ಸದ್ಯಕ್ಕೆ ದೇಶದ ರಾಜಕಾರಣದಲ್ಲಿ ಎಲ್ಲರ ಚಿತ್ತವು ಫೆಬ್ರವರಿ ಮೊದಲನೇ ವಾರದಲ್ಲಿ ಮಂಡನೆ ಆಗಲಿರುವ ಕೇಂದ್ರದ ಬಜೆಟ್ ನತ್ತ ಇದೆ. ಈಗಾಗಲೇ ಈ ಬಜೆಟ್ ಮಂಡನೆಯು ಮುಂದಿನ ಎರಡು ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು (Parliment Election) ಆಧರಿಸಿ ತಯಾರಾಗುತ್ತಿದೆ ಎನ್ನುವುದು ಜನಸಾಮಾನ್ಯರ ಲೆಕ್ಕಾಚಾರವಾಗಿದೆ.
ಈಗಾಗಲೇ ಬಜೆಟ್ ನಲ್ಲಿ ಸೇರಿಸಲ್ಪಟ್ಟಿರುವ ಯೋಜನೆಗಳ ಕುರಿತು ಕೆಲ ಪ್ರಮುಖ ವಿಷಯಗಳ ಬಗ್ಗೆ ಸುದ್ದಿಗಳು ಕೂಡ ಹರಿದಾಡುತ್ತಿದ್ದು ಒಂದು ಅಧಿಕೃತ ಮೂಲದ ಪ್ರಕಾರವಾಗಿ ರೈತ ಮಹಿಳೆಯರಿಗೂ ಕೂಡ ಒಂದು ವಿಶೇಷವಾದ ಚುನಾವಣೆ ಗಿಫ್ಟ್ (election gift) ಈ ಸಮಯದಲ್ಲಿ ಸಿಗುತ್ತಿದ್ದೆ ಎಂದು ಹೇಳಲಾಗುತ್ತಿದೆ.
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!
ಅದೇನೆಂದರೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆ (Kisan Samman Nidhi Yojane) ನೀಡಲಾಗುತ್ತಿರುವ ಸಹಾಯಧನವನ್ನು ಏರಿಕೆ ಮಾಡಿ ಹಣಕಾಸು ಮಂತ್ರಿಗಳು ಈ ಬಜೆಟ್ ನಲ್ಲಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ರೈತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಈ ವೋಟ್ ಬ್ಯಾಂಕ್ ಭೇಟೆಯಾಗಲೆಂದೇ 2019 ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಅನುಕೂಲ ಮಾಡಿ ಕೊಟ್ಟಿತ್ತು.
ಮೊದಲ ಬಾರಿಗೆ ರೈತರಿಗಾಗಿ ಜಾರಿಗೆ ಬಂದಿದ್ದ ಈ ಸಹಾಯಧನದ ಯೋಜನೆ ದೇಶದಾದ್ಯಂತ ಭರಪೂರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗಲೂ ಇದನ್ನೇ ಅಸ್ತ್ರವಾಗಿಸಿಕೊಂಡು ಮುಂಬರುವ ಚುನಾವಣೆಗಾಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೀಡುತ್ತಿರುವ ಸಹಾಯಧನವನ್ನು ಇನ್ನಷ್ಟು ವಿಸ್ತರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಗೃಹಲಕ್ಷ್ಮಿ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ವಿಧಾನ.! ಇದೊಂದು ನಂಬರ್ ಹಾಕಿ ಸಾಕು.!
ಇಲ್ಲಿವರೆಗೂ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈವರೆಗೂ ನೀಡಲಾಗುತ್ತಿದ್ದ ಮೂರು ಕಂತುಗಳಲ್ಲಿ 6,000 ಸಹಾಯಧನವನ್ನು ಗರಿಷ್ಠ 12,000 ವರೆಗೆ ಏರಿಕೆ ಮಾಡಲಾಗುತ್ತಿದೆಯಂತೆ. ಆದರೆ ಈ ಬಾರಿ ರೈತ ಮಹಿಳೆಯರಿಗೆ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ.2000 ಸಹಾಯಧನ ನೀಡುತ್ತಿರುವ ಮಾದರಿಯಲ್ಲಿ.
