ದೇಶದ ಬ್ಯಾಂಕುಗಳಲ್ಲಿ Unclaimed Money ಅಂದರೆ ವಾರಸುದಾರರು ಇರದೇ ಇರುವ ಹಣ 43,000 ಕೋಟಿಯಷ್ಟು ಇದೆ. Inactive ಖಾತೆಗಳಲ್ಲಿರುವ ಹಣ ಒಂದು ಲಕ್ಷ ಕೋಟಿ ಗಡಿ ದಾಟಿದೆ ಇದು ಯಾವುದೇ ತೆರಿಗೆ ಹಣವಲ್ಲ ಸರ್ಕಾರದ ಹಣವು ಅಲ್ಲ ಜನಸಾಮಾನ್ಯರು ಬೆವರು ಸುರಿಸಿ ದುಡಿದ ಪರಿಶ್ರಮದ ಹಣ ಅದು.
ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಇಟ್ಟು ನೀವು 2 ವರ್ಷಗಳ ವರೆಗೆ ಆ ಖಾತೆ ಬಳಸದೆ ಇದ್ದರೆ ಖಾತೆ ಇನ್ ಆಕ್ಟಿವ್ ಆಗುತ್ತದೆ ಮತ್ತು 10 ವರ್ಷ ಆದ ಬಳಿಕ ಅದು RBI ನ Depositor Education fund or Investor education fund ಗೆ ಹೋಗುತ್ತದೆ. ಈ ರೀತಿ ಇನ್ ಆಕ್ಟಿವ್ ಖಾತೆ ಹಣ ಮಾತ್ರ ಅಲ್ಲದೆ ಬ್ಯಾಂಕ್ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿ ನಾಮಿನಿ ಸೂಚಿಸದೆ ಅಥವಾ ಮನೆಯವರಿಗೆ ವಿಷಯವನ್ನು ತಿಳಿಸದೆ ಮೃ’ತ ಪಟ್ಟಿರುವವರ ಹಣ.
ನೀವೇ ಯಾವುದೋ ಕಂಪನಿಯಲ್ಲಿ ಸ್ಯಾಲರಿ ಅಕೌಂಟ್ ಮಾಡಿ ಕೊಟ್ಟಿದ್ದಾಗ ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡೋದು ನಂತರ ಕೆಲಸ ಬಿಟ್ಟ ಮೇಲೆ ಆ ಖಾತೆ ಡೀಟೇಲ್ಸ್ ಕಳೆದುಕೊಂಡು ಹಾಗೆ ಬಿಟ್ಟ ಹಣ ಇನ್ನು ಇತ್ಯಾದಿ ಇತ್ಯಾದಿ ಕಾರಣದಿಂದ RBI ನಲ್ಲಿ Unclaimed ಹಣವಾಗಿ ಸೇರುತಿದೆ. ಈಗ ಇದು ಎಲ್ಲಿದೆ ಇದನ್ನು ಪಡೆದುಕೊಳ್ಳುವುದು ಹೇಗೆ? ಹೀಗಾಗಬಾರದು ಎಂದರೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಒಬ್ಬ ವ್ಯಕ್ತಿ ಇಂದು ಖಾತೆ ತೆರೆದು ಅದರಲ್ಲಿ 5 ಲಕ್ಷ ಹಣ ಇಡುತ್ತಾನೆ ಎಂದುಕೊಳ್ಳೋಣ. ಆ ಖಾತೆ ವಿಷಯ ಮನೆಯಲ್ಲಿ ಹೇಳುವ ಮುನ್ನವೇ ಆತ ಮೃ’ತಪಟ್ಟಿದ್ದ ಎಂದರೆ ಮನೆಯವರಿಗೆ ಆ ವಿಷಯವೇ ಗೊತ್ತಿರುವುದಿಲ್ಲ. ಸರಿಯಾದ ಸಮಯದಲ್ಲಿ ಹೋಗಿ ಬ್ಯಾಂಕ್ ನಲ್ಲಿ ಅವರ ಕುಟುಂಬಸ್ಥರು ಹಣ ಪಡೆದುಕೊಳ್ಳದೇ ಇದ್ದರೆ 2 ವರ್ಷದಲ್ಲಿ ಖಾತೆ ಇನ್ ಆಕ್ಟಿವ್ ಆಗಿ 10 ವರ್ಷದ ಬಳಿಕ RBI ಬಳಿ ಸೇರಿರುತ್ತದೆ.
