ರೇಷನ್ ಕಾರ್ಡ್ (Ration card) ಈಗ ಎಷ್ಟು ಮುಖ್ಯ ದಾಖಲೆ ಆಗಿದೆ ಎಂದರೆ ಈ ಹಿಂದೆಯೂ ಕೂಡ ಇದಕ್ಕೆ ಇಷ್ಟೇ ಮಾನ್ಯತೆ ಇತ್ತು. ಆದರೆ ಗ್ಯಾರೆಂಟಿ ಯೋಜನೆಗಳು(Gyatantee Schemes) ಬಂದ ಮೇಲೆ ಇದರ ಮಹತ್ವ ದುಪ್ಪಟ್ಟು ಮನವರಿಕೆಯಾಗಿದೆ ಎಂದೇ ಹೇಳಬಹುದು.
ಈ ಹಿಂದೆಯೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುತ್ತಿದ್ದ ಯೋಜನೆಗಳ ಪ್ರಯೋಜನವನ್ನು ಪಡೆಯಲು BPL ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯವೆಂಬ ನಿಯಮ ಹೇರಿತ್ತು ಮತ್ತು ವೈದ್ಯಕೀಯ ಖರ್ಚು ವೆಚ್ಚದಲ್ಲಿ ಮತ್ತು ಶೈಕ್ಷಣಿಕ ಖರ್ಚು ವೆಚ್ಚದಲ್ಲಿ BPL ರೇಷನ್ ಕಾರ್ಡ್ ಹೊಂದಿದವರಿಗೆ ವಿನಾಯಿತಿ ಕೂಡ ಸಿಗುತ್ತಿತ್ತು.
ಈಗ ಸಿದ್ದರಾಮಯ್ಯ (Siddaramaih) ನೇತೃತ್ವದ ರಾಜ್ಯ ಸರ್ಕಾರವು ಚುನಾವಣೆ ಪೂರ್ವವಾಗಿ ಕೊಟ್ಟಿದ್ದ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ನಾಲ್ಕು ಗ್ಯಾರೆಂಟಿ ಯೋಜನೆಗಳು ಜಾರಿಯಾಗಿದೆ. ಇದರಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಅನುದಾನ ಪಡೆಯಬೇಕು ಎಂದರೆ ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರಲೇಬೇಕು.
ರೇಷನ್ ಕಾರ್ಡ್ ಹೊಂದಿರುವುದರ ಜೊತೆಗೆ ಕೇಂದ್ರ ಸರ್ಕಾರವು 2016ರ ನಂತರ ಹೊರಡಿಸಿದ ಹೊಸ ರೇಷನ್ ಕಾರ್ಡ್ ಮಾರ್ಗಸೂಚಿ ಪ್ರಕಾರ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಆ ಕುಟುಂಬದ ಹಿರಿಯ ಮಹಿಳೆ ಇರಬೇಕು ಈಗ ರಾಜ್ಯ ಸರ್ಕಾರದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಹಣವು ಕೂಡ ಆ ರೀತಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರ ಕಾರ್ತಿಕ DBT ಮೂಲಕ ವರ್ಗಾವಣೆ ಆಗುತ್ತಿವೆ.
ಆದರೆ ಈ ಪ್ಯಾಟರ್ನ್ ಪ್ರಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡಿಲ್ಲದೆ ಇರುವವರು, ರೇಷನ್ ಕಾರ್ಡ್ ಗೆ ಸೇರ್ಪಡೆ ಆಗದೆ ಇರುವವರು, ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ ಮಾಡಿಸದೆ ಇರುವವರು, ರೇಷನ್ ಕಾರ್ಡ್ ನಲ್ಲಿ ಹೆಸರು ಅಥವಾ ಇನ್ನಿತರ ವ್ಯತ್ಯಾಸಗಳಾಗಿರುವುದನ್ನು ತಿದ್ದುಪಡಿ ಮಾಡಿಸಿಕೊಳ್ಳದೆ ಇದ್ದವರು, ಇವರಿಗೆಲ್ಲ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರುತ್ತಿಲ್ಲ.
ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯ ಹಣವು APL ಕಾರ್ಡ್ ಹೊಂದಿರುವುದು ಕೂಡ ಪಡೆಯಬಹುದಾದ್ದರಿಂದ ರೇಷನ್ ಕಾರ್ಡ್ ತಿದ್ದುಪಡಿ ಆಗದ ಕಾರಣ ಪಡೆಯಲಾಗದವರು ಹಾಗೂ ರೇಷನ್ ಕಾರ್ಡ್ ಇಲ್ಲದೆ ಈ ಯೋಜನೆಗಳ ಪ್ರಯೋಜನದಿಂದ ವಂಚಿತರಾಗಿರುವವರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ.
ಸರ್ಕಾರವು ಕೂಡ ಇದಕ್ಕೆ ಅನೇಕ ಬಾರಿ ಸ್ಪಂದಿಸಿ ತಿದ್ದುಪಡಿಗಾಗಿ ಹಾಗೂ ಹೊಸ ರೇಷನ್ ಕಾರ್ಡ್ ಬಗ್ಗೆ ಅರ್ಜಿ ಆಹ್ವಾನ ಮಾಡಿದೆ ಅಂತಿಮವಾಗಿ ಈಗ ಸರ್ಕಾರ ವತಿಯಿಂದ ಮತ್ತೊಮ್ಮೆ ಸಿಹಿ ಸುದ್ದಿ ಇದೆ. ಅದೇನೆಂದರೆ ಈ ಹಿಂದೆ ಯಾರೆಲ್ಲ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರು ಅವರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಆಗುತ್ತಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಸ್ಥಗಿತಗೊಂಡಿದ್ದ ರೇಷನ್ ಕಾರ್ಡ್ ವಿಲೇವಾರಿ ಕಾರ್ಯ ಹಾಗೂ ಇತ್ತೀಚಿಗೆ ಹೊಸ ಅರ್ಜಿಗಳು ಸಲ್ಲಿಕೆ ಆಗಿರುವ ಪರಿಶೀಲನೆ ಕಾರ್ಯವು ಶೀಘ್ರವಾಗಿ ಸಾಗುತ್ತಿದೆ ಸರ್ಕಾರವು ನೀತಿ ಸಂಹಿತೆ ಜಾರಿಯಾದ ಸಮಯದಲ್ಲಿ 3 ಲಕ್ಷಗಳಷ್ಟು ರೇಷನ್ ಕಾರ್ಡ್ ಗಳ ಅರ್ಜಿಯನ್ನು ಹೊಂದಿತ್ತು.
ಈಗ ಅವುಗಳ ವಿತರಣೆ ಹೊಣೆಗಾರಿಕೆ ಹೊತ್ತಿದೆ. ಇದರೊಂದಿಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವ ಅವರಿಗೂ ಕೂಡ ಡಿಸೆಂಬರ್ 30ರ ಒಳಗೆ ರೇಷನ್ ಕಾರ್ಡ್ ವಿತರಣೆ ಮಾಡಲು ಶ್ರಮಿಸುತ್ತಿದೆ ಅಂದುಕೊಂಡಂತೆ ಎಲ್ಲಾ ಕಾರ್ಯಗಳು ಸಮೀಕ ಸರಿಯಾಗಿ ಆದರೆ ರೇಷನ್ ಕಾರ್ಡ್ ಬಗ್ಗೆ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಡಿಸೆಂಬರ್ ಅಂತ್ಯಕ್ಕೆ ಹೊಸ ರೇಷನ್ ಕಾರ್ಡ್ ಸಿಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.