ದೇಶದಾದ್ಯಂತ ಎಲ್ಲಾ ರೈತ ಮಹಿಳೆಯರಿಗೂ ಕೂಡ ಪ್ರತಿ ತಿಂಗಳು ರೂ.1000 ಸಹಾಯಧನವನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡಲು ಯೋಜನೆ ಸಿದ್ಧವಾಗಿದೆಯಂತೆ ಮತ್ತು ಎಲ್ಲಾ ಪುರುಷ ರೈತರಿಗೂ ಮೂರು ಕಂತುಗಳಲ್ಲಿ ಸಿಗುತ್ತಿರುವ ಸಹಾಯಧನದ ರೂ.6,000 ಹಣವನ್ನು ನಾಲ್ಕು ಕಂತುಗಳಿಗೆ ವಿಸ್ತರಿಸಿ ಒಂದು ಆರ್ಥಿಕ ವರ್ಷದಲ್ಲಿ ರೂ.8000 ಸಹಾಯಧನವನ್ನು ನೀಡಲು ಯೋಜನೆ ಸಿದ್ಧಪಡಿಸಲಾಗಿದೆ.
ನಿಮ್ಮ ದುಡ್ಡನ್ನು ಬ್ಯಾಂಕ್ ನಲ್ಲಿ ಇಟ್ಟು ಸಾ’ಯಬೇಡಿ.! RBI ಬಳಿ ವಾರಸುದಾರರು ಪಡೆದುಕೊಳ್ಳದೆ ಉಳಿದಿರುವ ಹಣ ಎಷ್ಟು ಸಾವಿರ ಕೋಟಿ ಗೊತ್ತಾ.?
ಬಜೆಟ್ ಮಂಡನೆಯಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು (finance Minister Nirmala Sitharaman) ಅಧಿಕೃತವಾಗಿ ಇದನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ BJP ಸೋಲಿಗೆ ಕಾಂಗ್ರೆಸ್ ಸರ್ಕಾರ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳೇ ಕಾರಣವಾಯಿತು ಎಂದೆ ಭಾವಿಸಲಾಗಿದೆ ಮತ್ತು ಕಾಂಗ್ರೆಸ್ ಸರ್ಕಾರವು ಇದೇ ಅಸ್ತ್ರವನ್ನು ಲೋಕಸಭಾ ಚುನಾವಣೆಯಲ್ಲಿ ಉಪಯೋಗಿಸಲು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ.
ಇದರ ನಡುವೆ ಮುಂದಿನ ಬಜೆಟ್ ಮಂಡನೆ ಮೋದಿ ಸರ್ಕಾರ ಜನಮತ ಸೆಳೆಯಲು ಒಳ್ಳೊಳ್ಳೆ ಯೋಜನೆಗಳನ್ನು ಘೋಷಿಸಲು ಇರುವ ಅವಕಾಶವಾಗಿರುವುದರಿಂದ ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ದೇಶದ ಎಲ್ಲಾ ಜನತೆಗೂ ಮತ್ತು ಎಲ್ಲಾ ವರ್ಗಕ್ಕೂ ಅನುಕೂಲವಾಗುವಂತಹ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ…
2014 ರಿಂದ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ (Narendra Modi) ಅವರು ಪ್ರಧಾನಮಂತ್ರಿ ಉಜ್ವಲ್ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳು.
ಮತ್ತು ಭಾರತದ ಖ್ಯಾತಿಯನ್ನು ವಿಶ್ವದಾದ್ಯಂತ ಬೆಳಗುವಂತಹ ಅನೇಕ ಆರ್ಥಿಕ ಸಮ್ಮೇಳನಗಳು, ರಾಜಕೀಯ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಸೇರಿದಂತೆ ಪುರಾಣ ಪ್ರಸಿದ್ಧ ದೇವಾಲಯಗಳು ಜೀರ್ಣೋದ್ಧಾರ ಮಾಡಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಿ ಭಾರತವನ್ನು ವಿಶ್ವಗುರುವನ್ನಾಗಲು ಬಹಳ ಪ್ರಯತ್ನಿಸುತ್ತಿದ್ದಾರೆ.
ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! SSLC ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಈ ಎಲ್ಲಾ ಒಂದು ದಶಕದ ಪ್ರಯತ್ನವೂ ಇನ್ನೈದು ವರ್ಷಗಳಿಗೆ ಮುಂದುವರೆಯುವ ಅವಕಾಶವನ್ನು ಮತ್ತೊಮ್ಮೆ ಭಾರತೀಯರ ನೀಡಲಿದ್ದಾರಾ ಎನ್ನುವುದಕ್ಕೆ ಲೋಕಸಭಾ ಚುನಾವಣೆ ಯಲ್ಲಿ ಉತ್ತರ ಸಿಗಲಿದೆ, ಕಾದು ನೋಡೋಣ.