ಅದರಲ್ಲೂ ಸರ್ಕಾರದ ವಿವಿಧ ಸ್ಕೀಮ್ ಗಳಲ್ಲಿ ಹೂಡಿರುವ ಹಣವಾದ್ದರೆ ಅವರ ಕುಟುಂಬಸ್ಥರಿಗೆ ಸಿಕ್ಕಿದ್ದಿದ್ದರೆ ಅವರ ಲೈಫ್ ಸೆಟಲ್ ಆಗುವಷ್ಟು ಹಣ ಆಗಿರುತ್ತಿತ್ತು. ಆದರೆ ಯಾರಿಗೂ ವಿಷಯ ಗೊತ್ತಿಲ್ಲದ ಕಾರಣ ಅದು ಯಾರ ಬಳಕೆಗೂ ದಕ್ಕದೆ ಹಾಗೆ ಉಳಿಯುತ್ತಿದೆ. ನೀವು ಕೂಡ ನಿಮ್ಮ ತಾತ, ಅಜ್ಜಿ, ಅಮ್ಮ, ಅಪ್ಪ. ಮಡದಿ, ಮಕ್ಕಳು ಇವರ ಹಣ ಈ ರೀತಿ RBI ನ Unclaimed amount ಆಗಿದೆಯೇ ಎನ್ನುವುದನ್ನು ಚೆಕ್ ಮಾಡಲು RBI ಒಂದು ವ್ಯವಸ್ಥೆ ಮಾಡಿದೆ.
ಈಗ ನಾವು ಹೇಳುವ ಈ ವಿಧಾನದ ಮೂಲಕ RBI ನಲ್ಲಿರುವ ವಾರಸುದಾರರು ಇರದ ಹಣದ ಮೂಲ ಪರಿಶೀಲಿಸಿ, ನಿಮ್ಮ ಕುಟುಂಬಸ್ಥರ ಹಣವಿದ್ದರೆ ಪಡೆದುಕೊಳ್ಳಲು ಪ್ರಯತ್ನಿಸಬಹುದು.
* RBI na UDGAM (Unclaimed Deposits Gateway to Access Information) ಪೋರ್ಟಲ್ ನಲ್ಲಿ ನೀವು ಇದನ್ನು ಚೆಕ್ ಮಾಡಬಹುದು. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 2023 ರಿಂದ ಇದು ಆರಂಭಗೊಂಡಿದೆ.
* ಗೂಗಲ್ ನಲ್ಲಿ udgam.rbi.org.in/unclaimed deposits or UDGAM Portal ಎಂದು ಟೈಪ್ ಮಾಡಿ search ಕೊಡಿ
* ಮೊದಲಿಗೆ ನಿಮ್ಮ ವಿವರಗಳನ್ನು ಹಾಕಿ Register ಆಗಿ, ನಂತರ ಮೊಬೈಲ್ ನಂಬರ್ ಹಾಕುವ ಮೂಲಕ log in ಆಗಿ
* Search for Unclaimed deposits ಎನ್ನುವ ಪೇಜ್ ಓಪನ್ ಆಗುತ್ತದೆ. Account holder name ಎಂದು ಇರುವಲ್ಲಿ ನೀವು ಯಾರ ಹಣ ಇರಬಹುದು ಎಂದು ಅನುಮಾನಸುತ್ತಿದ್ದೀರಾ ಅವರ ಹೆಸರು ಹಾಕಿ, ಅವರ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರು ನಂಬರ್ ಇದ್ದರೆ ಹಾಕಬಹುದು ಇಲ್ಲದಿದ್ದಲ್ಲಿ ಅವರ ಹುಟ್ಟಿದ ದಿನಾಂಕ ಹಾಕಿ.
