ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಸಿಕೊಂಡಿರುವ ರಿಸರ್ವ್ ಬ್ಯಾಂಕ್ ದೇಶದ ಎಲ್ಲಾ ಹಣಕಾಸು ಸಂಸ್ಥೆಗಳ ಮೇಲೆ ಹಿಡಿತವನ್ನು ಹೊಂದಿದೆ. ಸಾರ್ವಜನಿಕ ಹಾಗೂ ಖಾಸಗಿ ವಲಯದ ಯಾವುದೇ ಹಣಕಾಸು ಸಂಸ್ಥೆಗಳ ನಿಯಮಗಳನ್ನು ರೂಪಿಸುವ ಮತ್ತು ಗ್ರಾಹಕರಿಗೆ ಸಮಸ್ಯೆ ಆದಾಗ ಮಧ್ಯ ನಿಂತು ಪರಿಹರಿಸುವ, ನೀಡಿದ ಆದೇಶದ ಉಲ್ಲಂಘನೆಯಾದಾಗ ಅವುಗಳಿಗೆ ದಂಡ ವಿಧಿಸುವುದರಿಂದ ಹಿಡಿದು ಮಿತಿಮೀರಿದಾಗ ಲೈಸನ್ಸ್ ಕ್ಯಾನ್ಸಲ್ ಮಾಡುವವರಿಗೆ ಸಂಪೂರ್ಣ ಅಧಿಕಾರವನ್ನು RBI ಹೊಂದಿದೆ.
ಈಗಾಗಲೇ ಅನೇಕ ಬಾರಿ ಇಂತಹ ಕಾರಣಗಳಿಂದ ದೇಶದ ಅನೇಕ ಬ್ಯಾಂಕ್ ಗಳು RBI ನಿಂದ ಅಮಾನತುಗೊಳಗಾದ ಉದಾಹರಣೆಗಳು ಕೂಡ ಇದೆ. ಇದೇ ರೀತಿ ಈಗ RBI ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ (Bank of Baroda) ಆದೇಶವೊಂದನ್ನು ಹೊರಡಿಸಿದೆ. ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರು ತಿಳಿದುಕೊಳ್ಳಲು ಬೇಕಾದ ಮಾಹಿತಿ ಇದಾಗಿತ್ತು ಇದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1945ರ ಸೆಕ್ಷನ್ 35A ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಆಫ್ ಬರೋಡ ಮೇಲೆ ಇಂತಹ ಕ್ರಮವನ್ನು ಜರುಗಿಸಿದೆ ಮತ್ತು ಈ ಆದೇಶದ ಬಗ್ಗೆ ಮಾಹಿತಿಯನ್ನು RBI ಸ್ವತಃ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಪ್ರಕಾರ ವಿಷಯವೇನೆಂದರೆ ಬ್ಯಾಂಕ್ ಆಫ್ ಬರೋಡ ಕೂಡಲೇ ತನ್ನ ಆನ್ಲೈನ್ ಬ್ಯಾಂಕಿಂಗ್ ಅಪ್ಲಿಕೇಶನ್ ಆಗಿರುವಂತಹ Bob World ನಲ್ಲಿ ಹೊಸ ಹೊಸ ಗ್ರಾಹಕರನ್ನು ಆನ್ ಬೋರ್ಡಿಂಗ್ ಮಾಡುವುದನ್ನು ನಿಲ್ಲಿಸಬೇಕು ಎಂಬುದಾಗಿ RBI ಎಚ್ಚರಿಕೆ ನೀಡಿದೆ. ಪ್ರತಿಯೊಂದು ಬ್ಯಾಂಕ್ ಗಳು ಈಗ ತಮ್ಮದೇ ಆದ ಒಂದು ಆನ್ಲೈನ್ ಅಪ್ಲಿಕೇಶನ್ ಹೊಂದಿರುತ್ತವೆ.
