯ್ಕೆ ಕಾಣುತ್ತದೆ ಸೆಲೆಕ್ಟ್ ಮಾಡಿ show village list ಮೇಲೆ ಕ್ಲಿಕ್ ಮಾಡಿ.
ಪೇಜ್ ಮೇಲೆ ಒಂದು ಫಾರಂ ರೀತಿ ಕಾಣುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿ ಮತ್ತು ಗ್ರಾಮವನ್ನು ಸೆಲೆಕ್ಟ್ ಮಾಡಿ Go ಮೇಲೆ ಕ್ಲಿಕ್ ಮಾಡಿ.
● ನೀವು ಸೆಲೆಕ್ಟ್ ಮಾಡಿದ ಗ್ರಾಮದಲ್ಲಿ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಯಜಮಾನಿಯರ ಕಂಪ್ಲೀಟ್ ಡೀಟೇಲ್ಸ್ ಕಾಣಿಸುತ್ತದೆ. ಇವರೆಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳಾಗಲು ಅರ್ಹರಿರುತ್ತಾರೆ (ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬಗಳು, ಆದಾಯ ತೆರಿಗೆ ಸಲ್ಲಿಸುವ ಕುಟುಂಬಗಳು, GST ಪೇಯರ್ಸ್ ಕುಟುಂಬಗಳು ಹೊರತುಪಡಿಸಿ).
● ಅಥವಾ ಸರ್ಕಾರದ ಸಹಾಯವಾಣಿ ಸಂಖ್ಯೆಯಾದ 8147500500 ಈ ಸಂಖ್ಯೆಗೆ ಕುಟುಂಬದ ಯಜಮಾನಿಯ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಪಡಿತರ ಚೀಟಿ ಸಂಖ್ಯೆಯನ್ನು SMS ಕಳುಹಿಸುತ್ತಿರುವ ಮೂಲಕ ನೇರವಾಗಿ ನಿಮ್ಮ ಅರ್ಜಿ ಸಲ್ಲಿಕೆ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು.
ಈ ವಿಚಾರವಾಗಿ ಮತ್ತೊಂದು ಮುಖ್ಯವಾದ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಮಂಜೂರಾತಿ ಪತ್ರ ಕೂಡ ವಿತರಣೆ ಮಾಡಲಾಗಿದೆ. ಅದರಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ಹಣ ವರ್ಗಾವಣೆ ಮಾಡುವುದು ಎಂದು ತಿಳಿಸಲಾಗಿದೆ ಹಾಗಾಗಿ ಕುಟುಂಬದ ಯಜಮಾನಿ ಮಹಿಳೆಯರು ಬ್ಯಾಂಕ್ ಖಾತೆಗೆ Aadhar Seeding NPCI Mapping ಮಾಡಿಸಬೇಕು.