ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳಾದ (Guarantee Schemes ) ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ (Gruhalakshmi and Annabhagya Scheme) ಹೆಚ್ಚುವರಿ ಪಡೆದ ಹಣ ಪಡೆಯಬೇಕು ಎಂದರೆ ರೇಷನ್ ಕಾರ್ಡ್ (Ration card) ಕಡ್ಡಾಯ ದಾಖಲೆಯಾಗಿದೆ.
ಅದರಲ್ಲೂ BPL ರೇಷನ್ ಕಾರ್ಡ್ ಇದ್ದವರಿಗೆ ಅನ್ನ ಭಾಗ್ಯ ಯೋಜನೆಯಿಂದ ಪ್ರತಿ ಸದಸ್ಯನಿಗೆ 5 Kg ಪಡಿತರ ಹಾಗೂ 5 Kg ಹೆಚ್ಚುವರಿ ಅಕ್ಕಿ ಹಣ ಸಿಗುತ್ತದೆ. ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಗ್ಯಾರಂಟಿಯೇತರವಾಗಿ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಜಾರಿಗೆ ತರುವ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರೆ BPL ರೇಷನ್ ಕಾರ್ಡ್ ಮಾನದಂಡವಾಗಿದೆ.
ಆಶ್ರಯ ಯೋಜನೆ ಸ್ವಂತ ಮನೆ ಇಲ್ಲದವರಿಗೆ ಉಚಿತ ಸೈಟ್ ಹಂಚಿಕೆ ಆಸಕ್ತರು ಅರ್ಜಿ ಸಲ್ಲಿಸಿ.!
BPL ರೇಷನ್ ಕಾರ್ಡ್ ಇದ್ದವರಿಗೆ ಶೈಕ್ಷಣಿಕ ಶುಲ್ಕಗಳು ಆರೋಗ್ಯ ಚಿಕಿತ್ಸೆ ವೆಚ್ಚ ಇತ್ಯಾದಿಗಳಲ್ಲಿ ವಿನಾಯಿತಿ ಇರುತ್ತದೆ ಹಾಗಾಗಿ BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಸುವವರಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಜನರಿಗೆ BPL ರೇಷನ್ ಕಾರ್ಡ್ ವಿತರಣೆ ಆಗಬೇಕಿದೆ ಆದರೆ ಕೊರೋನ ಕಾರಣ ಮತ್ತು ಕಳೆದ ವರ್ಷ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ ಇದಕ್ಕೆ ತಡೆ ಬಿದ್ದಿದೆ.
ಈಗ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ಮತ್ತು ಇನ್ನಿತರ ತಮ್ಮ ಅವಶ್ಯಕತೆಗಳಿಗಾಗಿ ಶೀಘ್ರವೇ BPL ಕಾರ್ಡ್ ವಿತರಣೆ (BPL Card Distribution) ಮಾಡುವಂತೆ ಮನವಿ ಹೆಚ್ಚಾಗುತ್ತಿದೆ ಮತ್ತು ಈಗಾಗಲೇ ರೇಷನ್ ಕಾರ್ಡ್ ಹೊಂದಿದ್ದರೂ ಹೆಸರು ತಿದ್ದುಪಡಿ, ಅಥವಾ ಸದಸ್ಯರ ಸೇರ್ಪಡೆ, e-KYC ಇನ್ಯಾವುದೇ ಕಾರಣದಿಂದಾಗಿ ತಿದ್ದುಪಡಿ ಮಾಡಿಸಿಕೊಳ್ಳದೆ ಇರುವ ಕಾರಣದಿಂದ.
ಒಂದು ಬ್ರಾಂಚ್ ನಿಂದ ಮತ್ತೊಂದು ಬೇರೊಂದು ಬ್ರಾಂಚ್ ಗೆ ನಿಮ್ಮ ಅಕೌಂಟ್ ಟ್ರಾನ್ಸ್ಫರ್ ಮಾಡುವ ಸುಲಭ ವಿಧಾನ.!
ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಆಗದಿದ್ದವರು ತಿದ್ದುಪಡಿಗಾಗಿ (Rationcatd Correction) ಮತ್ತೊಮ್ಮೆ ಸಮಯ ಅವಕಾಶ ಮಾಡಿಕೊಡಿ ಎಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತಿದ್ದಾರೆ. ಇದೆಲ್ಲದರ ಕುರಿತು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆ.ಎಚ್ ಮುನಿಯಪ್ಪರವರು (K.H Muniyappa) ಸ್ಪಷ್ಟತೆ ನೀಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ವಿಷಯ ಹಂಚಿಕೊಂಡಿರುವ ಅವರು ಶೀಘ್ರದಲ್ಲಿಯೇ BPL ರೇಷನ್ ಕಾರ್ಡ್ ವಿತರಣೆ ಕಾರ್ಯ ನಡೆಯಲಿದೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಈಗಾಗಲೇ ಸಾಕಷ್ಟು ಅವಕಾಶ ಮಾಡಿಕೊಟ್ಟಲಾಗಿದೆ. ನಾನ ಕಾರಣಗಳಿಂದ ತಿದ್ದುಪಡಿ ಮಾಡಿಸಿಕೊಳ್ಳಲಾಗದವರು ಈಗ ಸರಿಪಡಿಸುವುದಕ್ಕಾಗಿ ಶೀಘ್ರದಲ್ಲೇ ಮತ್ತೆ ಅವಕಾಶ ನೀಡಲಾಗುವುದು ಎನ್ನುವ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಸಂಕ್ರಾತಿ ಹಬ್ಬದ ಪ್ರಯುಕ್ತ ರೈತ ಮಹಿಳೆಯರಿಗೆ 12,000 ಗಿಫ್ಟ್ ಮೋದಿ ಸರ್ಕಾರದಿಂದ ಹೊಸ ಯೋಜನೆ.!