ನಂತರ ಪಕ್ಕದಲ್ಲಿಯೇ ಎಲ್ಲಾ ಬ್ಯಾಂಕ್ ಗಳ ಪಟ್ಟಿ ಕಾಣಿಸುತ್ತದೆ ಅವುಗಳಲ್ಲಿ ಯಾವ ಬ್ಯಾಂಕ್ ನಲ್ಲಿ ಅವರ ಖಾತೆ ಇತ್ತು ಆ ಅನುಮಾನ ಇದ್ದರೆ ಆ ಬ್ಯಾಂಕ್ ಕ್ಲಿಕ್ ಮಾಡಿ ನೋಡಿ, ಇಲ್ಲವಾದಲ್ಲಿ ಆಲ್ ಕ್ಲಿಕ್ ಮಾಡಿ ನೋಡಿದರೆ ಯಾವುದಾದರೂ ಬ್ಯಾಂಕ್ ನಲ್ಲಿ ಅವರ ಖಾತೆ ಇದ್ದು ಅದು in active or Unclaimed ಆಗಿದ್ದರೆ ಅದರ ಡೀಟೇಲ್ಸ್ ಬರುತ್ತದೆ.
* ಬಳಿಕ ನೀವು ಅದನ್ನು ಪಡೆಯಲು ನೀವು ಅವರ ಕುಟುಂಬಸ್ಥರು ಎನ್ನುವುದಕ್ಕೆ ಪುರಾವೆಗಳ ಜೊತೆ ಬ್ಯಾಂಕ್ ನಲ್ಲಿ ಹೋಗಿ ಅರ್ಜಿ ಸಲ್ಲಿಸಿದರೆ RBI ಮೂಲಕ ಬ್ಯಾಂಕ್ ನಿಮಗೆ ಆ ಹಣ ವಾಪಸ್ ಕೊಡುತ್ತದೆ.
ಈ ರೀತಿ ಆಗಬಾರದು ಎಂದರೆ ನಾವು ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆದರು ಅಥವಾ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರು ಅದು ಕುಟುಂಬಸ್ಥರೆಲ್ಲರಿಗೂ ಕೂಡ ತಿಳಿದಿರಬೇಕು. ಅಥವಾ ನಮ್ಮ ನಂಬಿಕಸ್ಥ ಗೆಳೆಯನಿಗಾದರೂ ತಿಳಿದಿರಬೇಕು
ತಪ್ಪದೇ ಎಲ್ಲ ಯೋಜನೆಗಳಿಗೂ ಒಂದರಿಂದ ಐದು ಜನರ ನಾಮಿನಿ ಮಾಡಬೇಕು ಇಲ್ಲವಾದಲ್ಲಿ ಯಾವ ಬ್ಯಾಂಕ್ ನಲ್ಲಿ ಖಾತೆ ಇದೆ ಆ ಖಾತೆ ಸಂಖ್ಯೆ ನಾಮಿನಿ ಯಾರು ಎಲ್ಲವನ್ನು ಮನೆಯಲ್ಲಿ ಒಂದು ಪುಸ್ತಕದಲ್ಲಿ ಬರೆದಿಡಬೇಕು ಅಥವಾ ಎಲ್ಲವನ್ನು ಬರೆದು ಯಾರಿಗೆ ಸೇರಬೇಕು ಎಂದು ವೀಲ್ ಮಾಡಿಸಿದರು ನಡೆಯುತ್ತದೆ. ಆಗ ನಾವು ಕ’ಷ್ಟಪಟ್ಟು ದುಡಿದ ಹಣ ವ್ಯರ್ಥವಾಗದೆ ನಮ್ಮ ಕುಟುಂಬಕ್ಕೆ ಸಿಗುತ್ತದೆ.