ಮನೆಯಲ್ಲಿ ಇದ್ದರೆ ಚಿನ್ನ ಚಿಂತೆಯು ಏತಕೆ ಇನ್ನ ಎನ್ನುವುದು ಅಕ್ಷರಶಃ ಸತ್ಯವಾದ ಮಾತು ಯಾಕೆಂದರೆ ಮನೆಯಲ್ಲಿ ಚಿನ್ನ ಇದ್ದರೆ ಹಣ ಇದ್ದಂತೆಯೇ, ಆಪತ್ಕಾಲದ ಬಂಧು ಎಂದೇ ಚಿನ್ನವನ್ನು ಕರೆಯಲಾಗುತ್ತದೆ. ಯಾಕೆಂದರೆ ಚಿನ್ನ ಇದ್ದರೆ ನಮ್ಮ ಕಷ್ಟದ ಸಮಯಕ್ಕೆ ಅದನ್ನು ಅಡ ಇಟ್ಟು ಸಾಲ ಪಡೆದುಕೊಳ್ಳಬಹುದು.
ಈ ಕಾರಣಕ್ಕಾಗಿ ಚಿನ್ನವನ್ನು ಹೂಡಿಕೆ ಎಂದು ಪರಿಗಣಿಸಿ, ಅನೇಕರು ಖರೀದಿಸುತ್ತಾರೆ ಈಗಾಗಲೇ ಅನೇಕರು ಇದರ ಅನುಭವವನ್ನು ಕೂಡ ಪಡೆದಿರುತ್ತಾರೆ. ನಮ್ಮ ಕುಟುಂಬದಲ್ಲೂ ಕೂಡ ಕಷ್ಟ ಕಾಲದಲ್ಲಿ ಬೇರೆಯವರ ಮುಂದೆ ಕೈ ಚಾಚುವ ಬದಲು ಅವರ ಚಿನ್ನವನ್ನು ತೆಗೆದುಕೊಂಡು ಹೋಗಿ ಅಡ ಇಟ್ಟು ಸಾಲ ಪಡೆದು ನಂತರ ಅದನ್ನು ತೀರಿಸಿ ಬಿಡಿಸಿಕೊಂಡರೆ ಬಂದಿರುವ ಉದಾಹರಣೆ ಇದ್ದೇ ಇರುತ್ತದೆ.
ಈ ರೀತಿ ಚಿನ್ನದ ಮೇಲೆ ಸಾಲ ಮಾಡುವ ಎಲ್ಲರಿಗೂ ಕೂಡ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ ನಾವು ಚಿನ್ನವನ್ನು ಅಡ ಇಡಲು ಈಗ ಅನೇಕ ಮಾರ್ಗಗಳು ಇವೆ. ಖಾಸಗಿ ಹಣಕಾಸು ಸಂಸ್ಥೆಗಳು ಫೈನಾನ್ಸ್ ಸಂಸ್ಥೆಗಳು ಸರ್ಕಾರಿ ವಲಯದ ಬ್ಯಾಂಕ್ ಗಳು ಅಥವಾ ಗಿರವಿ ಅಂಗಡಿಗಳು ಅಥವಾ ಪರಿಚಯಸ್ಥರ ಬಳಿ ಹೀಗೆ ಎಲ್ಲಿ ಸಾಲ ಹೆಚ್ಚು ಸಿಗುತ್ತದೆ, ಎಲ್ಲಿ ತಕ್ಷಣಕ್ಕೆ ಸಾಲ ಸಿಗುತ್ತದೆ ಎಂದು ನೋಡುತ್ತಾರೆ.
ಆದರೆ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ನಾವು ಇಟ್ಟ ಬಂಗಾರಕ್ಕೆ ಅವರು ಅನ್ವಯಿಸುವ ಬಡ್ಡಿದರ ಇದಕ್ಕೆಲ್ಲಾ ಸೂಕ್ತ ದಾಖಲೆಗಳನ್ನು ನೀಡುವಂತಹ ಕಡೆ ಮಾತ್ರ ಚಿನ್ನ ಅಡ ಇಡುವುದು ಸೂಕ್ತ ಇಲ್ಲವಾದಲ್ಲಿ ಮುಂದೆ ಇದರಿಂದ ಸಮಸ್ಯೆ ಎದುರಿಸಬೇಕಾದ ಸನ್ನಿವೇಶ ಬರಬಹುದು ಇಂತಹ ಕಾರಣದಿಂದ ಸಹಕಾರಿ ಬ್ಯಾಂಕುಗಳು ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಚಿನ್ನವನ್ನು ಅಡ ಇಡುತ್ತಾರೆ.