ಮತ್ತೊಂದು ಮುಖ್ಯವಾದ ವಿಚಾರವನ್ನು ಇಲ್ಲಿ ಸಚಿವರು ಪ್ರಸ್ತಾಪಿಸಿದ್ದಾರೆ ಅದೇನೆಂದರೆ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವುದಕ್ಕೆ ಕೆಲ ಮಾನದಂಡಗಳನ್ನು ರೂಪಿಸಿದೆ. ಆದರೆ ಅನೇಕರು 2016ರ ಆ BPL ರೇಷನ್ ಕಾರ್ಡ್ ನಿಯಮಗಳನ್ನು ಮೀರಿ ರೇಷನ್ ಕಾರ್ಡ್ ಹೊಂದಿರುವುದು ಬೆಳಕಿಗೆ ಬಂದಿದೆ.
ರಾಜ್ಯವೊಂದಕ್ಕೆ ಇಂತಿಷ್ಟೇ BPL ಕಾರ್ಡ್ ಗಳು ಎನ್ನುವ ಮಿತಿ ಇರುವುದರಿಂದ ಈ ರೀತಿ ಉಳ್ಳವರು BPL Card ಪಡೆದು ಪ್ರಯೋಜನ ಪಡೆದುಕೊಳ್ಳುತ್ತಿರುವುದರಿಂದ ಹೊಸದಾಗಿ BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಸಮಸ್ಯೆ ಆಗುತ್ತಿದೆ ಇದರಿಂದ ನಿಜವಾದ ಫಲಾನುಭವಿಗಳಿಗೆ ವಂಚನೆ ಆಗುತ್ತಿದೆ.
ಆಹಾರ ಇಲಾಖೆ ಅಧಿಕಾರಿಗಳು ಈಗಾಗಲೇ ರಾಜ್ಯದ ಎಲ್ಲಾ BPL ರೇಷನ್ ಕಾರ್ಡ್ ಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ನಿಯಮಾ ಬಾಹಿರವಾಗಿ ಉಳ್ಳ ಕಾಡುಗಳನ್ನು ರದ್ದು ಪಡಿಸಲಿದ್ದಾರೆ (Ration Card Suspend or Cancel) ಎನ್ನುವ ವಿಷಯವನ್ನು ತಿಳಿಸಿದ್ದಾರೆ. ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯುತ್ತಿದ್ದು ಪ್ರತಿ ತಿಂಗಳು ಸಾಕಷ್ಟು ರೇಷನ್ ಕಾರ್ಡ್ ಗಳು ರದ್ದಾಗುತ್ತಿವೆ.
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!
ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ (Ahara website) ಭೇಟಿ ಕೊಟ್ಟು ಈ ಕೆಳಗಿನ ವಿಧಾನದಲ್ಲಿ ನೀವು ರೇಷನ್ ಕಾರ್ಡ್ ಸ್ಥಿತಿ ಪರಿಶೀಲಿಸಿಕೊಂಡು ನಿಮ್ಮ ಕಾರ್ಡ್ ಸಕ್ರಿಯವಾಗಿದೆ ಅಥವಾ ರದ್ದಾಗಿದೆ ಎನ್ನುವುದನ್ನು ಕಾರಣ ಸಮೇತ ಎಂದು ತಿಳಿದುಕೊಳ್ಳಬಹುದು.
* https://ahara.kar.nic.in ಆಹಾರ ಇಲಾಖೆಯ ಈ ವೆಬ್ಸೈಟ್ ಗೆ ಹೋಗಿ, ಇ-ಸರ್ವಿಸ್ (e-service) ಭಾಗದಲ್ಲಿ, ಎಡ ಭಾಗದಲ್ಲಿ ಕಾಣುವ ಇ-ಸ್ಥಿತಿ (e-status) ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ಪಡಿತರ ತಿದ್ದುಪಡಿ ಹಾಗೂ ರದ್ದುಪಡಿ ಬಗ್ಗೆ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ. ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಜಿಲ್ಲಾವಾರು ಪ್ರತ್ಯೇಕ ಲಿಂಕ್ ಕೊಡಲಾಗಿರುತ್ತದೆ, ಕೊಟ್ಟಿರುವ link ಗಳಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.
* ಈಗ ನಿಮ್ಮ ಹಳ್ಳಿಯಲ್ಲಿ ರದ್ದಾಗಿರುವ ಎಲ್ಲಾ ರೇಷನ್ ಕಾರ್ಡ್ ವಿವರವನ್ನು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದು ಅರ್ಥ.