ಅವುಗಳ ಮೂಲಕ ಗ್ರಾಹಕರು ಬ್ಯಾಂಕ್ ಗಳಿಕೆ ಹೋಗಿ ಪಡೆಬಹುದಾದ ಬಹುತೇಕ ಅನೇಕ ಸೌಲಭ್ಯಗಳನ್ನು ಕುಳಿತಲ್ಲಿಯೇ ಬೆರಳ ತುದಿಯಲ್ಲಿ ಪಡೆಯಬಹುದು. ಇದರಿಂದ ಗ್ರಾಹಕರ ಸಮಯವೂ ಕೂಡ ಉಳಿತಾಯವಾಗುತ್ತಿತ್ತು. ಹೀಗೆ ಬ್ಯಾಂಕ್ ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲವಾಗುತ್ತಿರುವ ಆನ್ಲೈನ್ ಬ್ಯಾಂಕಿಂಗ್ ಅಪ್ಲಿಕೇಶನ್ ಮೇಲೆ ನಿಯಮ ಹೇರಲು ಕಾರಣ ಕೂಡ ಇದೆ.
ಬ್ಯಾಂಕ್ ಆಫ್ ಬರೋಡದ ಆನ್ಲೈನ್ ಬ್ಯಾಂಕಿಂಗ್ ಅಪ್ಲಿಕೇಶನ್ ನಲ್ಲಿ ಗ್ರಾಹಕರನ್ನು ಆನ್ ಬೋರ್ಡ್ ಮಾಡಿಸಿಕೊಳ್ಳುವುದರಲ್ಲಿ RBI ಲೋಪದೋಶವನ್ನು ಕಂಡು ಹಿಡಿದಿದೆ. ಈ ಹಿಂದೆಯೇ ಇದಕ್ಕೆ ಸಂಬಂಧಿಸಿದಂತೆ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂಬುದಾಗಿ ಬ್ಯಾಂಕಿಗೆ ಸೂಚನೆಯನ್ನು ನೀಡಲಾಗಿತ್ತು ಎಂಬುದನ್ನು ಆದರೆ ಬ್ಯಾಂಕ್ ಈ ಸೂಚನೆಯನ್ನು ನಿರ್ಲಕ್ಷಿಸಿದೆ.
ಹೀಗಾಗಿ ಮತ್ತೊಮ್ಮೆ ಗ್ರಾಹಕರನ್ನು ಆನ್ ಬೋರ್ಡ್ ಮಾಡುವುದಕ್ಕಿಂತ ಮುಂಚೆ ಅಪ್ಲಿಕೇಶನ್ ನಲ್ಲಿ ಇರುವಂತಹ ಕೊರತೆಗಳನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳುವಂತೆ ಆದೇಶ ನೀಡಿ ಸದ್ಯಕ್ಕೆ ಅದನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್ ಆಫ್ ಬರೋಡಾಗೆ RBI ಆದೇಶ ನೀಡಿದೆ ಎಂದು ತಿಳಿದು ಬಂದಿದೆ.
ಈ ಆದೇಶದಿಂದಾಗಿ ಈಗಾಗಲೇ ಆನ್ ಬೋರ್ಡ್ ಆಗಿರುವಂತಹ ಯಾವುದೇ ಗ್ರಾಹಕರಿಗೂ ಕೂಡ ತೊಂದರೆ ಆಗದಂತೆ ಪ್ರತಿಯೊಂದು ವ್ಯವಸ್ಥೆಯನ್ನು ಕೂಡ ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ಆದೇಶದಲ್ಲಿ ಹೇಳಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಂದರೆ ಬ್ಯಾಂಕ್ ನಿಂದ ಈ ಅವ್ಯವಸ್ಥೆ ಸರಿಪಡಿಸುವವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಆನ್ ಬೋರ್ಡ್ ಆಗುವಂತಹ ಹೊಸ ಗ್ರಾಹಕರಿಗೆ ತೊಂದರೆ ಆಗಬಹುದು ಆದರೆ ಈಗಾಗಲೇ ಆನ್ ಬೋರ್ಡ್ ಆಗಿರುವಂತಹ ಗ್ರಾಹಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ನಂಬಬಹುದಾಗಿದೆ.