ಈ ರೀತಿಯಾಗಿ ನೀವು ಕೂಡ ನಗರ ಸಹಕಾರಿ ಬ್ಯಾಂಕ್ ಗಳಲ್ಲಿ ಚಿನ್ನ ಅಡ ಇಡುತ್ತಿದ್ದರೆ ನಿಮಗೆಲ್ಲ ಅನುಕೂಲವಾಗುವಂತಹ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಇದುವರೆಗೂ ಕೂಡ ಬ್ಯಾಂಕ್ಗಳಲ್ಲಿ ಚಿನ್ನ ಅಡ ಇರುವುದಕ್ಕೆ ಇದ್ದ ಅನುಕೂಲತೆಗಳಲ್ಲಿ ಒಂದೇ ಒಂದು ಸಮಸ್ಯೆ ಆಗುತ್ತಿತ್ತು, ಪ್ರತಿ ತಿಂಗಳು ಕೂಡ ಅದಕ್ಕೆ ಬಡ್ಡಿ ಅಥವಾ EMI ಒಪ್ಪಂದಕ್ಕೆ ಒಳಪಡಬೇಕಾಗಿತ್ತು.
ನಾವು ಇಟ್ಟ ಚಿನ್ನಕ್ಕೆ ಬ್ಯಾಂಕ್ ಗಳು ನೀಡಿದ ಸಾಲಕ್ಕೆ ಬಡ್ಡಿ ಸಮೇತ ಕಂತುಗಳನ್ನು ನೀಡಿದ ಕಾಲಾವಧಿ ಒಳಗೆ ತೀರಿಸಬೇಕಿತ್ತು ಅಥವಾ ಆ ಹಣಕ್ಕೆ ಅನ್ವಯವಾಗುವಷ್ಟು ಬಡ್ಡಿಯನ್ನು ಪ್ರತಿ ತಿಂಗಳು ಕಟ್ಟಬೇಕಿತ್ತು. ಗರಿಷ್ಠ 2 ಲಕ್ಷದವರೆಗೆ ಈ ವಿಧಾನದಲ್ಲಿ ನಗರ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಸಿಗುತ್ತಿತ್ತು. ಆದರೆ ಈಗ ಸರ್ಕಾರ ಈ ರೀತಿ ಚಿನ್ನದ ಮೇಲೆ ಸಾಲ ಪಡೆಯುವ ಗ್ರಾಹಕರಿಗೆ 4 ಲಕ್ಷದವರೆಗೂ ಬಂಗಾರದ ಮೇಲೆ ಸಾಲ ಪಡೆಯಬಹುದು ಎಂದು ಅನುಮತಿ ನೀಡಿದೆ.
ಹೀಗಾಗಿ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಾದ ಅವಶ್ಯಕತೆ ಇಲ್ಲ ಅವರು ಸಾಲ ಮರು ಪಾವತಿ ಮಾಡುವ ಸಮಯದಲ್ಲಿ ಅವರು ಪಡೆದುಕೊಂಡ ಸಾಲ ಹಾಗೂ ಆ ಸಾಲಕ್ಕೆ ಅಷ್ಟು ದಿನಗಳವರೆಗೆ ಅನ್ವಯಿಸಿದ ಬಡ್ಡಿಯನ್ನು ಒಟ್ಟಿಗೆ ಕಟ್ಟಿ ಅವರ ಚಿನ್ನವನ್ನು ಹಿಂಪಡೆಯಬಹುದು ಎಂದು ತಿಳಿಸಿದೆ. ಈ ಒಂದು ನಿಯಮ ಸಾಕಷ್ಟು ಜನರಿಗೆ ಅನುಕೂಲ ಮಾಡಿಕೊಡಲಿದೆ ಹಾಗಾಗಿ ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.